ಧೀಮಂತ ರಾಜಕಾರಿಣಿ, ಬಿಜೆಪಿ ಭೀಷ್ಮ, ಮಾಜಿ ಉಪಪ್ರಧಾನಿ ಶ್ರೀ ಎಲ್. ಕೆ. ಆಡ್ವಾಣಿ ಅವರಿಗೆ ಭಾರತ ರತ್ನ ಪ್ರಶಸ್ತಿ ಘೋಷಣೆ ಮಾಡಿರುವುದು ಅತ್ಯಂತ ಸ್ವಾಗತಾರ್ಹ ಎಂದು ಆರ್ ಅಶೋಕ್ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ತಮ್ಮ ರಥಯಾತ್ರೆಯ ಮೂಲಕ ಭಾರತೀಯರ ಸಾಂಸ್ಕೃತಿಕ ಅಸ್ಮಿತೆಯನ್ನ ಬಡಿದೆಬ್ಬಿಸಿ, ಬಿಜೆಪಿಯನ್ನ ತಳಮಟ್ಟದಿಂದ ಕಟ್ಟಿ ಬೆಳೆಸುವ ಮೂಲಕ ಈ ದೇಶಕ್ಕೆ ಪರ್ಯಾಯ ರಾಜಕೀಯ ಶಕ್ತಿ ನೀಡಿದ ಶ್ರೀ ಅಡ್ವಾಣಿ ಅವರು ಸ್ವಾತಂತ್ರೋತ್ತರ ಆಧುನಿಕ ಭಾರತ ನಿರ್ಮಾಣದಲ್ಲಿ ಅತ್ಯಂತ ನಿರ್ಣಾಯಕ ಪಾತ್ರ ವಹಿಸಿದ ನಾಯಕರಲ್ಲಿ ಅಗ್ರಗಣ್ಯರು.
ರಾಷ್ಟ್ರೀಯತೆ, ತಾವು ನಂಬಿದ ಸಿದ್ಧಾಂತ, ಸಾರ್ವಜನಿಕ ಜೀವನದಲ್ಲಿ ಇರಬೇಕಾದ ಪ್ರಾಮಾಣಿಕತೆ ಇವುಗಳಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳದ ಅಡ್ವಾಣಿ ಅವರಿಗೆ ಭಾರತ ರತ್ನ ಸಂದಿರುವುದು ಪ್ರಶಸ್ತಿಯ ಗರಿಮೆ ಹೆಚ್ಚಿಸಿದೆ ಎಂದರೆ ತಪ್ಪಾಗಲಾರದು.