ಆನೇಕಲ್ : ಜಲ್ಲಿ ತುಂಬಿದ್ದ ಲಾರಿಯೊಂದು ರಸ್ತೆಗುಂಡಿ ತಪ್ಪಿಸಲು ಹೋಗಿ ರಸ್ತೆ ಪಕ್ಕದಲ್ಲಿರುವ ಕೆರೆಗೆ ಉರುಳಿದ ಘಟನೆ ಘಟನೆ ಆನೇಕಲ್ನ ಅತ್ತಿಬೆಲೆಯ ಸರ್ಜಾಪುರ ಮುಖ್ಯರಸ್ತೆ ಬಿದರಗುಪ್ಪೆ ಬಳಿ ನಡೆದಿದೆ..
ಘಟನೆಯಲ್ಲಿ 37 ವರ್ಷದ ಚಾಲಕ ಮಹೇಶ್ ಸಾವನ್ನಪ್ಪಿದ್ದಾರೆ.. ಕಲಬುರಗಿ ಮೂಲದ ಚಾಲಕ ಕಳೆದ ರಾತ್ರಿ ಜಲ್ಲಿ ತುಂಬಿಕೊಂಡು ಹೋಗುತ್ತಿರುವ ವೇಳೆ ನಿಯಂತ್ರಣ ಕಳೆದಕೊಂಡ ಚಾಲಕ ಲಾರಿ ಸಮೇತ ಕೆರೆಗೆ ಬಿದ್ದಿದೆ.. ಚಾಲಕ ನೀರಿನಲ್ಲಿ ಮುಳುಗಿರುವ ಶಂಕೆ ವ್ಯಕ್ತವಾಗಿದೆ.. ಕ್ರೇನ್ ಸಹಾಯದಿಂದ ಲಾರಿ ಮತ್ತು ಚಾಲಕನ ಮೃತ ದೇಹವನ್ನು ಕೆರೆಯಿಂದ ಹೊರ ತೆಗೆಯಲಾಗಿದೆ.
ಕೆರೆ ಏರಿಮೇಲಿರುವ ರಸ್ತೆ ಬಹಳ ಕಿರಿದಾಗಿರುವ ಜೊತೆಗೆ, ರಸ್ತೆಯ ಅವ್ಯವಸ್ಥೆಯೇ ಅಪಘಾತಕ್ಕೆ ಕಾರಣ ಎಂಬ ಆರೋಪ ಕೇಳಿಬಂದಿದೆ. RNS ಕಂಪನಿಗೆ ರಸ್ತೆ ಅಭಿವೃದ್ಧಿಯ ಟೆಂಡರ್ ನೀಡಲಾಗಿದ್ದು, ಕಂಪನಿ ಕೆರೆ ಏರಿ ಮೇಲಿನ ರಸ್ತೆ ವಿಸ್ತರಣೆ ಮಾಡದೆ ಹಾಗೇ ಬಿಟ್ಟಿದೆ. ಜೊತೆಗೆ ಇರುವ ಕಿರಿದಾದ ರಸ್ತೆಯೂ ಹೊಂಡಗಳಿಂದ ಕೂಡಿದೆ ಎಂದು ಸ್ಥಳೀಯರು ದೂರಿದ್ದಾರೆ. ಘಟನಾ ಸ್ಥಳದಲ್ಲಿ SDRF, ಅಗ್ನಿಶಾಮಕ ತಂಡ, ಪೊಲೀಸರ ಸಹಯೋಗದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಮೃತ ದೇಹವನ್ನ ಅತ್ತಿಬೆಲೆಯ ಆಕ್ಸ್‌ಫರ್ಡ್ ಆಸ್ಪತ್ರೆಗೆ ರವಾನಿಸಲಾಗಿದೆ.


