ನವದೆಹಲಿ: ದಿತ್ವಾ ಚಂಡಮಾರುತ ಅಬ್ಬರಕ್ಕೆ ಶ್ರೀಲಂಕಾದಲ್ಲಿ ಜನಜೀವನ ಅಲ್ಲೋಲ ಕಲ್ಲೋಲವಾಗಿದೆ.. ಪ್ರವಾಹ, ಭೂಕುಸಿತದಿಂದ ಇದುವರೆಗೂ ಶ್ರೀಲಂಕಾದಲ್ಲಿ 123 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು. 120 ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ ಎಂದು ವಿಪತ್ತು ನಿರ್ವಹಣಾ ಕೇಂದ್ರ ಮಾಹಿತಿ ನೀಡಿದೆ.. ಹೀಗಾಗಿ ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ..
ಕಳೆದ ಒಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಹಲವು ಮನೆಗಳು ಹಾನಿಗೊಳಗಾಗಿದ್ದು, ಈವರೆಗೂ 436,995 ಜನರನ್ನು ಸ್ಥಳಾಂತರಿಸಲಾಗಿದೆ.. ದಿತ್ವಾ ಚಂಡಮಾರುತದ ನಂತರ, ಭಾರತವು ಇಂದು ‘ಆಪರೇಷನ್ ಸಾಗರ್ ಬಂಧು’ ಅಡಿಯಲ್ಲಿ 12 ಟನ್ ಮಾನವೀಯ ನೆರವಿನೊಂದಿಗೆ C-130J ವಿಮಾನವನ್ನು ಕೊಲಂಬೊಗೆ ರವಾನಿಸಿತು.
ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರು ಟೆಂಟ್‌ಗಳು, ಟಾರ್ಪೌಲಿನ್‌ಗಳು, ಕಂಬಳಿಗಳು, ನೈರ್ಮಲ್ಯ ಕಿಟ್‌ಗಳು ಮತ್ತು ತಿನ್ನಲು ಸಿದ್ಧವಾದ ಊಟ ಸೇರಿದಂತೆ ಸಹಾಯದ ಲ್ಯಾಂಡಿಂಗ್ ಅನ್ನು ಘೋಷಿಸಿದರು. ನಿನ್ನೆ INS ವಿಕ್ರಾಂತ್ ಮತ್ತು INS ಉದಯಗಿರಿ 4.5 ಟನ್ ಒಣ ದಿನಸಿ, 2 ಟನ್ ತಾಜಾ ಆಹಾರ ಮತ್ತು ಅಗತ್ಯ ವಸ್ತುಗಳನ್ನು ತಲುಪಿಸಿದ್ದವು. ಇಂದು 2ನೇ ಬಾರಿಗೆ ಭಾರತದಿಂದ ವಿಮಾನ ಶ್ರೀಲಂಕಾಕ್ಕೆ ಅಗತ್ಯ ವಸ್ತುಗಳನ್ನು ಹೊತ್ತೊಯ್ದಿದೆ. ಇದರ ಭಾಗವಾಗಿ ಪ್ರವಾಹ ಪೀಡಿತ ಪ್ರದೇಶಗಳಿಂದ ಸ್ಥಳಾಂತರಗೊಂಡವರಿಗಾಗಿ ತುರ್ತು ಪರಿಹಾರ ಸಾಮಗ್ರಿಗಳನ್ನ ಕಳುಹಿಸಿದೆ.


