ಮಂಡ್ಯ : ರಾಮಜನ್ಮ ಭೂಮಿ ಅಯೋಧ್ಯೆಯಲ್ಲಿ ರಾಮನ ಪ್ರಾಣಪ್ರತಿಷ್ಟಾಪನೆ ಮಾಡಿದ ಹಿನ್ನಲೆ ಪ್ರಧಾನಿ ನರೇಂದ್ರ ಮೋದಿಗೆ ಬಿಜೆಪಿ ಕಾರ್ಯಕರ್ತರು ಅಭಿನಂದನಾ ಪತ್ರ ಬರೆದಿದ್ದಾರೆ. ಮಂಡ್ಯದ ವಿವಿ ನಗರದ ಪೋಸ್ಟ್ ಆಫೀಸ್ ಬಳಿ ಸಿಟಿ ಮಂಜುನಾಥ್ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಪತ್ರಗಳನ್ನು ಬರೆದು ಅಂಚೆ ಮೂಲಕ ಕಳುಹಿಸಿಕೊಟ್ಟಿದ್ದಾರೆ.
ಜಗತ್ತಿನಾದ್ಯಂತ ಇರುವ ಹಿಂದುಗಳ ಐದು ಶತಮಾನಗಳ ಕನಸು ನನಸು ಮಾಡಿದ್ದಾರೆ. ಮತ್ತೊಮ್ಮೆ ರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ರಾಮನ ಪ್ರಾಣ ಪ್ರತಿಷ್ಠಾಪನೆ ಮಾಡಿದ್ದಾರೆ. ಕನಸು ನನಸು ಮಾಡಿದ ನರೇಂದ್ರ ಮೋದಿಯವರ ಗಟ್ಟಿ ಹಾಗೂ ದೃಢ ನಿರ್ಧಾರಕ್ಕೆ ಅಭಿನಂದನ ಪತ್ರ ಅಭಿಯಾನ ಮಾಡ್ತಿದ್ದೇವೆ. ಮತ್ತಷ್ಟು ಹಿಂದೂ ದೇವಾಲಯಗಳು ಪ್ರತಿಷ್ಠಾಪನೆಯಾಗಲಿ. ಹಿಂದೂಗಳ ಕನಸು ನನಸು ಮಾಡಿದ ಪ್ರಧಾನಿ ನರೇಂದ್ರ ಮೋದಿಗೆ ನಮ್ಮ ಅಭಿನಂದನೆಗಳು ಎಂದು ಕಾರ್ಯಕರ್ತರು ತಿಳಿಸಿದ್ದಾರೆ.