Friday, September 12, 2025
27.7 C
Bengaluru
Google search engine
LIVE
ಮನೆಸಿನಿಮಾಮಾರ್ಚ್​ ತನಕ ಕೆಲಸ ಮಾಡಲ್ಲ ಪ್ರಭಾಸ್ ​: ಸ್ಪಷ್ಟವಾಗಿ ಕಾರಣ ತಿಳಿಸಿದ ಪ್ರಭಾಸ್ :

ಮಾರ್ಚ್​ ತನಕ ಕೆಲಸ ಮಾಡಲ್ಲ ಪ್ರಭಾಸ್ ​: ಸ್ಪಷ್ಟವಾಗಿ ಕಾರಣ ತಿಳಿಸಿದ ಪ್ರಭಾಸ್ :

ಸಿನಿಮಾ ನ್ಯೂಸ್ :  ಟಾಲಿವುಡ್​ ಸ್ಟಾರ್​ ನಟ ಪ್ರಭಾಸ್​ ಅವರು ಈಗ ಹಲವು ಪ್ರಾಜೆಕ್ಟ್​ಗಳಲ್ಲಿ ಬ್ಯುಸಿ ಆಗಿದ್ದಾರೆ. ಬಹುನಿರೀಕ್ಷಿತ ‘ರಾಜಾ ಸಾಬ್​​’, ‘ಕಲ್ಕಿ 2898 ಎಡಿ’ ಮುಂತಾದ ಚಿತ್ರಗಳಲ್ಲಿ ಅವರು ಅಭಿನಯಿಸುತ್ತಿದ್ದಾರೆ. ನಂತರ ‘ಸ್ಪಿರಿಟ್​’ ಚಿತ್ರ ಸೆಟ್ಟೇರಲಿದೆ. ಈ ಎಲ್ಲ ಕೆಲಸಗಳು ಇದ್ದರೂ ಸಹ ಅವರು ವೇಗವಾಗಿ ಸಿನಿಮಾ ಮಾಡಲು ರೆಡಿ ಇಲ್ಲ. ಅವರು  ಈ ನಿರ್ಧಾರದ ಹಿಂದೆ ಒಂದು ಕಾರಣವಿದೆ.

ನಟ ಪ್ರಭಾಸ್​ ಅವರು ‘ಸಲಾರ್​’ (Salaar) ಸಿನಿಮಾದ ಯಶಸ್ಸಿನಿಂದ ಖುಷಿ ಆಗಿದ್ದಾರೆ. 2023ರ ಡಿಸೆಂಬರ್​ 22ರಂದು ‘ಸಲಾರ್​’ ಬಿಡುಗಡೆ ಆಗಿ ಉತ್ತಮ ಕಲೆಕ್ಷನ್​ ಮಾಡಿತ್ತು.  ಅದಕ್ಕೂ ಮುನ್ನ ತೆರೆಕಂಡಿದ್ದ ‘ಆದಿಪುರುಷ್​’ ಸಿನಿಮಾದಿಂದ ಪ್ರಭಾಸ್​ (Prabhas) ಅವರು ಸೋಲುಂಡಿದ್ದರು. ಹಾಗಾಗಿ ‘ಸಲಾರ್​’ ಚಿತ್ರದ ಗೆಲುವು ಅವರಿಗೆ ಹೊಸ ಚೈತನ್ಯ ನೀಡಿತು. ಹಾಗಂತ ಮುಂದಿನ ಸಿನಿಮಾಗಳ ಕೆಲಸಗಳನ್ನು ಅವರು ಅವಸರದಲ್ಲಿ ಮುಗಿಸುತ್ತಿಲ್ಲ. ಬದಲಿಗೆ ಕೆಲವು ವಾರಗಳ ಕಾಲ ಬ್ರೇಕ್​ ತೆಗೆದುಕೊಳ್ಳಲು ಪ್ರಭಾಸ್​ ನಿರ್ಧರಿಸಿದ್ದಾರೆ . ಮಾರ್ಚ್​ ತನಕ ಪ್ರಭಾಸ್​ ವಿಶ್ರಾಂತಿ ಪಡೆಯಲಿದ್ದಾರೆ.

ಪ್ರಭಾಸ್​ ಅವರ ಕೈಯಲ್ಲಿ ಈಗ ಹಲವು ಪ್ರಾಜೆಕ್ಟ್​ಗಳಿವೆ. ‘ಕಲ್ಕಿ 2898 ಎಡಿ’, ‘ರಾಜಾ ಸಾಬ್​​’ ಮುಂತಾದ ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ. ಬಳಿಕ ‘ಸ್ಪಿರಿಟ್​’ ಸಿನಿಮಾ ಸೆಟ್ಟೇರಲಿದೆ. ಇಷ್ಟೆಲ್ಲ ಕೆಲಸಗಳು ಇದ್ದರೂ ಕೂಡ ಪ್ರಭಾಸ್​ ಅವರು ವೇಗವಾಗಿ ಸಿನಿಮಾ ಮಾಡಲು ಸಿದ್ಧರಿಲ್ಲ. ಅವರ ಈ ನಿರ್ಧಾರಕ್ಕೆ ಒಂದು ಪ್ರಮುಖ ಕಾರಣ ಇದೆ. ಅದೇನೆಂದರೆ, ಆರೋಗ್ಯದ ಕಡೆಗೆ ಗಮನ ನೀಡಬೇಕು ಎಂದು ಅವರು ನಿರ್ಧರಿಸಿದ್ದಾರೆ.
ಪ್ರಭಾಸ್​ ಅವರಿಗೆ ಕೆಲವು ಆರೋಗ್ಯ ಸಮಸ್ಯೆಗಳಿವೆ. ಈಗಾಗಲೇ ಸರ್ಜರಿ ಮಾಡಿದ್ದರೂ ಕೂಡ ಅದರಿಂದ ಅವರು ಸಂಪೂರ್ಣವಾಗಿ ಚೇರಿಸಿಕೊಂಡಿಲ್ಲ. ಹಾಗಾಗಿ ಇನ್ನೊಂದು ಸರ್ಜರಿಗಾಗಿ ಅವರು ಯೂರೋಪ್​ಗೆ ತೆರಳಲಿದ್ದಾರೆ ಎಂದು ಕೆಲವೆಡೆ ವರದಿ ಆಗಿದೆ.

ಪ್ರಭಾಸ್​ ಅವರನ್ನು ಬ್ಯಾಕ್​ ಟು ಬ್ಯಾಕ್​ ಕಿರುತೆರೆಯಲ್ಲಿ ನೋಡಬೇಕು ಎಂಬುದು ಫ್ಯಾನ್ಸ್​ ಆಸೆ. ಆದರೆ ಅವರು ವಿಶ್ರಾಂತಿಗೆ ಹೆಚ್ಚು ಸಮಯ ತೆಗೆದುಕೊಂಡರೆ ಸಿನಿಮಾ ಬಿಡುಗಡೆ ವಿಳಂಬ ಆಗುವುದು ಗ್ಯಾರಂಟಿ. ಈಗ ಪ್ರಭಾಸ್​ ಅವರಿಗೆ 44 ವರ್ಷ ವಯಸ್ಸು. ಸದ್ಯಕ್ಕಂತೂ ಅವರು ಮದುವೆ ಬಗ್ಗೆ ಆಲೋಚನೆ ಮಾಡಿಲ್ಲ. ಆದಷ್ಟ ಬೇಗ ಅವರು ವೈವಾಹಿಕ ಜೀವನಕ್ಕೆ ಕಾಲಿಡಲಿ ಎಂದು ಕೂಡ ಅಭಿಮಾನಿಗಳು ಬಯಸುತ್ತಿದ್ದಾರೆ. ಆ ಬಗ್ಗೆ ಪ್ರಭಾಸ್​ ಅವರು ಯಾವಾಗ ನಿರ್ಧಾರ ತೆಗೆದುಕೊಳ್ಳುತ್ತಾರೋ ಗೊತ್ತಿಲ್ಲ. ‘ಕಲ್ಕಿ 2898 ಎಡಿ’, ‘ರಾಜಾ ಸಾಬ್​​’ ಸಿನಿಮಾಗಳ ಮೇಲೆ ಹೆಚ್ಚು ನಿರೀಕ್ಷೆ ಇದೆ. ಅದ್ದೂರಿ ಬಜೆಟ್​ನಲ್ಲಿ ‘ಕಲ್ಕಿ 2898 ಎಡಿ’ ಸಿನಿಮಾ ಸಿದ್ಧವಾಗುತ್ತಿದ್ದು ಈ ಚಿತ್ರದಲ್ಲಿ ಅಮಿತಾಭ್​ ಬಚ್ಚನ್​, ಕಮಲ್​ ಹಾಸನ್​ ಮುಂತಾದವರು ನಟಿಸುತ್ತಿದ್ದಾರೆ. ಮೇ 9ರಂದು ಈ ಚಿತ್ರ ತೆರೆಕಾಣಲಿದೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments