ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಡಾ. ಕೆ ಸುಧಾಕರ್ಗೆ ಟಿಕೆಟ್ ಕೊಡುವಂತೆ ಬೆಂಬಗಲಿರು ಆಗ್ರಹಿಸಿದ್ದಾರೆ. ಇಂದು ಚಿಕ್ಕಬಳ್ಳಾಪುರ ನಗರದ ಪತ್ರಕರ್ತರ ಭವನದಲ್ಲಿ ಒಕ್ಕಲಿಗರ ಸಂಘಟನೆಯಿಂದ ಸುದ್ದಿಗೋಷ್ಠಿ ನಡೆಸಿದ್ದು, ಡಾ. ಕೆ ಸುಧಾಕರ್ಗೆ ಟಿಕೆಟ್ ನೀಡುವಂತೆ ಬಿಜೆಪಿ ಹೈಕಮಾಂಡ್ಗೆ ಬೆಂಬಲಿಗರು ಒತ್ತಡ ಹೇರಿದರು.

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ 5 ಲಕ್ಷಕ್ಕೂ ಅಧಿಕ ಒಕ್ಕಲಿಗ ಮತದಾರರಿದ್ದಾರೆ. ಡಾ.ಕೆ.ಸುಧಾಕರ್ ಅಭಿವೃದ್ಧಿಯ ಹರಿಕಾರ. ಕಷ್ಟ ಕಾಲದಲ್ಲಿ ಬಿಜೆಪಿ ಪಕ್ಷಕ್ಕೆ ಬಂದವರು. ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಕಾರಣಕರ್ತರು. ಇವರ ಶ್ರಮವನ್ನು ಅರಿತು ಅವರಿಗೇ ಟಿಕೆಟ್ ಕೊಡುವಂತೆ ಒತ್ತಾಯಿಸಿದರು.
ಸುಧಾಕರ್ ಗೆ ಟಿಕೆಟ್ ಕೊಟ್ರೆ ಒಕ್ಕಲಿಗರು ಅವರನ್ನು ಗೆಲ್ಲಿಸಿಕೊಳ್ಳುತ್ತಾರೆ ಎಂಬ ಭರವಸೆ ನೀಡಿದ್ರು. ಪಕ್ಷ ಯಾರಿಗೇ ಟಿಕೆಟ್ ಕೊಟ್ರೂ ಕೆಲಸ ಮಾಡ್ತೇವೆ. ಆದ್ರೆ ನಮ್ಮೆಲ್ಲರ ಆಶಯ ಡಾ.ಕೆ ಸುಧಾಕರ್ ಮೇಲಿದೆ. ಹೀಗಾಗಿ ಡಾ. ಕೆ ಸುಧಾಕರ್ ಅವರಿಗೆ ಬಿಜೆಪಿ ಟಿಕೆಟ್ ಕೊಡುವಂತೆ ಬೆಂಬಲಿಗರು ಆಗ್ರಹಿಸಿದರು.


