ಚಾಮರಾಜನಗರ : ಐತಿಹಾಸಿಕ ಚಿಕ್ಕಲ್ಲೂರು ಜಾತ್ರೆಗೆ ಕ್ಷಣಗಣನೆ. ಗಡಿಜಿಲ್ಲೆಯಲ್ಲಿ ನಡೆಯಲಿರುವ ಐತಿಹಾಸಿಕ ಚಿಕ್ಕಲ್ಲೂರು ಮಂಟೇಸ್ವಾಮಿ ಜಾತ್ರೆಗೆ ಕ್ಷಣಗಣನೆ ಆರಂಭವಾಗಿದೆ. ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ಚಿಕ್ಕಲ್ಲೂರು ಗ್ರಾಮದಲ್ಲಿ ಜನವರಿ 25 ರಿಂದ ಆರಂಭವಾಗಲಿರುವ ಮಂಟೇಸ್ವಾಮಿ ಜಾತ್ರೆ ಜನವರಿ 29 ರವರೆಗೆ ನಡೆಯಲಿದೆ. ಜಾತ್ರೆಯಲ್ಲಿ ಜಿಲ್ಲೆ, ಹೊರಜಿಲ್ಲೆ ಹಾಗು ಹೊರ ರಾಜ್ಯಗಳಿಂದಲೂ ಭಕ್ತರು ಆಗಮಸಲಿದ್ದು, ಐದು ದಿನಗಳ ಕಾಲ ಚಿಕ್ಕಲ್ಲೂರು ಕ್ಷೇತ್ರದಲ್ಲಿ ಟೆಂಟ್ ಹಾಗು ಬಿಡಾರಗಳಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ಹಿಂದಿನಿಂದಲೂ ಶ್ರೀಕ್ಷೇಕ್ಕೆ ಆಗಮಿಸುವ ಭಕ್ತರು ಪ್ರಾಣಿ ಬಲಿ ಕೊಡುವ ಸಂಪ್ರದಾಯ ಆಚರಿಸಿಕೊಂಡು ಬಂದಿದ್ದ ಕಾರಣ, ಮುನ್ನೆಚ್ಚರಿಕೆ ಕ್ರಮವಾಗಿ ಕ್ಷೇತ್ರದಲ್ಲಿ ಯಾವುದೇ ರೀತಿಯ ಪ್ರಾಣಿ ಅಥವಾ ಪಕ್ಷಿಗಳನ್ನು ಬಲಿ ಕೊಡದಂತೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಆದೇಶ ಹೊರಡಿಸಿದ್ದಾರೆ. ಕಾನೂನು ಸುವ್ಯವಸ್ಥೆ ದೃಷ್ಟಿಯಿಂದಲೂ ಅಲರ್ಟ್ ಆಗಿರುವ ಜಿಲ್ಲಾಡಳಿತ, 18 ಮಂದಿ ಸೆಕ್ಟರ್ ಆಫೀಸರ್ ಗಳನ್ನು ನೇಮಕ ಮಾಡಿದ್ದು, ಶ್ರೀ ಕ್ಷೇತ್ರವನ್ನು ಸಂಪರ್ಕಿಸುವ 7 ಕಡೆಗಳಲ್ಲಿ ಚಕ್ ಪೋಸ್ಟ್ ತೆರೆಯಲಾಗಿದೆ ಎಂದು ಡಿಸಿ ಶಿಲ್ಪಾ ನಾಗ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.