ದಾವಣಗೆರೆ: ರಾಟ್ವೀಲರ್ ನಾಯಿಗಳ ದಾಳಿಗೆ ಮಹಿಳೆ ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಮಾಲೀಕ ಶೈಲೇಂದ್ರ ಕುಮಾರ್ನ್ನು ದಾವಣಗೆರೆ ಪೊಲೀಸರು ಬಂಧಿಸಿದ್ದಾರೆ..
ಹೊನ್ನೂರು ಕ್ರಾಸ್ ಬಳಿ ಡಿ. 5 ರಂದು ಬಂಧಿತ ಶೈಲೇಂದ್ರ ಕುಮಾರ್ ಹಲವು ವರ್ಷಗಳಿಂದ ರಾಟ್ ವೀಲರ್ ಶ್ವಾನಗಳನ್ನ ಸಾಕಿದ್ದರು. ಡಿ.5ರಂದು ಶ್ವಾನಗಳನ್ನು ಆಟೋದಲ್ಲಿ ತಂದು ಜಮೀನಿನಲ್ಲಿ ಬಿಟ್ಟುಹೋಗಿದ್ದರು. ಈ ವೇಳೆ ಮಲ್ಲಶೆಟ್ಟಿಹಳ್ಳಿ ನಿವಾಸಿ ಅನಿತಾ(38) ಎಂಬುವವರ ಮೇಲೆ ದಾಳಿ ಮಾಡಿದ್ದವು. ದಾವಣಗೆರೆ ತಾಲೂಕಿನ ಹೊನ್ನೂರು ಕ್ರಾಸ್ ಬಳಿ ಘಟನೆ ನಡೆದಿತ್ತು. ಈ ಸಂಬಂಧ ಗ್ರಾಮಸ್ಥರು ನಾಯಿ ಮಾಲೀಕನ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದರು. ಇದೀಗ ದಾವಣಗೆರೆ ಗ್ರಾಮಾಂತರ ಠಾಣೆ ಪೊಲೀಸರು ನಾಯಿಯ ಮಾಲೀಕನನ್ನು ಬಂಧಿಸಿದ್ದಾರೆ.
ಮಹಿಳೆಯನ್ನು ಕಚ್ಚಿ ಕೊಂದಿದ್ದ ರಾಟ್ ವೀಲರ್ ನಾಯಿಗಳು ಸಹ ಇಂದು ಸಾವನ್ನಪ್ಪಿವೆ. ಗ್ರಾಮಸ್ಥರು ನಾಯಿಗಳನ್ನು ಸೆರೆಹಿಡಿಯಲು ನಿರಂತರವಾಗಿ ಓಡಿಸಿದ್ದರಿಂದ ನಾಯಿಗಳು ನಿತ್ರಾಣಗೊಂಡಿದ್ದವು. ಬಳಿಕ ಅವುಗಳನ್ನು ಸೆರೆ ಹಿಡಿದು ಎಬಿಸಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿತ್ತು. ನಿರಂತರವಾಗಿ ಓಡಿದ್ದರಿಂದ ಅಂತರಿಕ ರಕ್ತಸ್ರಾವಾಗಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಇನ್ನು ಮಹಿಳೆ ಮೃತಪಟ್ಟಿದ್ದು, ನಾಲ್ಕು ಮಕ್ಕಳ ಅನಾಥರಾಗಿದ್ದು, ಸದ್ಯ ಚಿತ್ರದುರ್ಗ ಭೋವಿಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಈ ಅನಾಥ ಮಕ್ಕಳ ನೆರವಿಗೆ ನಿಂತಿದ್ದು, ಮಕ್ಕಳ ಜವಾಬ್ದಾರಿ ವಹಿಸಿಕೊಳ್ಳುವ ಭರವಸೆ ನೀಡಿದ್ದಾರೆ.


