Thursday, January 29, 2026
22.8 C
Bengaluru
Google search engine
LIVE
ಮನೆರಾಜ್ಯಓಲಾ- ಉಬರ್ ಟ್ಯಾಕ್ಸಿ ಕಂಪನಿಗಳ ಕಳ್ಳಾಟಕ್ಕೆ ಬಿತ್ತು ಬ್ರೇಕ್

ಓಲಾ- ಉಬರ್ ಟ್ಯಾಕ್ಸಿ ಕಂಪನಿಗಳ ಕಳ್ಳಾಟಕ್ಕೆ ಬಿತ್ತು ಬ್ರೇಕ್

ಬೆಂಗಳೂರು : ಓಲಾ- ಉಬರ್ ಟ್ಯಾಕ್ಸಿ, ಆ್ಯಪ್​ ಆಧಾರಿತ ಅಗ್ರಿಗೇಟರ್​​​ ಕಂಪನಿಗಳ ಕಳ್ಳಾಟಕ್ಕೆ ಸಾರಿಗೆ ಇಲಾಖೆ ಬ್ರೇಕ್​ ಹಾಕಲು ಹೊಸ ಅಸ್ತ್ರ  ಪ್ರಯೋಗಿಸುತ್ತಿದೆ. ಸಿಲಿಕಾನ್‌ ಸಿಟಿ ಸೇರಿದಂತೆ ರಾಜ್ಯಾದ್ಯಂತ ಏಕರೂಪ ಪ್ರಯಾಣ ದರದ ಅಸ್ತ್ರ ಪ್ರಯೋಗಿಸದ ಸಾರಿಗೆ ಇಲಾಖೆ, ಟ್ಯಾಕ್ಸಿ ಪ್ರಯಾಣ ಮತ್ತು ಸಾಗಾಣಿಕೆ ದರಗಳನ್ನ ಪರಿಷ್ಕರಣೆ ಮಾಡಿ ಸಾರಿಗೆ ಇಲಾಖೆ ಆದೇಶಿಸಿದೆ. ವಿವಿಧ ಮಾದರಿಯ ಟ್ಯಾಕ್ಸಿಗಳಿಗೆ ಒಂದೇ ಮಾದರಿಯ ದರ ನಿಗದಿಪಡಿಸಿ ಆದೇಶ ಹೊರಡಿಸಿದೆ. ಆದೇಶದ ತಕ್ಷಣದಲ್ಲೇ ಅನ್ವಯವಾಗುವಂತೆ ಆದೇಶ ಹೊರಡಿಸಿದ ಸಾರಿಗೆ ಇಲಾಖೆ ಅಧೀನ ಕಾರ್ಯದರ್ಶಿ ಪುಷ್ಪ ಆದೇಶಿಸಿದೆ.

10 ಲಕ್ಷ ಕ್ಕಿಂತ ಕಡಿಮೆ ಇರುವ ವಾಹನಗಳಿಗೆ ಕನಿಷ್ಠ 4 ಕಿ‌.ಮೀಟರ್ ಗೆ, ಪ್ರತಿ ಕಿ.ಮೀಟರ್ ಗೆ 24 ರೂ. ಹಾಗೂ 10 ಲಕ್ಷದಿಂದ 15 ಲಕ್ಷದವರಿಗೆ ಕನಿಷ್ಠ ದರ 115 ರೂ. ಪ್ರತಿ ಕಿ.ಮೀಟರ್ ಗೆ 28 ರೂ. ನಿಗದಿ ಪಡಿಸಿದೆ. 15 ಲಕ್ಷ ಮೇಲ್ಪಟ್ಟ ವಾಹನಗಳಿಗೆ ಕನಿಷ್ಠ ದರ 130, ಪ್ರತಿ ಕಿ.ಮೀಟರ್ ಗೆ 32 ರೂ ನಿಗದಿ. ಲಗೇಜ್ ದರ ಮೊದಲಿನ 120 ಕೆಜಿ ಗೆ ಉಚಿತ ನಂತರ 30 ಗ್ರಾಂಗೆ 7 ರೂ. ನಿಗದಿ. ಕಾಯುವಿಕೆ ದರ ಮೊದಲು 5 ನಿಮಿಷವರಿಗೆ ಉಚಿತ ನಂತರ ಪ್ರತಿ ನಿಮಿಷಕ್ಕೆ 1 ರೂ. ಹಾಗೂ ರಾತ್ರಿ 12 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಸಂಚಾರ ಮಾಡುವ ಟ್ಯಾಕ್ಸಿ ಗಳ ಮೇಲೆ, 10 ರಷ್ಟು ಹೆಚ್ಚುವರಿ ಹಾಗೂ ಜಿಎಸ್ಟಿ ಟೋಲ್ ಶುಲ್ಕವನ್ನ ಪ್ರಯಾಣಿಕರಿಂದ ವಸೂಲಿ ಮಾಡಬಹುದು.

ಇನ್ಮೇಲೆ ಸಮಯದ ಆಧಾರದ ಮೇಲೆ ವಸೂಲಿ ಮಾಡುವಂತಿಲ್ಲ. ಸರ್ಕಾರ ನಿಗದಿಪಡಿಸಿರೋ ದರಗಳನ್ನ ಮಾತ್ರ ಪಡೆಯಬೇಕು. ಇಲ್ಲವಾದ್ರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸಾರಿಗೆ ಇಲಾಖೆ ಎಚ್ಚರಿಕೆ ನೀಡಿದೆ. 2021ರಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಪ್ರಾಧಿಕಾರ ವಾಹನಗಳ ಮೌಲ್ಯ ಆಧರಿಸಿ ದರ ನಿಗದಿ ಮಾಡಿತ್ತು. ಸಿಟಿ ಟ್ಯಾಕ್ಸಿ ಸೇವೆ ಎ, ಬಿ, ಸಿ, ಡಿ ಎಂದು ವರ್ಗೀಕರಿಸಿ 2021ರ ಏಪ್ರಿಲ್ 1ರಿಂದ ಅನ್ವಯವಾಗುವಂತೆ‌ ನಿಗದಿ ಮಾಡಿತ್ತು. ಆದರೆ ಪ್ರಾಧಿಕಾರ ನಿಗದಿಪಡಿಸಿರುವ ದರಕ್ಕಿಂತ 3-4 ಪಟ್ಟು ಹೆಚ್ಚು ಹಣ ವಸೂಲಿ ಮಾಡಲಾಗುತ್ತಿದೆ ಎಂದು  ಟ್ಯಾಕ್ಸಿ ಸೇವೆಯಲ್ಲಿ ಜನರಿಂದ ವ್ಯಾಪಕ ದೂರು ಕೇಳಿಬಂದಿದೆ. ಹೀಗಾಗಿ ಅಗ್ರಿಗೇಟರ್‌ ಕಂಪನಿ ಹಾಗೂ ಇತರೆ ಟ್ಯಾಕ್ಸಿ ಚಾಲಕರ ಆಟಾಟೋಪಕ್ಕೆ ಬ್ರೇಕ್‌ ಹಾಕಲು ಏಕರೂಪದ ದರ ನಿಗದಿಪಡಿಸಿ ಸಾರಿಗೆ ಇಲಾಖೆ ಆದೇಶಿಸಿದೆ.

 

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments