ಬೆಂಗಳೂರು : ನಟ ಡಾಲಿ ಧನಂಜಯ್ ಮಾಂಸಾಹಾರ ಸೇವಿಸಿದ ಫೋಟೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಚಾರಕ್ಕೆ ಸಂಬಂಧಿಸಿದಂತೆ , ನನ್ನ ಆಹಾರ ನನ್ನ ಆಯ್ಕೆ ಎಂದು ನಟ ಡಾಲಿ ಧನಂಜಯ್ ಸ್ಪಷ್ಟ ಉತ್ತರ ನೀಡಿದ್ದಾರೆ.
ತಾವು ಮಾಂಸಾಹಾರ ಸೇವಿಸಿದ್ದ ವಿಚಾರವನ್ನು ಚರ್ಚೆಗೆ ಎಳೆದು ಜಾತಿ ಮತ್ತು ಸಮುದಾಯವನ್ನು ಸೇರಿಸಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಅವರು, ನಾನು ನಾನ್ ವೆಜ್ ತಿನ್ನುವುದು ನನ್ನ ವೈಯಕ್ತಿಕ ಇಷ್ಟ ಅದರ ಮಧ್ಯೆ ಜಾತಿ ವಿಚಾರ ತರುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡಿರುವ ಅವರು , ನಾನು ನನ್ನ ಗೆಳೆಯನ ಹೋಟೆಲ್ಗೆ ಹೋಗಿ ಊಟ ಮಾಡಿಕೊಂಡು ಬಂದೆ ಅಷ್ಟೇ ಈ ವಿಷಯ ಇಷ್ಟೊಂದು ದೊಡ್ಡ ಚರ್ಚೆಯಾಗುತ್ತದೆ ಎಂದು ಊಹಿಸಿರಲಿಲ್ಲ , ನನ್ನ ಆಹಾರ ಪದ್ಧತಿ ಬಗ್ಗೆ ಮಾತನಾಡಲು ಇಷ್ಟಪಡುವುದಿಲ್ಲ ಆದರೆ ಅನಗತ್ಯವಾಗಿ ವಿಚಾರವನ್ನು ಎಳೆದು ತರುವುದೇ ಬೇಜಾರಾಯ್ತು ಎಂದು ಧನಂಜಯ್ ಬೇಸರ ವ್ಯಕ್ತಪಡಿಸಿದ್ದಾರೆ .
ನಟನಾಗಿ ಹಾಗೂ ನಿರ್ಮಾಪಕರಾಗಿ ನಾನು ಮಾಡುತ್ತಿರುವ ಕೆಲಸದ ಬಗ್ಗೆ ಚರ್ಚೆ ಆಗಬೇಕು ಆಹಾರ ವಿಚಾರದ ಬಗ್ಗೆ ಅಲ್ಲ ಎಂದು ಡಾಲಿ ಧನಂಜಯ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ .


