ಹಾಸನ : ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ಗಣರಾಜ್ಯೋತ್ಸವದ ಪ್ರಯುಕ್ತ ತಾಲೂಕು ಆಡಳಿತದ ಧ್ವಜಾರೋಹಣ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿತ್ತು. ಚಂದ್ರಶೇಖರ ಭಾರತಿ ಶಾಲೆಯ ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನ ನಡೆಯಿತು. ಇದರಲ್ಲಿ ಮಕ್ಕಳು ನವಿಲು, ಕಮಲದ ಹೂ ಹಿಡಿದು ನೃತ್ಯ ಮಾಡಿದ್ದರು. ರಾಷ್ಟ್ರ ಹೂವನ್ನು ರಾಜಕೀಯವಾಗಿ ನೋಡಿದ ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ಅವರು ಶಿಕ್ಷಕಿಯನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.
ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ಗಣರಾಜ್ಯೋತ್ಸವ ಪ್ರಯುಕ್ತ ತಾಲೂಕು ಆಡಳಿತದ ಧ್ವಜಾರೋಹಣ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಚಂದ್ರಶೇಖರ ಭಾರತಿ ಶಾಲೆಯ ವಿದ್ಯಾರ್ಥಿಗಳು ಮಾಡಿದ ನೃತ್ಯದಲ್ಲಿ ರಾಷ್ಟ್ರ ಪಕ್ಷಿ ನವೀಲು ಹಾಗೂ ರಾಷ್ಟ್ರ ಹೂವು ಕಮಲವನ್ನು ಹಿಡಿದು ಕುಣಿದಿದ್ದಾರೆ. ಆದರೆ, ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ಅವರು ಕಮಲವನ್ನು ರಾಜಕೀಯವಾಗಿ ನೋಡಿ ಶಿಕ್ಷಕಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಶೋಕ ಚಕ್ರದಂತೆ ರಾಷ್ಟ್ರೀಯ ಸಂಕೇತ, ರಾಷ್ಟ್ರೀಯ ಹೂವು ಎಂದು ಕಲಮ ಬಳಸಲಾಗಿದೆ ಎಂದು ಶಿಕ್ಷಕಿ ಹೇಳಿಕೊಂಡರೂ ಶಾಸಕರು ಕಮಲದ ಹೂವು ಪಕ್ಷದ ಚಿಹ್ನೆ, ಹಾಗಾಗಿ ಬಳಸಬಾರದು ಎಂದು ಹೇಳಿ ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೆ, ನೋಟಿಸ್ ಕೊಡುವ ಎಚ್ಚರಿಕೆಯನ್ನೂ ನೀಡಿದ್ದಾರೆ.