Wednesday, April 30, 2025
34.5 C
Bengaluru
LIVE
ಮನೆರಾಜಕೀಯರಾಜ್ಯದ ನೆರವನ್ನ ಕೇಂದ್ರದ ಬಳಿ ಕೇಳೋದೆ ದೇಶ ದ್ರೋಹ ಅಂತಾದರೆ ಅದು ಅಹಂಕಾರ ; ದಿನೇಶ್...

ರಾಜ್ಯದ ನೆರವನ್ನ ಕೇಂದ್ರದ ಬಳಿ ಕೇಳೋದೆ ದೇಶ ದ್ರೋಹ ಅಂತಾದರೆ ಅದು ಅಹಂಕಾರ ; ದಿನೇಶ್ ಗುಂಡೂರಾವ್

ಆನೇಕಲ್ : ರಾಜ್ಯದ ಪಾಲು ಹತ್ತುವರ್ಷಗಳಲ್ಲಿ ಎಷ್ಟಿತ್ತೋ ಅಷ್ಟೇ ಇಂದೂ ಕೇಂದ್ರ ನೀಡ್ತಿದೆ. ಆದರೆ ಪ್ರತಿ ವರ್ಷ ರಾಜ್ಯದಿಂದ ಕೇಂದ್ರಕ್ಕೆ ನೆರವು ತೆರಿಗೆ ರೂಪದಲ್ಲಿ ಹರಿದು ಹೋಗ್ತಲೇ ಇದೆ. ಇದನ್ನ ಪ್ರಶ್ನಿಸಿದರೆ ನಾವು ದೇಶ ವಿಭಜಕರಾಗ್ತೀವಿ ಅಥವಾ ದೇಶದ್ರೋಹಿಗಳಾಗ್ತೀವಿ ಇಂದು ಎಂತ ಅಹಂಕಾರದ ಪರಮಾವಧಿ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕೇಂದ್ರದ ವಿರುದ್ದ ಆಕ್ರೋಶ ಹೊರಹಾಕಿದರು.

ಹೇಳೊಕೆ ಮುಂದುವರೆಸಿ’ ನಾವು ರಾಜ್ಯಕ್ಕೆ ಆಗುವ ಅನ್ಯಾಯ ಪ್ರಶ್ನೆಸಿದರೆ ಅದು ಹೇಗೆ? ಎಂದು ಉತ್ತರಿಸುವುದ ಬಿಟ್ಟು ಏಕಾಏಕಿ ದೇಶದ್ರೋಹದ ಪಟ್ಟ’ ಕಟ್ಟುವ ಮೂಲಕ ವಿಷಯಾಂತರ ಮಾಡುವ ಅಹಂಕಾರವನ್ನು ಬಿಜೆಪಿ ಬೆಳೆಸಿಕೊಂಡಿದೆ. ಈ ನಿಟ್ಟಿನಲ್ಲಿ ಸಂಸದ ಡಿಕೆ ಸುರೇಶ್ ತುಸು ಭಾವೋದ್ವೇಗದಲ್ಲಿ ಮಾತಾಡಿರಬಹುದು ಅದು ಅಷ್ಟು ಸಮಂಜಸವಲ್ಲ ಅಂತ ಹೇಳಿದ್ದೇವೆ. ಆದರೆ ಕೇಳಿದ ವಿಚಾರದಲ್ಲಿ ಸ್ಪಷ್ಟತೆಯಿದೆ ಅದಕ್ಕೆ ಬಿಜೆಪಿ ಸಂಸದರು ಉತ್ತರಿಸಬಹುದಿತ್ತು. ಯಾವೊಬ್ಬ ನಾಯಕನಿಗೂ ಮೋದಿ ಎದುರು ಪ್ರಶ್ನಿಸುವ ದೈರ್ಯವಿಲ್ಲ. ಬದಲಾಗಿ ಆಡಳಿತ ಸರ್ಕಾರದ ವಿರುದ್ದ ಹರಿಹಾಯುತ್ತಿದ್ದಾರೆ.

ಮೊದಲು ರಾಜ್ಯದ ತೆರಿಗೆ ಹಣ 44 ,000 ಕೋಟಿಯಷ್ಟೇ ಹತ್ತು ವರ್ಷದಿಂದ ಅನುದಾನ ಇಂದಿಗೂ ನೀಡ್ತಿದೆ,
ಬರಗಾಲದಲ್ಲಿ ರಾಜ್ಯವಿದೆ ರಾಜ್ಯಕ್ಕೆ ಹಣಕಾಸು ಆಯೋಗದಿಂದ ಬಿಡಿಗಾಸು ಬರುತ್ತಿಲ್ಲ. ಬದಲಿಗೆ ಉತ್ತರ ಪ್ರದೇಶದಿಂದ 100 ರೂ ಪಡೆದು 300 ರೂ ನೀಡುತ್ತಿರುವುದರ ಹಿನ್ನಲೆ ಏನು ಮೋದಿ ಮಾತೆತ್ತಿದರೆ ‘ಸಬ್ ಕಾ ಸಾಥ್ ಸಬ್ ಕಾ ವಿಶ್ವಾಸ್ ‘ ಅಂತಾರೆ ದೇಶದಲ್ಲಿಯೇ ಅತ್ಯಧಿಕ ತೆರಿಗೆ ಮೂಲಕ ಹಣ ಕಟ್ಟುತ್ತಿರುವ ರಾಜ್ಯ ನಮ್ಮದು ಹೀಗಾಗಿ ಸಹಜವಾಗಿ ಒಕ್ಕೂಟದ ವ್ಯವಸ್ಥೆಯನ್ನು ಹೊಂದಿರುವ ನಾವು ನಮ್ಮ ಪಾಲನ್ನು ಕೇಳುತ್ತಿದ್ದೇವೆ ಎಂದು ಜಂತರ್ ಮಂತರ್ ಪ್ರತಿಭಟನೆಯನ್ನು ಸಮರ್ಥಿಸಿಕೊಂಡರು.

ಇನ್ನು ಇತ್ತೀಚಿನ ಬಜೆಟ್ ಘೋಷಣೆಯಲ್ಲೂ ರಾಜ್ಯಕ್ಕೆ ಘನಘೋರ ಅನ್ಯಾಯವನ್ನು ಪ್ರಶ್ನಿಸಿದರೆ ದೇಶ ವಿಭಜನೆಯಂತಹ ದಿಕ್ಕು ತಪ್ಪಿಸುವ ಹುನ್ನಾರ ಬಿಜೆಪಿಗರು ಮಾಡುತ್ತಿದ್ದಾರೆ.ಬರಗಾಲದಲ್ಲೂ ಎನ್ಆರ್ಇಜಿಎ ಮೂಲಕ ವರ್ಷಕ್ಕೆ ಒಂದು ಕುಟುಂಬಕ್ಕೆ 150 ದಿನ‌ಕೆಲಸ ನೀಡಬೇಕೆಂಬ ಕೇಂದ್ರದ ನಿಯಮದಂತೆ ಈಗಲೂ ಕೂಲಿ‌ ನೀಡುತ್ತಿಲ್ಲ. ಇವೆಲ್ಲ ಉಳಿದ ಸಂಸದರಿ ಕಣ್ಣಿಗೆ ಕಾಣಿಸುವುದಿಲ್ಲವೇ ಎಂದು ಪ್ರಶ್ನಿಸಿದರು. ಎಲ್ಲೆಲ್ಲಿ ಬಿಜೆಪಿ ಸರ್ಕಾರವಿದೆಯೋ ಅವಿರಿಗೆ ಮಾತ್ರ ಅನುದಾನ, ಇನ್ನಿತರೆ ಪಕ್ಷ ಆಡಳಿತ ಸರ್ಕಾರಕ್ಕೆ ಕಿರುಕುಳ ನೀಡುವುದೇ ಕೇಂದ್ರದ ಕೆಲಸವಾದರೆ ಹೇಗೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್​ ಪ್ರಶ್ನಿಸಿದರು.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments