ಮಂಡ್ಯ: ರಾಜ್ಯ ಸರ್ಕಾರದಲ್ಲಿ ಸಿಎಂ ಕುರ್ಚಿಗಾಗಿ ಹಗ್ಗ-ಜಗ್ಗಾಟ ನಡೆಯುತ್ತಿದ್ದು, ಡಿಸಿಎಂ ಡಿಕೆ ಶಿವಕುಮಾರ್ ಪರ ಒಕ್ಕಲಿಗ ಸಮುದಾಯ ಧ್ವನಿ ಎತ್ತಿದೆ.. ಪಕ್ಷಕ್ಕಾಗಿ ದುಡಿದಿರುವ ಡಿಕೆ ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ಸಿಗಬೇಕು ಎಂದು ನಿರ್ಮಾಲನಂದನಾಥ ಶ್ರೀಗಳು ಹೇಳಿದ್ರು. ನಿರ್ಮಾಲನಂದನಾಥ ಶ್ರೀಗಳು ದೆಹಲಿ ತೆರಳಿದ್ದು, ಕುತೂಹಲಕ್ಕೆ ಕಾರಣವಾಗಿದೆ.
ನಿರ್ಮಲಾನಂದನಾಥಸ್ವಾಮಿ ಅವರು ಇಂದು ಬೆಂಗಳೂರಿನಿಂದ ಇಂಡಿಗೊ ವಿಮಾನದ ಮೂಲಕ ದೆಹಲಿಗೆ ತೆರಳಿದ್ರು. ಖಾಸಗಿ ಕಾರ್ಯಕ್ರಮದ ನಿಮಿತ್ತ ತೆರಳುತ್ತಿರುವುದಾಗಿ ಮಠದ ಮೂಲಗಳ ಮಾಹಿತಿ ನೀಡಿದೆ. ಸಿಎಂ ಅಧಿಕಾರ ಹಂಚಿಕೆ ವಿಚಾರದ ಚರ್ಚೆಯ ನಡುವೆ ಶ್ರೀಗಳು ದೆಹಲಿ ಪ್ರವಾಸ ಕೈಗೊಂಡಿರೋದು ಭಾರೀ ಚರ್ಚೆಗೆ ಗ್ರಾಸವಾಗಿದೆ.
ಇನ್ನು ಮಠಾಧೀಶರು ಹೇಳಿದ ಕ್ಷಣ ಸಿಎಂ ಬದಲಾವಣೆ ಆಗುವ ಅವಕಾಶ ಇದೀಯಾ,ಎಂದು ಪ್ರಶ್ನಿಸುವ ಮೂಲಕ ನಿರ್ಮಲಾನಂದ ಶ್ರೀಗಳ ಹೇಳಿಕೆಗೆ ಕಾಗಿನೆಲೆ ಕನಕಗುರು ಪೀಠದ ನಿರಂಜನಾನಂದಪುರಿ ಸ್ವಾಮೀಜಿ ತಿರಗೇಟು ನೀಡಿದ್ದಾರೆ. ಬ್ಯಾಡಗಿ ತಾಲೂಕಿನ ಕಾಗಿನೆಲೆ ಕನಕಗುರು ಪೀಠದಲ್ಲಿ ಮಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಬದಲಾವಣೆ ಮಾಡುವಂತದ್ದು,ಆಯ್ಕೆ ಮಾಡುವಂತದ್ದು, ಸಾಂವಿಧಾನಿಕ ಹುದ್ದೆಯಲ್ಲಿರುವ ಶಾಸಕರ ಅಧಿಕಾರ.ಆಗಾಗಿ ಯಾರೂ ಮುಖ್ಯಮಂತ್ರಿ ಆಗಬೇಕು ಅನ್ನೋದನ್ನು ಶಾಸಕರು ನಿರ್ಣಯ ಮಾಡ್ತಾರೆ. ಅದು ಬಿಟ್ಟು ಯಾವೋದು ಒಬ್ಬ ಸ್ವಾಮಿಗಳು ಮಾಡೋದಲ್ಲ ಎಂದು ಹೇಳಿಕೆ ನೀಡಿದ್ದಾರೆ. ಗೊಂದಲ ಸೃಷ್ಟಿಸುವುದು ಯಾವ ಮಠಾಧೀಶರಿಗೂ ಸೂಕ್ತವಲ್ಲ.
ಡಿಕೆಶಿ ಪರ ಒಕ್ಕಲಿಗ ಸಮುದಾಯದ ನಿರ್ಮಲಾನಂದ ಶ್ರೀ ಬ್ಯಾಟಿಂಗ್ ವಿಚಾರವಾಗಿ ಪ್ರತಿಕ್ರಿಯಿಸಿರುವ ಕಾಗಿನೆಲೆ ಶಾಖಾಮಠದ ಸಿದ್ದರಾಮನಂದ ಮಹಾಪುರಿ ಸ್ವಾಮೀಜಿ ಮುಖ್ಯಮಂತ್ರಿ ಯಾರಾಗಬೇಕು ಎಂಬ ಬಗ್ಗೆ ಕಾಂಗ್ರೆಸ್ ಪಕ್ಷದ ನಾಯಕರು ಚರ್ಚೆ ಮಾಡಿ ಸೂಕ್ತ ನಿರ್ಣಯ ಕೈಗೊಳ್ಳುತ್ತಾರೆ. ಪಕ್ಷದ ವಿಚಾರಗಳಲ್ಲಿ ಸ್ವಾಮೀಜಿಗಳು ಮಧ್ಯೆ ಪ್ರವೇಶಿಸಿ ಗೊಂದಲ ಸೃಷ್ಟಿಸುವುದು ಯಾವ ಮಠಾಧೀಶರಿಗೂ ಸೂಕ್ತವಲ್ಲ ಎಂದು ಹೇಳಿದ್ದಾರೆ.
ಅವರು, ಸಿದ್ದರಾಮಯ್ಯನವರನ್ನು ಕುರುಬ ಸಮುದಾಯದ ವ್ಯಕ್ತಿಯಾಗಿಲ್ಲ ನೋಡಿಲ್ಲ. ರಾಜ್ಯದ ಪ್ರತಿನಿಧಿಯಾಗಿ ಸಮರ್ಥವಾಗಿ ಆಡಳಿತವನ್ನ ಮಾಡಿದ್ದಾರೆ.


