ವರದಿ : ಚಂದ್ರು ಶಿಡ್ಲಘಟ್ಟ, ಚಿಕ್ಕಬಳ್ಳಾಪುರ
ಚಿಕ್ಕಬಳ್ಳಾಪುರ : ಅಪರೂಪಕ್ಕೆ ಎಂಬಂತೆ ಚಿಕ್ಕಬಳ್ಳಾಪುರ ನಗರಸಭೆಯಲ್ಲಿ ಇಂದು ಸದಸ್ಯರ ಸಭೆ ಕರೆಯಲಾಗಿತ್ತು. ಅಧ್ಯಕ್ಷ ಉಪಾಧ್ಯಕ್ಷರ ಅವಧಿ ಮುಗಿದ ನಂತ್ರ, ಜಿಲ್ಲಾಧಿಕಾರಿ ಆಡಳಿತಾಧಿಕಾರಿ ಜವಾಬ್ದಾರಿ ತೆಗೆದುಕೊಂಡ ನಂತರ ಈ ಸಭೆ ಮಹತ್ವ ಪಡೆದಿತ್ತು. ಇಂದು ಕರೆದಿದ್ದ ಆಯವ್ಯಯ ಪೂರ್ವಭಾವಿ ಸಭೆಗೆ ಸರ್ವ ಸದಸ್ಯರ ಸಭೆ ಕರೆಯಲಾಗಿತ್ತು. ಇಡೀ ಸಭೆಯ ಉದ್ದಕ್ಕೂ ಸಮಸ್ಯೆಗಳ ಆಗರವನ್ನು ಸದಸ್ಯರು ಬಿಚ್ಚಿಟ್ರು.
ಒಬ್ರು ನಮ್ಮ ವಾರ್ಡ್ ನಲ್ಲಿ ಸ್ವಚ್ಚತೆ ಇಲ್ಲ ,ನೀರಿಲ್ಲ ಅಂತಾ ಗೋಳಾಡಿದ್ರೆ ಮತ್ತೆ ಕೆಲವರು ನಮ್ಮ ಭಾಗದ ನಿವೇಶನಗಳಿಗೆ ಅಧಿಕೃತ ಪಿಐಡಿ ನಂಬರ್ ಕೊಟ್ಟಿಲ್ಲ ಅಂತಾ ಅಲವತ್ತುಕೊಂಡ್ರು. ಇನ್ನು ಯುಜಿಡಿ ಕ್ಲೀನ್ ಮಾಡೋ ಯಂತ್ರ ಕೆಲಸಕ್ಕೆ ಬಾರದಂತಾಗಿದ್ದು, ಹೊಸ ಯಂತ್ರ ಖರೀದಿಸುವಾಗ 8000 ಲೀಟರ್ ಸಾಮರ್ಥ್ಯದ ಯಂತ್ರ ಖರೀದಿಸಲು ಆಗ್ರಹಿಸಿದ್ರು. ಹಲವು ಭಾಗಗಳಲ್ಲಿ ಬೀದಿ ದೀಪಗಳು ಇಲ್ಲದ ಬಗ್ಗೆ ಗಮನ ಸೆಳೆಯಲಾಯಿತು.
ಬ್ಲೀಚಿಂಗ್ ಪೌಡರ್ ಗಾಗಿ ಆರು ತಿಂಗಳು ಕಾಯಬೇಕು ಅಂತಾ ಮಹಿಳಾ ಸದಸ್ಯೆ ಒಬ್ಬರು ಅಲವತ್ತುಕೊಂಡ್ರು. ಶವಸಂಸ್ಕಾರ ಮತ್ತು ಮೃತ ದೇಹದ ದಹನಕ್ಕೆ ಬೇಕಾದ ವಾಹನ ಖರೀದಿಸಬೇಕು ಅಂತಾ ಕೋರಿದ್ರು. ಸರ್ಕಾರದಿಂದ ಇಡೀ ನಗರದ ಮರು ಸರ್ವೆ ಕಾರ್ಯ ಮುಗಿದಿದೆ. ಆದ್ರೂ ನಮಗೆ ಖಾತೆ ಮಾಡಿಕೊಡುತ್ತಿಲ್ಲ. ಅನ್ನೋ ಚರ್ಚೆ ಇಡೀ ಸದಸ್ಯರು ಮಾಡಿದ್ರು. ಕಳೆದ ತಿಂಗಳಷ್ಟೇ ಕರೆದಿದ್ದ ಸಭೆಗೆ ಸಂಪೂರ್ಣ ಗೈರಾಗಿದ್ದ ಸದಸ್ಯರು ಇಂದಿನ ಸಭೆಗೆ ಸಂಪೂರ್ಣ ಮೆಜಾರಿಟಿಯಲ್ಲಿ ಸದಸ್ಯರು ಹಾಜರಾಗಿದ್ದರು.
8 ಬಿಜೆಪಿ, 2 ಜೆಡಿಎಸ್, 16 ಕಾಂಗ್ರೆಸ್, 5 ಪಕ್ಷೇತರ ಸದಸ್ಯರನ್ನು ಒಳಗೊಂಡ 31 ಸದಸ್ಯರ ನಗರಸಭೆ ಇದಾಗಿದೆ. ಕಳೆದ ಸಾಲಿನಲ್ಲಿ 58 ಕೋಟಿ ಗಾತ್ರದ ಬಹುದೊಡ್ಡ ಆಯವ್ಯಯ ಸಿದ್ದಪಡಿಸಲಾಗಿತ್ತು. ಈ ಬಾರಿ ಆದಾಯಕ್ಕೆ ತಕ್ಕಂತೆ ಬಜೆಟ್ ರೂಪಿಸಲು ಜಿಲ್ಲಾಧಿಕಾರಿ ಹಾಗೂ ನಗರಸಭೆ ಆಡಳಿತಾಧಿಕಾರಿಯೂ ಆಗಿರುವ ಪಿ.ಎನ್ ರವೀಂದ್ರ ಸಭೆಯಲ್ಲಿ ಮನವಿ ಮಾಡಿದ್ರು.