ಬೆಂಗಳೂರು : ಬೆಂಗಳೂರಿನಲ್ಲಿ ವಾಸ ಮಾಡುವವರಿಗೆ ತಿಂಗಳು ಕೊನೆ ಬಂತು ಅಂದರೆ ಸಂಕಟ  ಶುರುವಾಗುತ್ತೆ.? ಕೈಯಲ್ಲಿ ಇರುವ ಕಾಸು ಖಾಲಿಯಾಗುತ್ತೆ,  ಮತ್ತೆ ಸ್ಯಾಲರಿ ಆಗುವ ತನಕ ಕಾಯಬೇಕು . ಸ್ಯಾಲರಿ ಬಂತು ಅಂದರೆ ಖರ್ಚು ಮೇಲೆ ಖರ್ಚು ಮತ್ತೆ ಹೊಸ ತಿಂಗಳು ಬಂತು ಅಂದರೆ ಮನೆ ಬಾಡಿಗೆ, ಕರೆಂಟ್ ಬಿಲ್, ನೀರ್ ಬಿಲ್ ನಾನಾ ರೀತಿಯ ಖರ್ಚು ಬರುತ್ತಲೇ ಇರುತ್ತವೆ. ಇಲ್ಲಾ ಲೆಕ್ಕ ಹಾಕಿದರೆ ಸ್ಯಾಲರಿ ಫುಲ್ ಖಾಲಿ ಆಗುತ್ತೆ.

ಬಾಡಿಗೆ ಮನೆಯಲ್ಲಿ ವಾಸಿಸುವ ಗೃಹಜ್ಯೋತಿ ಬಳಕೆದಾರರಿಗೆ ಗುಡ್ ನ್ಯೂಸ್ ಇನ್ಮುಂದೆ ಮನೆ ಬದಲಾಯಿಸಿದ್ರು ಸುಲಭವಾಗಿ ಪಡೆಯಬಹುದು ಗೃಹಜ್ಯೋತಿ ಲಾಭ,  ಬಾಡಿಗೆ ಮನೆಯವರಿಗೆ ಅನುಕೂಲವಾಗುವಂತೆ ಯೋಜನೆಯಲ್ಲಿ ಬದಲಾವಣೆ ತರಲಾಗಿದೆ.

ಬಾಡಿಗೆದಾರರು ಉಚಿತ ವಿದ್ಯುತ್ ಗೆ ಆಧಾರ್ ನಂಬರ್ ನೀಡಿ ನೋಂದಣಿ ಮಾಡಿಸುತ್ತಾರೆ . ಮನೆಯನ್ನು ಖಾಲಿ ಮಾಡುವಾಗ ಹಳೆ ಮನೆ ನೋಂದಣಿ ರದ್ದುಗೊಳಿಸಲು ಪರದಾಡಬೇಕಿತ್ತು,  ಹಳೆ‌ ನೋಂದಣಿ ರದ್ದು ಮಾಡಲು ಕಚೇರಿಯಿಂದ ಕಚೇರಿಗೆ ಅಲೆಯಬೇಕಿತ್ತು ,, ಈಗ ಸೇವಾಸಿಂಧು ಪೋರ್ಟಲ್ ಮೂಲಕವೇ ನೋಂದಣಿ ರದ್ದು ಮಾಡಲು ಅವಕಾಶ ಮಾಡಲಾಗಿದೆ.

ಹೊಸ ಬಾಡಿಗೆ ಮನೆ‌ಗೆ ಸುಲಭವಾಗಿ ನೋಂದಣಿ ಮಾಡಿಕೊಳ್ಳುವ ಸೌಲಭ್ಯ ಇದಕ್ಕಾಗಿ ಅನುಕೂಲವಾಗಲು De-Link ಅವಕಾಶ ಮಾಡಿಕೊಟ್ಟ ಇಂಧನ ಇಲಾಖೆ ಸೇವಾಸಿಂಧು ಪೋರ್ಟಲ್ ನಲ್ಲಿ ಬದಲಾವಣೆಗೆ ಅವಕಾಶ ಆದ್ರೆ ಸದ್ಯ ಸೇವಾಸಿಂಧು ಪೋರ್ಟಲ್ ನಲ್ಲಿ ಇನ್ನೂ ಇದಕ್ಕಿಲ್ಲ ಅವಕಾಶ ಇನ್ನೊಂದು ವಾರದಲ್ಲಿ ಈ ಆಯ್ಕೆ ಬರುವ ಸಾಧ್ಯತೆ ಇದೆ.

By admin

Leave a Reply

Your email address will not be published. Required fields are marked *

Verified by MonsterInsights