ತಮಿಳು ಸೂಪರ್ ಸ್ಟಾರ್ ನಟ ರಜನಿಕಾಂತ್ ಅವರಿಗೆ 75ನೇ ಹುಟ್ಟುಹಬ್ಬದ ಸಂಭ್ರಮ. ಪ್ರಧಾನಿ ನರೇಂದ್ರ ಮೋದಿ ಸೇರಿ ವಿವಿಧ ರಂಗಗಳ ಗಣ್ಯಾತೀಗಣ್ಯರು ಶುಭ ಕೋರಿದ್ದಾರೆ..
ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ರಜನಿಕಾಂತ್ ಚಿತ್ರರಂಗದ ಕೊಡುಗೆಯನ್ನ ಹಾಡಿಹೊಗಳಿದ್ದಾರೆ. ರಜನಿಕಾಂತ್ ಅವರ ಅಭಿನಯವು ಹಲವು ಪೀಳಿಗೆಗಳನ್ನು ಆಕರ್ಷಿಸಿದೆ ಮತ್ತು ವ್ಯಾಪಕ ಮೆಚ್ಚುಗೆಯನ್ನು ಗಳಿಸಿದೆ. ಅವರ ಪ್ರತಿಯೊಂದು ವೈವಿಧ್ಯಮಯ ಪಾತ್ರಗಳು ಚಲನಚಿತ್ರ ಜಗತ್ತಿನಲ್ಲಿ ಒಂದು ಬೆಂಚ್‌ಮಾರ್ಕ್ ಸೃಷ್ಟಿಸಿವೆ. ಅವರ ದೀರ್ಘ ಮತ್ತು ಆರೋಗ್ಯಕರ ಜೀವನಕ್ಕಾಗಿ ಪ್ರಾರ್ಥಿಸುತ್ತೇನೆ ಎಂದು ಶುಭ ಹಾರೈಸಿದ್ದಾರೆ..
ತಲೈವ ಹುಟ್ಟುಹಬ್ಬಕ್ಕೆ ಹಲವಾರು ಪ್ರಮುಖ ರಾಜಕೀಯ ನಾಯಕರು ಮತ್ತು ಚಲನಚಿತ್ರ ಗಣ್ಯರು ಶುಭ ಹಾರೈಸಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ತಮ್ಮ ಎಕ್ಸ್ ಖಾತೆಯ ಮೂಲಕ ತಲೈವಾ ಅವರಿಗೆ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಿದ್ದಾರೆ. ಸ್ಟಾಲಿನ್ ಅವರು ರಜನಿಕಾಂತ್ ಅವರೊಂದಿಗೆ ತಾವು ಹೊಂದಿರುವ ವೈಯಕ್ತಿಕ ಸ್ನೇಹ ಮತ್ತು ಚಿತ್ರರಂಗದಲ್ಲಿ ಅವರಿಂದ ರಾಜ್ಯಕ್ಕೆ ಸಿಕ್ಕ ಗೌರವದ ಬಗ್ಗೆ ತಿಳಿಸಿದ್ದಾರೆ.
ರಜನಿಕಾಂತ್ ಅವರ ಅಳಿಯ ಮತ್ತು ಖ್ಯಾತ ನಟ ಧನುಷ್ ಅವರು, ರಜನಿಕಾಂತ್‌ರಿಗೆ ತಲೈವಾ ಎಂದೇ ಸಂಬೋಧಿಸಿ, ಅವರ ಮಾರ್ಗದರ್ಶನ ಮತ್ತು ಪ್ರೇರಣೆಗೆ ಧನ್ಯವಾದಗಳನ್ನು ಸಲ್ಲಿಸಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ.


