ಬೆಂಗಳೂರು: ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ಆರಂಭವಾಗಿದೆ, ಆದರೆ ಈ ವರ್ಷ ಪ್ಯಾಲೆಸ್ತೈನ್ ದೇಶದ ಜನರ ಸಂಕಷ್ಟದ ಕಥೆಗಳನ್ನು ಹೇಳುವ ಸಿನಿಮಾಗಳಿಗೆ ತಡೆ ನೀಡಲಾಗಿದೆ. ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆ ಸೆನ್ಸಾರ್ ವಿನಾಯಿತಿ ನೀಡಲು ತಡ ಮಾಡಿದ್ದು, ಸಿನಿಮಾಗಳ ಪ್ರದರ್ಶನಕ್ಕೆ ‘ನೋ’ ಅಂದಿದೆ.
ಚಿತ್ರೋದ್ಯಮಿಯರು ಮತ್ತು ಕಲಾ ಪ್ರೇಮಿಗಳು, ಇದು ಸಮಾಜದ ನಿಜವಾದ ಸಂಕಷ್ಟವನ್ನು ತೋರಿಸುವ ಅವಕಾಶ ಹಾಗಾಗಿ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡುವಂತೆ ಒತ್ತಾಯಿಸುತ್ತಿದ್ದಾರೆ. ನಟ ಪ್ರಕಾಶ್ ರಾಜ್ ಈ ನಿರ್ಬಂಧವನ್ನು ಪ್ರಶ್ನಿಸಿದ್ದು, ಸಿದ್ದರಾಮಯ್ಯ ಸರ್ಕಾರ ಕೂಡ ಪ್ಯಾಲೆಸ್ತೈನ್ ಕಥೆಗಳ ಪ್ರದರ್ಶನಕ್ಕೆ ಗಟ್ಟಿಯಾದ ನಿರ್ಧಾರ ತಗೊಳ್ಳಬೇಕು ಮತ್ತು ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಬೇಕೆಂದು ಸೂಚಿಸಿದ್ದಾರೆ.
ಈ ವಿವಾದ ಕೇವಲ ಸಿನಿಮಾಗೆ ಸೀಮಿತವಾಗದೆ, ಕೇಂದ್ರ ಸರ್ಕಾರದ ರಾಜಕೀಯ ತೀರ್ಮಾನಗಳನ್ನೂ ಪ್ರಶ್ನೆ ಮಾಡುತ್ತಿದೆ. ಕೇರಳದ ಹಾದಿಯನ್ನು ಅನುಸರಿಸಿ ಕರ್ನಾಟಕವೂ ಪ್ಯಾಲೆಸ್ತೈನ್ ಸಿನಿಮಾಗಳ ಪ್ರದರ್ಶನಕ್ಕೆ ಒಪ್ಪುವದೆ..? ಅಥವಾ ಕೇಂದ್ರ ಆದೇಶಕ್ಕೆ ಮಣಿಯುವುದೇ ಎಂಬುದು ಸದ್ಯದ ಚರ್ಚೆಯಾಗಿದೆ.


