ವರಧಿ = ಬಸವರಾಜ್ ವಿಜಯಪುರ
ವಿಜಯಪುರ : ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಭಾರತ ಸ್ವಾತಂತ್ರ್ಯಕ್ಕಾಗಿ ಬ್ರೀಟಿಷರ ವಿರುದ್ಧ ಸಶಸ್ತ್ರವಾಗಿ ಹೋರಾಡಿದ ವಿಜಯಪುರ ಜಿಲ್ಲೆಯ ಇಂಚಗೇರಿ ಮಠದಲ್ಲಿ ಶ್ರೀರಾಮ ದೇವರ ಪೋಟೊಗೆ ವಿಶೇಷ ಪೂಜೆ ನಡೆಸಲಾಯಿತು. ಶ್ರೀಮಠದಲ್ಲಿ ಶ್ರೀರಾಮನ ಪೋಟೊ ಪೂಜೆ ವೇಳೆ ಅಚ್ಚರಿಯ ಘಟನೆಯೊಂದು ನಡೆದಿದೆ.
ರಾಮನ ಪೋಟೊಗೆ ಪೂಜೆ ನಡೆಯುತ್ತಿದ್ದ ವೇಳೆಯೇ ಕೋತಿಯೊಂದು ಪ್ರತ್ಯಕ್ಷವಾಗಿದೆ. ರಾಮ ಪೋಟೊ ಬಳಿ ಬಂದು ಕುಳಿತು, ಪೂಜೆಯುದ್ದಕ್ಕು ಕೋತಿ ಸುಳಿದಾಡಿದೆ. ಎಲ್ಲಿ ರಾಮನೋ ಅಲ್ಲಿ ಹನುಮ ಇದ್ದೆ ಇರುವನು ಎನ್ನುವಂತೆ ರಾಮನ ಪೋಟೊ ಪೂಜೆ ವೇಳೆಯೇ ಕೋತಿ ಪ್ರತ್ಯಕ್ಷವಾಗಿರೋದು, ಸಾಕ್ಷಾತ್ ಆಂಜನೇಯ ದೇವರೇ ದರ್ಶನ ನೀಡಿದ್ದಾನೆ ಎಂದು ಸ್ಥಳೀಯರು ಮಾತನಾಡಿಕೊಳ್ತಿದ್ದಾರೆ. ಅದ್ರಲ್ಲು ಪವಾಡ ಪುರುಷರಾಗಿದ್ದುಕೊಂಡು ಬ್ರೀಟಿಷರ ವಿರುದ್ಧ ಹೋರಾಡಿದ್ದ ಮಾಧವಾನಂದ ಶ್ರೀಗಳೇ ಗದ್ದುಗೆ ಎದುರಲ್ಲೆ ರಾಮನ ಪೋಟೋ ಪೂಜೆ ನಡೆಯುತ್ತಿದ್ದು, ಇದೆ ವೇಳೆ ಘಟನೆ ನಡೆದಿದ್ದು ಅಚ್ಚರಿಗೆ ಕಾರಣವಾಗಿದೆ.