Thursday, January 29, 2026
26.8 C
Bengaluru
Google search engine
LIVE
ಮನೆUncategorizedಬೆಂಗಳೂರು ವಿವಿ ವಿದ್ಯಾರ್ಥಿಗಳ‌ ಊಟದಲ್ಲಿ ಹುಳು

ಬೆಂಗಳೂರು ವಿವಿ ವಿದ್ಯಾರ್ಥಿಗಳ‌ ಊಟದಲ್ಲಿ ಹುಳು

ಬೆಂಗಳೂರು : ಜಸ್ಟ್ ಎರಡು ತಿಂಗಳ ಹಿಂದಷ್ಟೆ ಇದೇ ಹಾಸ್ಪೆಲ್ ನ ಊಟದ ತಟ್ಟೆಯಲ್ಲಿ ಹುಳ ಕಂಡಿತ್ತು.. ಅವತ್ತು ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆ ಪರಿಹರಿಸೋದಾಗಿ ಭರವಸೆ ಕೊಟ್ಟಿದ್ರು…ಆದ್ರೆ ಇದೀಗ ಎರಡು ತಿಂಗಳ ಅಂತರದಲ್ಲಿ ಎರಡನೇ ಬಾರಿ ಬೆಂಗಳೂರು ಹಾಸ್ಟೆಲ್ ಊಟದಲ್ಲಿ ಹುಳ ಪತ್ತೆಯಾಗಿದೆ. ಈ ಬಾರಿ ವಿದ್ಯಾರ್ಥಿಗಳು “ಕಟ್ಟುಪಾಡು ಬದಲಾಗದು” ಎಂಬ ಶೀರ್ಷಿಕೆಯಡಿ ಕವನದ ಮೂಲಕ ಹಾಸ್ಟೆಲ್ ಅವ್ಯವಸ್ಥೆ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.

ಬೆಂಗಳೂರು ವಿಶ್ವವಿದ್ಯಾಲಯದ ವಸತಿ ಶಾಲೆಯ ಊಟದಲ್ಲಿ ಹುಳಗಳು ಪತ್ತೆಯಾಗಿವೆ. ಕಳಪೆ ಆಹಾರ ತಿಂದು ವಿದ್ಯಾರ್ಥಿಗಳ ಆರೋಗ್ಯ ಏರುಪೇರಾಗಿದ್ದು, ಊಟದಲ್ಲಿ ಹುಳ ಇದೆ ಎಂದರೆ ಅಡ್ಜೆಸ್ಟ್ ಮಾಡಿ ಎಂಬ ಅಸಡ್ಡೆಯ ಉತ್ತರ ನೀಡುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಇದರಿಂದ ಬೇಸತ್ತ ವಿದ್ಯಾರ್ಥಿಗಳು ಕಟ್ಟುಪಾಡು ಬದಲಾಗದು ಎಂಬ ಶೀರ್ಷಿಕೆಯಡಿ ಕವನ ಬರೆದಿದ್ದು, ಬದಲಿಸಲು ಮುಂದೆ ಬಂದರೆ ಎತ್ತಂಗಡಿ ಕಟ್ಟಿಟ್ಟ ಬುತ್ತಿ ಎಂದು ಕವನದಲ್ಲಿ ಉಲ್ಲೇಖಿಸಲಾಗಿದೆ.

ಇದೇ ಹಾಸ್ಟೆಲ್​ನಲ್ಲಿ 2023ರ ನವೆಂಬರ್ ತಿಂಗಳಲ್ಲಿ ಊಟದಲ್ಲಿ ಹುಳಗಳು ಪತ್ತೆಯಾಗಿದ್ದವು. ಕಳಪೆ ಆಹಾರ ನೀಡುತ್ತಿರುವುದರಿಂದ ಕೆರಳಿದ ವಿದ್ಯಾರ್ಥಿಗಳು ನೂರಾರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದರು. ವಸತಿ ಶಾಲೆಯಲ್ಲಿ ಮೂಲಭೂತ ಸೌಕರ್ಯಗಳನ್ನು ನೀಡುತ್ತಿಲ್ಲ. ಊಟ, ನೀರು ಸರಿಯಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದರು.

ಹಾಸ್ಟೆಲ್ ವಾರ್ಡನ್ ನಿರ್ಲಕ್ಷ್ಯ ಮಾಡುತ್ತಿದ್ದು, ಉತ್ತಮ ಊಟ ನೀಡುತ್ತಿಲ್ಲ. ಇದನ್ನು ಪ್ರಶ್ನಿಸಿದರೆ ದಬ್ಬಾಳಿಕೆ ಮಾಡುತ್ತಾರೆ. ಗೊತ್ತಿಲ್ಲದೆ ಊಟದಲ್ಲಿ ಹುಳಗಳು ತಿಂದು ಆರೋಗ್ಯದಲ್ಲಿ ಏರುಪೇರಾಗಿದ್ದು, ಇಂತಹ ಆಹಾರ ತಿಂದು ಜೀವಕ್ಕೆ ಅಪಾಯವಾದರೆ ಯಾರು ಹೊಣೆ ಎಂದು ಆಕ್ರೋಶ ಹೊರಹಾಕಿದ್ದರು. ಇನ್ನಾದ್ರೂ ಹಾಸ್ಟೆಲ್ ಅವ್ಯವಸ್ಥೆಯನ್ನ ವಿಶ್ವವಿದ್ಯಾಲಯದ ಮುಖ್ಯಸ್ಥರು ಸರಿ ಪಡಿಸ್ತಾರಾ ಕಾದು ನೋಡಬೇಕು

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments