ಮೈಸೂರು : ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಲೋಕಸಭಾ ಚುನಾವಣೆಯನ್ನು ಮುಂದಿಟ್ಟುಕೊಂಡು ಮೈಸೂರಿಗೆ ಆಗಮಿಸಿದ್ದಾರೆ. ಇವರನ್ನು ಸ್ವಾಗತಿಸಲು ವಿಮಾನ ನಿಲ್ದಾಣದಲ್ಲಿ ಕ್ಲಸ್ಟರ್ ನಾಯಕರ ಲೈನ್ಅಪ್ ಮಾಡಲಾಗಿತ್ತು. ಈ ವಿಚಾರದಲ್ಲಿ ಸಂಸದ ಪ್ರತಾಪ್ ಸಿಂಹ ಹಾಗೂ ಮಾಜಿ ಶಾಸಕ ಪ್ರೀತಮ್ ಗೌಡ ವಿಚಾರವಾಗಿ ವಾಗ್ವಾದ ನಡೆದಿದೆ.

ಅಮಿತ್ ಶಾ ಸ್ವಾಗತಕ್ಕೆ ಕ್ಲಸ್ಟರ್ ನಾಯಕರ ಲೈನ್ಆಪ್ ಉಸ್ತುವಾರಿಯನ್ನು ಮಾಜಿ ಶಾಸಕ ಪ್ರೀತಮ್ ಗೌಡ ಹೊತ್ತುಕೊಂಡಿದ್ದರು. ಆದರೆ ಪ್ರತಾಪ್ ಸಿಂಹ ಮತ್ತಿತ್ತರರನ್ನು ಕಡೆಗಣಿಸಲಾಗಿದೆ. ತಮ್ಮನ್ನು ಸೇರಿದಂತೆ ಮೈಸೂರು ಕ್ಲಸ್ಟರ್ನ ಪ್ರಮುಖ ನಾಯಕರನ್ನು ಪಟ್ಟಿಗೆ ಸೇರಿಸಿಕೊಳ್ಳುವ ವಿಚಾರದಲ್ಲಿ ನಿರ್ಲಕ್ಷ್ಯ ತೋರಿದ ಹಿನ್ನೆಲೆ ಪ್ರತಾಪ್ ಸಿಂಹ ಅವರು ಪ್ರೀತಮ್ ಗೌಡ ಅವರನ್ನು ನೇರವಾಗಿ ಪ್ರಶ್ನಿಸಿದ್ದಾರೆ.
ಪ್ರತಾಪ್ ಸಿಂಹ ಅವರ ಪ್ರಶ್ನೆಗೆ ತಾನು ಮಾಡಿದ್ದೇ ಸರಿ ಅನ್ನೋ ರೀತಿಯಲ್ಲಿ ಪ್ರೀತಮ್ಗೌಡ ಅವರು ಉತ್ತರ ಕೊಟ್ಟಿದ್ದಾರೆ. ಈ ವೇಳೆ ಪ್ರತಾಪ್ ಸಿಂಹ ಹಾಗೂ ಪ್ರೀತಮ್ಗೌಡ ನಡುವೆ ಮಾತಿನ ಚಕಮಕಿ ನಡೆದಿದೆ. ಕೂಡಲೇ ಮಧ್ಯಪ್ರವೇಶಿಸಿದ ಬಿಜೆಪಿ ನಾಯಕರು ಇಬ್ಬರು ನಾಯಕರನ್ನು ಸಮಾಧಾನ ಮಾಡಿದ್ದಾರೆ.


