ಬೆಂಗಳೂರು : ಮಂಡ್ಯ ಸ್ಪರ್ಧೆ ಬಗ್ಗೆ ನಿಖಿಲ್ ಕುಮಾರ್ಸ್ವಾಮಿ ಶಾಕಿಂಗ್ ರಿಯಾಕ್ಷನ್ ಕೊಟ್ಟಿದ್ದಾರೆ. ನಾನು ಮಂಡ್ಯ ಕ್ಷೇತ್ರ ಅಕಾಂಕ್ಷಿ ಅಲ್ಲ. ನಾನು ಹಿಂದೆಯೂ ಹೇಳಿದ್ದೆ. ನಾನು ಯೂಟರ್ನ್ ಹೊಡೆಯುವ ಗಿರಾಕಿ ಅಲ್ಲವೇ ಅಲ್ಲ. 2019ರಲ್ಲಿ ಅಭ್ಯರ್ಥಿಯಾಗಿದ್ದೆ ಆಗ ಸೋತಿದ್ದೆ. ಈಗಲೂ ನನ್ನ ಸ್ಪರ್ಧೆಗೆ ಮಂಡ್ಯ ಮುಖಂಡರ ಒತ್ತಾಯ ಇದೆ. ನಾನು 4 ದಿನಗಳಿಂದಲೂ ಗಮಿಸುತ್ತಿದ್ದೇನೆ ನಾನು ಯುಟರ್ನ್ ಹೊಡೆದಿಲ್ಲ. ನನ್ನ ನಿರ್ಧಾರ ಬಗ್ಗೆ ನನಗೆ ಸ್ಪಷ್ಟತೆ ಇದೆ. ಈ ಒತ್ತಡಕ್ಕಾಗಿ ನಾನು ಮಂಡ್ಯದ ಭಾಗದಲ್ಲಿ ಓಡಾಡುತ್ತಿದೆ ಮೈತ್ರಿ ಬಲಬಡಿಸಬೇಕು, ಮತ್ತೆ ಮೋದಿಯವರು ಪ್ರಧಾನಿಯಾಗಬೇಕು, ನನ್ನ ಗಮನ 28 ಕ್ಷೇತ್ರಗಳ ಕಡೆಯೂ ಇರುತ್ತೆ. ಬೆಂಗಳೂರಿನಲ್ಲಿ ನಿಖಿಲ್ ಕುಮಾರ್ ಸ್ವಾಮಿ ಹೇಳಿದರು.
ಇನ್ನೂ ಪ್ರೀತಂಗೌಡ ವಿರೋಧ ವಿಚಾರ ಇದಕ್ಕೆಲ್ಲ ಕೆಂದ್ರ ನಾಯಕರು ನಮ್ಮ ಪಕ್ಷದ ವರಿಷ್ಠರು ಅತೀ ಶೀಘ್ರದಲ್ಲೇ ಎಲ್ಲ ಪ್ರಶ್ನೆಗಳಿಗೂ ತೆರೆ ಎಳೆಯುತ್ತಾರೆ. ಅಲ್ಲಿವರೆಗೂ ತಾಳ್ಮೆಯಿಂದ ಕಾಯಬೇಕು. ಕಾಲವೇ ಎಲ್ಲದಕ್ಕೂ ಉತ್ತರ ಕೊಡುತ್ತೆ ಎಂದರು.