ತುಮಕೂರು : ರಾಜ್ಯದ ಪೊಲೀಸ್ ವಿಭಾಗದಲ್ಲಿ ಇತ್ತೀಚಿಗೆ ಅಧಿಕಾರ ದುರುಪಯೋಗ ಮತ್ತು ಲಂಚ ಪ್ರಕರಣಗಳು ಹೆಚ್ಚಾಗ್ತಾ ಇದ್ದು ಇಲಾಖೆ ವಿರುದ್ಧ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುವಂತಾಗಿದೆ. PSI ಚೇತನ್ ಕುಮಾರ್
ಬೆಂಗಳೂರಿನ ಇನ್‌ಸ್ಪೆಕ್ಟರ್ ಗೋವಿಂದರಾಜು, ಚೀಟಿ ವ್ಯವಹಾರದಲ್ಲಿ ಐದು ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟು, 1 ಲಕ್ಷ ರೂ. ಮುಂಗಡ ಹಣ ಪಡೆಯುವಾಗ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದಿದ್ದರು . . ಕಾರ್ಯಾಚರಣೆಯನ್ನು ಲೋಕಾಯುಕ್ತ ಅಧಿಕಾರಿಗಳು ಸಿನಿಮೀಯ ಶೈಲಿಯಲ್ಲಿ ನಡೆಸಿ ಆರೋಪಿಯನ್ನು ಲಾಕ್ ಮಾಡಿದ್ರು . ಘಟನೆ ಮಾಸುವ ಮುನ್ನವೇ ತುಮಕೂರು ಜಿಲ್ಲೆಯ ಮತ್ತೊಬ್ಬ ಪೊಲೀಸ್ ಅಧಿಕಾರಿ ಲೋಕಾಯುಕ್ತ ಅಧಿಕಾರಿಗಳ ಅತಿಥಿಯಾಗಿದ್ದಾರೆ.
ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯ PSI ಚೇತನ್ ಕುಮಾರ್ ಬೆಂಗಳೂರು ಮೂಲದ ವಕೀಲರಿಗೆ ಸೇರಲ್ಪಿಟ್ಟಿದೆ ಎಂಬ ವಾಹನವನ್ನು ಬಿಡುಗಡೆ ಮಾಡಲು ಲಂಚ ಕೇಳುತ್ತಿದ್ದ ವೇಳೆ, ಲೋಕಾಯುಕ್ತ ಬಲೆಗೆ ಸಿಕ್ಕಿಬಂದಿದ್ದಾರೆ. ರಾತ್ರಿ 11:30 ರ ಸುಮಾರಿಗೆ, ಕ್ಯಾತಸಂದ್ರ ಬಳಿಯ ನಮಸ್ತೆ ತುಮಕೂರು ಹೋಟೆಲ್ ನಲ್ಲಿ ₹40,000 ಮುಂಗಡ ಹಣವನ್ನು ಸ್ವೀಕರಿಸುತ್ತಿದ್ದ ವೇಳೆ PSI ಚೇತನ್ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಲಂಚ ಪಡೆಯುತ್ತಿದ್ದ ಪೊಲೀಸಪ್ಪ ನನ್ನ ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ.
ಈ ರೀತಿಯ ಪ್ರಕರಣಗಳು ಸಮಗ್ರ ಪೊಲೀಸ್ ವ್ಯವಸ್ಥೆಯ ವಿಶ್ವಾಸವನ್ನು ಕಡಿಮೆ ಮಾಡುತ್ತಿದ್ದು, ಘಟನೆ ಮರುಕಳಿಸದಂತೆ ಎಚ್ಚರಿಸಿ ಕೂಡಲೇ ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು ಹಾಗು ಇಲಾಖೆಯ ಗೌರವ ಕಾಪಾಡುವಲ್ಲಿ ಮೇಲಾಧಿಕಾರಿಗಳು ಶಿಸ್ತು ಕ್ರಮ ಕೈಗೊಳ್ಳಲು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


