ತುಮಕೂರು : ಇಂದು ಡಾ. ಶಿವಕುಮಾರ ಸ್ವಾಮೀಜಿಗಳ 5ನೇ ವರ್ಷದ ಪುಣ್ಯ ಸ್ಮರಣೆ ಹಿನ್ನೆಲೆ ತುಮಕೂರಿನ
ಕ್ಕೆ ಮಾಜಿ ಸಿಎಂ ಯಡಿಯೂರಪ್ಪ ಭೇಟಿ ನೀಡಿದ್ದು, ಡಾ. ಶಿವಕುಮಾರ ಸ್ವಾಮೀಜಿಗಳ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆದರು. ಈ ವೇಳೆ ಸಂಸದ ಜಿಎಸ್ ಬಸವರಾಜ್, ಶಾಸಕ ಜ್ಯೋತಿ ಗಣೇಶ್, ಸುರೇಶ್ ಗೌಡ, ಸೇರಿದಂತೆ ಹಲವು ನಾಯಕರು ಯಡಿಯೂರಪ್ಪಗೆ ಸಾಥ್ ನೀಡಿದರು.
ಬಳಿಕ ಮಾತನಾಡಿದ ಅವರು, ಪರಮಪೂಜ್ಯ ಡಾಕ್ಟರ್ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳ ಐದನೇ ವರ್ಷದ ಪುಣ್ಯಸ್ಮರಣೆಗೆ ಭಾಗಿವಹಿಸಲು ಬಂದಿದ್ದೇವೆ. ದಾಸೋಹದ ದಿನ ಅಂದರೆ ನಮ್ಮೆಲ್ಲಾರ ಪುಣ್ಯದಿನ. ತ್ರಿವಿಧ ದಾಸೋಹದಲ್ಲಿ ಪ್ರಪಂಚಕ್ಕೆ ಸಂದೇಶ ಕೊಟ್ಟವರು. ಲಕ್ಷಾಂತರ ಜನರ ಜೀವನ ಕೊಟ್ಟಂತವರು. ಸರ್ಕಾರದಿಂದ ದಾಸೋಹ ದಿನ ಸರಿಯಾಗಿ ಆಚರಣೆ ಆಗದ ವಿಚಾರ. ಸರಿ ಮಾಡೋಣ ಎಂದ ಮಾಜಿ ಸಿಎಂ ಯಡಿಯೂರಪ್ಪ ಹೇಳಿದರು.