ಬೆಂಗಳೂರು : ವಿವಿ ಹಾಸ್ಟೆಲ್ ನಲ್ಲಿ ಕಳಪೆ ಆಹಾರ ಊಟದಲ್ಲಿ ಪದೇ ಪದೇ ಹುಳು ಪತ್ತೆಯಾಗುತ್ತಲೇ ಇದೆ. ಹೀಗಾಗಿ ಕಳಪೆ ಅಹಾರ ತಿಂದು ವಿದ್ಯಾರ್ಥಿಗಳಿಗೆ ಅನಾರೋಗ್ಯ ಉಂಟಾಗಿದೆ.
ಅವ್ಯವಸ್ಥೆ ಇದ್ರೂ ಅಡ್ಜಸ್ಟ್ ಮಾಡಿಕೊಳ್ಳಿ ಎಂದು ಬ್ಯಾಕ್ ಟು ಬ್ಯಾಕ್ ನಿರ್ಲಕ್ಷ್ಯ ಮಾಡುತ್ತಿದ್ದ ಹಾಸ್ಟೆಲ್ ವಾರ್ಡನ್‌ನ ವಿರುದ್ಧ ಮತ್ತೆ ವಿದ್ಯಾರ್ಥಿಗಳು ಆಕ್ರೋಶ ಹೋರಹಾಕಿದ್ದಾರೆ,ಪದೇ ಪದೇ ಊಟದಲ್ಲಿ ಹುಳುಪತ್ತೆ, ಇನ್ನು ಹಾಸ್ಟೆಲ್ ವಾರ್ಡನ್ ಸಸ್ಪೆಂಡ್ ಮಾಡಿಲ್ಲ. ಕುಲಪತಿಗಳು ಮತ್ತು ಉನ್ನತ ಶಿಕ್ಷಣ ಸಚಿವರು ಹಾಸ್ಟೆಲ್ ವಾರ್ಡನ್ ಮೇಲೆ ಶಿಸ್ತು ಕ್ರಮ ಜರುಗಿಸಲು ಮೀನಾ ಮೇಷ ಮಾಡುತ್ತಿದ್ದಾರೆ.
ಉಳುಪತ್ತೆ ಹಿನ್ನೆಲೆ ಹಾಸ್ಟೆಲ್ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದ್ದು, ಹಾಸ್ಟೆಲ್ ವಾರ್ಡನ್, ಕುಡಪತಿಗಳು ಫೋನ್ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.