Thursday, January 29, 2026
16.9 C
Bengaluru
Google search engine
LIVE
ಮನೆಜಿಲ್ಲೆರಾಮ ಮಂದಿರ ಪ್ರಸಾದ ಹಂಚಿದ್ದಕ್ಕೆ ಆರೋಪಿ ಮೇಲೆ ಹಲ್ಲೆ ಆರೋಪ

ರಾಮ ಮಂದಿರ ಪ್ರಸಾದ ಹಂಚಿದ್ದಕ್ಕೆ ಆರೋಪಿ ಮೇಲೆ ಹಲ್ಲೆ ಆರೋಪ

ವಿಜಯಪುರ :  ರಾಮ ಮಂದಿರ ಉದ್ಘಾಟನೆಯಂದು ರಾಮನ ಪೂಜೆ ಮಾಡಿ ಪ್ರಸಾದ ಹಂಚಿದ್ದಕ್ಕೆ ಆರೋಪಿ ಮೇಲೆ ಹಲ್ಲೆ,  ಆರೋಪ ತಡವಾಗಿ ಬೆಳಕಿಗೆ ಬಂದ‌ ಪ್ರಕರಣ ಮಹಾರಾಷ್ಟ್ರ ಮೂಲದ ಪರಮೇಶ್ವರ ಎಂಬ ಆರೋಪಿಯಿಂದ‌ ವಿಡಿಯೋ ಹೇಳಿಕೆ ಬಿಡುಗಡೆ ,ಆಡಿದ್ದಾರೆ.  ಕಳೆದ 22 ರಂದು ರಾಮನ ಪೂಜೆಗೆ ಜೈಲು ಅಧಿಕಾರಿಗಳಿಗೆ ಅನುಮತಿಗಾಗಿ ಮನವಿ ಮಾಡಿದ್ದೇವು.  ಅಧಿಕಾರಿಗಳು ಅನುಮತಿ‌ ನೀಡಿರಲಿಲ್ಲ,  ನಂತರ ಜನೇವರಿ 22 ರಂದು ವಿಜಯಪುರ ಕೇಂದ್ರ ಕಾರಾಗೃಹದಲ್ಲಿ ರಾಮನ ಪೂಜೆ ಮಾಡಿ ಪ್ರಸಾದ ಹಂಚಿದೇವು ಎಂದಿರೋ ಆರೋಪಿ ಪರಮೇಶ್ವರ ಜನೇವರಿ 23 ರಂದು ಸಹಾಯಕ ಜೈಲು ಅಧೀಕ್ಷಕ ಚೌಧರಿ ತಮ್ಮ ಚೇಂಬರ್ ಗೆ ನನ್ನ ಹಾಗೂ ನನ್ಮ ಜೊತೆಗೆ ಪೂಜೆ ಮಾಡಿದ ಇಬ್ಬರನ್ನೂ ಕರೆಸಿ ವಿಚಾರಣೆ ನಡೆಸಿದರು.  ಆಗ ಅನ್ಯಕೋಮಿನ ಆರೋಪಿ ಶೇಖ್ ಮೋದಿ ಹಾಗೂ ಇತರರರು ನಮ್ಮ ಮೇಲೆ ಹಲ್ಲೆ ಮಾಡಿದರು . ರಾಮನ ಪೂಜೆ ಮಾಡಿ ಪ್ರಸಾದ ವಿತರಣೆ ಮಾಡಿದ್ದಕ್ಕೆ ಹಲ್ಲೆ ಮಾಡಿದರು.  ನಮ್ಮ ಮೇಲೆ ಹಲ್ಲೆ ಮಾಡಿದರೂ ಜೈಲು ಅಧಿಕಾರಿ ಸಿಬ್ಬಂದಿ ನಮ್ಮ ರಕ್ಷಣೆ ಮಾಡಿಲ್ಲ.

ಬದಲಾಗಿ ಈಗಾ ನಮ್ಮನ್ನು ಜೈಲು ಆವರಣದಲ್ಲಿ ಬಿಡದೇ ಸೆಲ್ ನಲ್ಲಿಟ್ಟಿದ್ದಾರೆ.  ಪ್ರಧಾನಿ ಮೋದಿ ಅಮೀತ್ ಶಾ ನಮಗೆ ಸಹಾಯ ಮಾಡಬೇಕೆಂದು ಮನವಿ ಮಾಡಿರೋ ಆರೋಪಿ ರಾಮನ‌ ವಿಚಾರ ಇಟ್ಟುಕೊಂಡು ಆರೋಪಿ ಸುಳ್ಳು ಹೇಳುತ್ತಿದ್ದಾರೆ.  ಕೇಂದ್ರ ಕಾರಾಗೃಹದ ಅಧೀಕ್ಷಕ ಐ ಜಿ ಮ್ಯಾಗೇರಿ ಮಹಾರಾಷ್ಟ್ರದ ಜೈಲಿನಿಂದ ವಿಜಯಪುರ ಜಿಲ್ಲಾ ಕೇಂದ್ರ ಕಾರಾಗೃಹಕ್ಕೆ ಮೂವರು ಆರೋಪಿಗಳು ಬಂದಿದ್ದಾರೆ.  ಮಹಾರಾಷ್ಟ್ರದ ಜೈಲಿನಲ್ಲಿ ಗಲಾಟೆ ಮಾಡಿದ ಕಾರಣ ಇಲ್ಲಿಗೆ ಕಳುಹಿಸಿದ್ದಾರೆ.  ರಾಮ ಮಂದಿರ ಉದ್ಘಾಟನೆ ವಿಚಾರ ಮುಂದಿಟ್ಟು ಸುಳ್ಳು ಹೇಳುತ್ತಿದ್ದಾರೆ . ಜನೇವರಿ 23 ರಂದು ಜೈಲಲ್ಲಿ ಇತರ ಆರೋಪಿತರು ಅಪರಾಧಿಗಳ ಜೊತೆಗೆ ಇವರು ಗಲಾಟೆ ಮಾಡಿದ್ದಾರೆ.  ಆದ್ದರಿಂದ ಪ್ರತ್ಯೇಕ ಸೆಲ್ ನಲ್ಲಿಡಲಾಗಿದೆ ಎಂದು ಮಾಹಿತಿ ಆರೋಪಿ ವಿಡಿಯೋ ಹೇಳಿಕೆ ಬಿಡುಗಡೆ ಕುರಿತು ತನಿಖೆ ಮಾಡಲಾಗುತ್ತದೆ.  ಜೈಲಲ್ಲಿ ಮೋಬೈಲ್ ಹೇಗೆ ಬಂತು ಆರೋಪಿಯ ಆರೋಪದ ಕುರಿತು ತನಿಖೆ ನಡೆಸೋದಾಗಿ ಜೈಲು ಅಧೀಕ್ಷಕ ಐ ಜಿ ಮ್ಯಾಗೇರಿ ಮಾಹಿತಿ ನೀಡಿದ್ದಾರೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments