ಕಲಬುರಗಿ : ಪ್ರಧಾನಿ ಮೋದಿ ಅವರು ರಾಜ್ಯ ಪ್ರವಾಸ ಮಾಡುತ್ತಿದ್ದು, ಕಲಬುರಗಿಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದಾರೆ.

ಮಹಾರಾಷ್ಟ್ರ ಸೊಲ್ಲಾಪುರದಲ್ಲಿ ಆಯೋಜಿಸಿರುವ ಪಿಎಂ ಆವಾಸ್ ಯೋಜನೆಯಡಿ ಬಡವರಿಗೆ ಮನೆಗಳ ಹಕ್ಕುಪತ್ರ ವಿತರಣೆ ಮಾಡುವ ಕಾರ್ಯಕ್ರಮದಲ್ಲಿ ಭಾಗಿಯಾಗುವ ನಿಟ್ಟಿನಲ್ಲಿ ಜಿಲ್ಲೆಗೆ ಆಗಮಿಸಿ ಇಲ್ಲಿಂದ ಹೆಲಿಕಾಪ್ಟರ್ ಮೂಲಕ ತೆರಳಲಿದ್ದಾರೆ.

ಕಲಬುರ್ಗಿ ಮೇಯರ್ ವಿಶಾಲ್ ದರ್ಗಿ,ಜಿಲ್ಲಾಧಿಕಾರಿ ಫೌಜೀಯಾ ತರನ್ನುಮ್ ,ಪ್ರಾದೇಶಿಕ ಆಯುಕ್ತರು,ನಗರ ಪೊಲೀಸ್ ಆಯುಕ್ತ ಆರ್ ,ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ್,ಕೇಂದ್ರ ಸಚಿವ ಭಗವಂತ ಖೂಬ, ಸೇರಿದಂತೆ ಅನೇಕ ಬಿಜೆಪಿಯ ಮುಖಂಡರು ಮೋದಿಗೆ ಹೂವು ಗುಚ್ಚ ನೀಡಿ ಸ್ವಾಗತ ಮಾಡಿದರು.



