Saturday, September 13, 2025
21.9 C
Bengaluru
Google search engine
LIVE
ಮನೆಆಟೋ ಎಕ್ಸ್ ಪೋದುಬಾರಿ ಬೆಲೆಯ ರೋಲ್ಸ್-ರಾಯ್ಸ್ ಸ್ಪೆಕ್ಟರ್ ಇವಿ ಕಾರು ಭಾರತದಲ್ಲಿ ಬಿಡುಗಡೆ

ದುಬಾರಿ ಬೆಲೆಯ ರೋಲ್ಸ್-ರಾಯ್ಸ್ ಸ್ಪೆಕ್ಟರ್ ಇವಿ ಕಾರು ಭಾರತದಲ್ಲಿ ಬಿಡುಗಡೆ

ಬೆಂಗಳೂರು :  ರೋಲ್ಸ್-ರಾಯ್ಸ್ ಕಂಪನಿಯು ತನ್ನ ವಿನೂತನ ತಂತ್ರಜ್ಞಾನ ಪ್ರೇರಿತ ಸ್ಪೆಕ್ಟರ್ ಎಲೆಕ್ಟ್ರಿಕ್ ಕಾರನ್ನು ಭಾರತದಲ್ಲಿ ಬಿಡುಗಡೆ ಮಾಡಿದ್ದು, ಹೊಸ ಇವಿ ಕಾರು ಹಲವಾರು ಹೊಸ ವೈಶಿಷ್ಟ್ಯತೆಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ.

ಜಗತ್ತಿನ ಶ್ರೇಷ್ಠ ಕಾರು ಉತ್ಪಾದನಾ ಕಂಪನಿಗಳಲ್ಲಿ ಒಂದಾಗಿರುವ ರೋಲ್ಸ್-ರಾಯ್ಸ್ (Rolls-Royce) ತನ್ನ ಮೊದಲ ಎಲೆಕ್ಟ್ರಿಕ್ ಕಾರು ಮಾದರಿಯಾದ ಸ್ಪೆಕ್ಟರ್  ಭಾರತದಲ್ಲಿ ಬಿಡುಗಡೆ ಮಾಡಿದ್ದು, ಹೊಸ ಎಲೆಕ್ಟ್ರಿಕ್ ಕಾರು ಮಾದರಿಯು ಎಕ್ಸ್ ಶೋರೂಂ ಪ್ರಕಾರ ರೂ. 7.50 ಕೋಟಿ ಬೆಲೆ ಹೊಂದಿದೆ. ಸದ್ಯ ಇದು ಭಾರತದಲ್ಲಿ ಮಾರಾಟವಾಗುತ್ತಿರುವ ಅತಿ ದುಬಾರಿ ಎಲೆಕ್ಟ್ರಿಕ್ ಕಾರು ಮಾದರಿಯಾಗಿದ್ದು, 2022 ರ ಅಕ್ಟೋಬರ್ ನಲ್ಲಿ ಮೊದಲ ಬಾರಿಗೆ ಜಾಗತಿಕವಾಗಿ ಅನಾವರಣಗೊಳಿಸಲಾಗಿತ್ತು.

ರೋಲ್ಸ್ ರಾಯ್ಸ್ ಹೊಸ ಸ್ಪೆಕ್ಟರ್ ಇವಿ ಕಾರು ಟು ಡೋರ್ ಕೂಪೆ ಎಸ್ ಯುವಿ ಮಾದರಿಯಾಗಿದ್ದು, ಹೊಸ ತಲೆಮಾರಿನ ಫ್ಯಾಂಟಮ್ ಮತ್ತು ಕುಲ್ಲಿನಾನ್‌ ಎಸ್ ಯುವಿ ಕಾರುಗಳ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿ ನಿರ್ಮಾಣಗೊಂಡಿದೆ. ಹೊಸ ಇವಿ ಕಾರಿನಲ್ಲಿ ಬೃಹತ್ ಗಾತ್ರದ 102kWh ಬ್ಯಾಟರಿ ಪ್ಯಾಕ್ ನೀಡಲಾಗಿದ್ದು, ಇದು ಪ್ರತಿ ಚಾರ್ಜ್ ಗೆ ಬರೋಬ್ಬರಿ 530 ಕಿ.ಮೀ ಮೈಲೇಜ್ ನೀಡುತ್ತದೆ. ಕೇವಲ 4.4 ಸೆಕೆಂಡುಗಳಲ್ಲಿ ಗಂಟೆಗೆ 100 ಕಿ.ಮೀ ವೇಗವನ್ನು ತಲುಪಬಲ್ಲ ಸ್ಪೆಕ್ಟರ್ ಇವಿ ಕಾರು 585 ಹಾರ್ಸ್ ಪವರ್ ಉತ್ಪಾದಿಸುತ್ತದೆ.

ಸ್ಪೆಕ್ಟರ್ ಸ್ಟ್ಯಾಂಡರ್ಡ್ ಮಾದರಿಯಲ್ಲಿ ಅನೇಕ ವಿನ್ಯಾಸ ಅಂಶಗಳನ್ನು ರೋಲ್ಸ್ ರಾಯ್ಸ್ ಕಂಪನಿಯು ಸ್ಪೆಕ್ಟರ್ ಇವಿಯಲ್ಲೂ ಮುಂದುವರೆಸಿದ್ದು, ಮುಂಭಾಗದಲ್ಲಿರುವ ದೊಡ್ಡದಾದ ಗಿಲ್ ಎಲ್ಇಡಿ ಇಲ್ಯುಮಿನೇಷನ್ ವೈಶಿಷ್ಟ್ಯತೆ ಹೊಂದಿದೆ. ಜೊತೆಗೆ ಹೊಸ ಕಾರಿನಲ್ಲಿ ಸ್ಪಿರಿಟ್ ಆಫ್ ಎಕ್ಸ್ ಟಸಿ ಲೋಗೋವನ್ನು ಮತ್ತಷ್ಟು ಏರೋಡೈನಾಮಿಕ್ ಆಗಿ ವಿನ್ಯಾಸಗೊಳಿಸಲಾಗಿದೆ. ಜೊತೆಗೆ ಹೊಸ ಕಾರಿನಲ್ಲಿ ಗ್ರಾಹಕರು ತಮ್ಮ ನೆಚ್ಚಿನ ಬಣ್ಣದ ಥೀಮ್ ಅನ್ನು ಆಯ್ಕೆ ಮಾಡಬಹುದಾಗಿದ್ದು, ಇದರೊಂದಿಗೆ ಸ್ಪ್ಲಿಟ್ ಹೆಡ್‌ಲ್ಯಾಂಪ್ ಗಳು, ಎಲ್‌ಇಡಿ ಲೈಟಿಂಗ್‌ನೊಂದಿಗೆ ಸಿಗ್ನೇಚರ್ ಪ್ಯಾಂಥಿಯಾನ್ ಗ್ರಿಲ್, ಇಳಿಜಾರಿನಂತಿರುವ ರೂಫ್, ಲಂಬವಾಗಿರುವ ಎಲ್ಇಡಿ ಟೈಲ್ ಲೈಟ್‌ಗಳು ಗಮನಸೆಳೆಯುತ್ತವೆ.

ಇನ್ನು ಹೊಸ ರೋಲ್ಸ್-ರಾಯ್ಸ್ ಸ್ಪೆಕ್ಟರ್ ಇವಿ ಕಾರಿನಲ್ಲಿ ಒಳಭಾಗವು ಹಲವಾರು ಐಷಾರಾಮಿ ಫೀಚರ್ಸ್ ಹೊಂದಿದ್ದು, ಬೆಸ್ಪೋಕ್ ವಿನ್ಯಾಸದ ಹಲವಾರು ಅಂಶಗಳನ್ನು ಕೂಡ ಒಳಗೊಂಡಿದೆ. ಡೋರ್ ಪ್ಯಾಡ್‌ಗಳ ಮೇಲೆ ಸ್ಟಾರ್‌ಲೈಟ್ ಲೈನರ್ ಜೊತೆಗೆ ಹಲವಾರು ಡಿಜಿಟಲ್ ತಂತ್ರಜ್ಞಾನ ಸೌಲಭ್ಯಗಳನ್ನು ನೋಡಬಹುದಾಗಿದೆ. ಡಿಜಿಟಲ್ ಸೌಲಭ್ಯಕ್ಕಾಗಿ ರೋಲ್ಸ್ ರಾಯ್ಸ್‌ ಕಂಪನಿಯ ಇತ್ತೀಚಿನ ಸ್ಪಿರಿಟ್ ಸಾಫ್ಟ್‌ವೇರ್ ಪ್ಲಾಟ್‌ಫಾರ್ಮ್ ಅನ್ನು ಇಲ್ಲಿ ಬಳಸಿಕೊಳ್ಳಲಾಗಿದ್ದು, ಇದು ಸಂಪೂರ್ಣ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಪಡೆದುಕೊಂಡಿದೆ.

ಇದರೊಂದಿಗೆ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ದೊಡ್ಡ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, ಹಿಂಬದಿಯ ಪ್ರಯಾಣಿಕರಿಗಾಗಿ ಪ್ರತ್ಯೇಕವಾದ ಡಿಸ್ಪ್ಲೇ ನೀಡಲಾಗಿದೆ. ಹೊಸ ಕಾರಿನಲ್ಲಿ ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಭಾರತದಲ್ಲಿ ದುಬಾರಿ ಬೆಲೆ ನಡುವೆಯೂ ಉತ್ತಮ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments