ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಹಣ , ಬೆಳ್ಳಿಯ ಆಭರಣದ ಆಮಿಷದ ಹೊಳೆ ಹರಿಯುತ್ತಿದೆ..
ಪ್ರತಿ ಶಿಕ್ಷಕರಿಗೆ 25 ಸಾವಿರದಿಂದ 30 ಸಾವಿರ ಮೌಲ್ಯದ ಗಿಫ್ಟ್ ಹಂಚಿಕೆ ನಡೆಯುತ್ತಿದೆ.
ಮಾಜಿ ಎಂಎಲ್ ಸಿ ಕಾಂಗ್ರೆಸ್ ನ ಪುಟ್ಟಣ್ಣ ಹೆಸರಿನಲ್ಲಿ ಗಿಫ್ಟ್ ಹಂಚಿಕೆ ನಡೆದಿದೆ ಜೆಡಿಎಸ್ ಕಾರ್ಯಕರ್ತರು ಆರೋಪ ಮಾಡಿದ್ದಾರೆ. ರಾಮನಗರದಲ್ಲಿ ಶಿಕ್ಷಕರಿಗೆ ಹಂಚುತ್ತಿರುವ ಗಿಫ್ಟ್ ಪೋಟೊಗಳು ವೈರಲ್ ಆಗಿದೆ. ಕೆಲ ಶಿಕ್ಷಕರು ತಮಗೆ ನೀಡಿರುವ ಬೆಳ್ಳಿ ಬಟ್ಟಲು ಹಾಗೂ ಬೆಲೆ ಬಾಳುವ ಗಿಫ್ಟ್ ಗಳ ಪೋಟೊಗಳನ್ನು ಹಂಚಿಕೊಂಡಿದ್ದಾರೆ. ಫೆಬ್ರವರಿ16 ರಂದು ನಡೆಯಲಿರುವ ಪದವೀಧರ ಕ್ಷೇತ್ರಕ್ಕೆ ಮತದಾನ ನಡೆಯಲಿದೆ.