ಬೆಂಗಳೂರು : ಬೆಂಗಳೂರಿನ ಗಾಂಧಿ ಭವನದ ಕಸ್ತೂರ್ ಬಾ ಸಭಾಂಗಣದಲ್ಲಿ ಮಾದಿಗ ಸಮಾನ ಮನಸ್ಕರ ವೇದಿಕೆ ಸಭೆ ನಡೆಯಿತು. ಮಾದಿಗ ಸಮುದಾಯದ ಮುಖಂಡರು ಭಾಗವಹಿಸಿದ್ರು. ಸಭೆಯಲ್ಲಿ ಒಳಮೀಸಲಾತಿ ಸೇರಿದಂತೆ ಅನೇಕ ವಿಷಯಗಳ ಚರ್ಚೆ ನಡೆಸಲಾಯ್ತು.
ಬಾಗಲಕೋಟೆ ಮುತ್ತಣ್ಣ ಬೆಳ್ಳೂರು ಮಾತಾಡಿ ನಾವು ಒಳಮೀಸಲಾತಿಗೆ ಶಿಫಾರಸ್ಸು ಮಾಡಿದ ಬಿಜೆಪಿ ಜೊತೆಗೆ ಇಡೀ ರಾಜ್ಯದ ಮಾದಿಗ ಸಮುದಾಯ ಇರಲಿದೆ ಎಂದು ಈಗಾಗಲೇ ತಿಳಸಿದ್ದೇವೆ. ಇದೀಗ ಬಿ,ವೈ ವಿಜಯೇಂದ್ರ ಜಿಲ್ಲಾ ಪದಾಧಿಕಾರಿಗಳನ್ನ ನೇಮಕ ಮಾಡಿದ್ದಾರೆ. ಆದ್ರೆ ಸಮಗಾರ ಮತ್ತು ಮಾದಿಗ ಜನಾಂಗಕ್ಕೆ ಎರಡು ಮೂರು ಸ್ಥಾನ ನೀಡಿದ್ದಾರೆ. ಆದ್ರೆ 2004 ರಿಂದ ಬಿಜೆಪಿ ಜೊತೆಗೆ ಇದ್ದೇವೆ..ನಮಗೆ ಸೂಕ್ತ ಸ್ಥಾನಮಾನ ಸಿಕ್ಕಿಲ್ಲ. ನಮ್ಮ ಸಮಾಜಕ್ಕೆ ಮಾನ್ಯತೆ ಸಿಕ್ಕಿಲ್ಲ. ಮುಂಬರಲಿರುವ ಲೋಕಸಭೆ ಚುನಾವಣೆಗೆ ನಾವೆಲ್ಲಾ ಬೇಕು..ಹೀಗಾಗಿ ವಿಜಯೇಂದ್ರ ಯೋಚಿಸಬೇಕು ಎಂದಿದ್ದಾರೆ.
ಇನ್ನು ಇದೇ ವೇಳೆ ಮಾತನಾಡಿದ ಮಾದಿಗ ಮುಖಂಡ, ಬಿಜೆಪಿಯಿಂದ ನಮಗೆ ಅನ್ಯಾಯವಾಗುತ್ತಿದೆ. ರಾಜ್ಯಧ್ಯಕ್ಷರಾದ ವಿಜಯೇಂದ್ರ, ನಮ್ಮ ಜಾತಿಗೆ ಸೂಕ್ತ ಸ್ಥಾನಮಾನ ನೀಡಿಲ್ಲ. ರಾಜ್ಯ ಕಮಿಟಿಯಲ್ಲಿ ನಮಗೆ ಸೂಕ್ತ ಸ್ಥಾನ ಸಿಕ್ಕಿಲ್ಲ. ಜಿಲ್ಲೆಯಲ್ಲಿ ಸಾಕಷ್ಟು ಜನ ದುಡಿಯುತ್ತಿದ್ದಾರೆ ಎಂದು ಆಗ್ರಹಿಸಿದ್ರು. ಸಭೆಯಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಅನಿಲ್ ಕುಮಾರ್ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ರು.