ಬೆಂಗಳೂರು : ಕರ್ನಾಟಕದಲ್ಲಿ ಗೃಹಜ್ಯೋತಿ ಯೋಜನೆ ಅನುಷ್ಠಾನವು ಯಶಸ್ವಿಗೊಂಡ ಹಿನ್ನೆಲೆಯಲ್ಲಿ ನೆರೆಯ ತೆಲಂಗಾಣ ರಾಜ್ಯದ ತೆಲಂಗಾಣ ರಾಜ್ಯ ದಕ್ಷಿಣ ವಿದ್ಯುತ್ ವಿತರಣಾ ಕಂಪನಿಯ (TSSPDCL) ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಮುಷರಫ್ ಅಲಿ ಫರುಕಿ ಮತ್ತು ಅವರ ತಂಡ ತಮ್ಮ ರಾಜ್ಯದಲ್ಲಿ ಉಚಿತ ವಿದ್ಯುತ್ ಯೋಜನೆಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಬೆಸ್ಕಾಂ ನಿಗಮ ಕಚೇರಿಗೆ ಭೇಟಿ ನೀಡಿದರು.

ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾದ ಮಹಾಂತೇಶ ಬೀಳಗಿ, ಬೆಸ್ಕಾಂನ ಹಣಕಾಸು ನಿರ್ದೇಶಕರಾದ ದರ್ಶನ್ ಜೆ. ಬೆಸ್ಕಾಂನ ಐಟಿ ಹಾಗೂ ಕಂದಾಯ ವಿಭಾಗದ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಯೋಜನೆ ಕುರಿತು ಮಾಹಿತಿ ಪಡೆದರು. ಎಸ್.ಎಸ್.ಪಿ.ಡಿ.ಸಿ.ಎಲ್ (TSSPDCL) ನ ನಿರ್ದೇಶಕರಾದ (ವಾಣಿಜ್ಯ) ಶ್ರೀ ಕೆ. ಕಮಲು, ಸಿಜಿಎಂ – ಐಟಿ ವಿಭಾಗದ ವಿ. ಶಿವಾಜಿ, ಸಿಜಿಎಂ (ಹಣಕಾಸು) ವಿಭಾಗದ ಪಿ. ಕೃಷ್ಣ ರೆಡ್ಡಿ, ಸಿ.ಮಾದೇವ ರೆಡ್ಡಿ, ಸಂಗರೆಡ್ಡಿ ಉಪಸ್ಥಿತರಿದ್ದರು.


