ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಾಗೂ ನಟಿ ಪವಿತ್ರಾ ಗೌಡ ನಡುವಿನ ಕಾಳಗ ರೋಚಕ ತಿರುವು ಪಡೆದಿದೆ. ತನ್ನ ಗಂಡ ದರ್ಶನ್ ಜೊತೆ ಇರುವ ಫೋಟೋಗಳನ್ನ ಪೋಸ್ಟ್ ಮಾಡಿದ್ದ ಪವಿತ್ರಾ ಗೌಡ ವಿರುದ್ಧ ಹರಿಹಾಯ್ದಿದ್ದ ವಿಜಯಲಕ್ಷ್ಮಿ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಇದೀಗ ಬಂದ ಸುದ್ದಿಯಂತೆ ವಿಜಯಲಕ್ಷ್ಮಿ ಅವರು ಬನಶಂಕರಿ ಮಹಿಳಾ ಠಾಣೆಗೆ ತೆರಳಿ ಪವಿತ್ರಾ ಗೌಡ ವಿರುದ್ಧ ದೂರು ಕೊಟ್ಟಿದ್ದಾರೆ. ಇಂದು ವಿಜಯಲಕ್ಷ್ಮಿಗೆ ಸೋಶಿಯಲ್ ಮೀಡಿಯಾದಲ್ಲಿ ತಿರುಗೇಟು ಕೊಟ್ಟ ಬೆನ್ನಲ್ಲೆ ಈ ಬೆಳವಣಿಗೆ ನಡೆದಿದೆ. ನನ್ನ ಮತ್ತು ದರ್ಶನ್ ಮಧ್ಯೆ ಉತ್ತಮ ಬಾಂಧವ್ಯವಿದೆ. ಇದು ವಿಜಯಲಕ್ಷ್ಮಿ ಅವರಿಗೂ ಗೊತ್ತು ಎಂದು ಪವಿತ್ರಾ ಗೌಡ ಇಂದು ಬೆಳಿಗ್ಗೆ ಟ್ವೀಟ್ ಮಾಡಿದ್ದರು. ಈ ಹಿನ್ನೆಲೆಯಲ್ಲಿ ವಿಜಯಲಕ್ಷ್ಮಿ ದೂರು ನೀಡಿದ್ದಾರೆ. ನನ್ನ ಮತ್ತು ಪತಿಯ ಮಧ್ಯೆ ಪ್ರವೇಶಿಸುತ್ತಿರುವ ಪವಿತ್ರ ಎಂಬುವವರು ನಮ್ಮ ಕುಟುಂಬದ ನೆಮ್ಮದಿ ಹಾಳು ಮಾಡಿ, ನಮ್ಮ ಮಾನ ಹಾನಿಗೆ ಕಾರಣವಾಗಿದ್ದು ಇವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಇವರ ದೂರನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.