ಬೆಂಗಳೂರು: ಕೆಟ್ಟು ನಿಂತಿದ್ದ ಕಾರಿಗೆ ಕ್ಯಾಂಟರ್ ಡಿಕ್ಕಿ ಹೊಡೆದ ಜನಪ್ರಿಯ ಡ್ಯಾನ್ಸರ್ ಸುಧೀಂದ್ರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಪೆಮ್ಮನಹಳ್ಳಿ ಬಳಿ ನಡೆದಿದೆ..
ಸುಧೀಂದ್ರ ರಸ್ತೆ ಮಧ್ಯೆ ಕಾರು ಕೆಟ್ಟು ನಿಂತಿದ್ದರಿಂದ ಪರೀಕ್ಷಿಸಲು ಕಾರಿನಿಂದ ಕೆಳಗಿಳಿದ ವೇಳೆ ಕ್ಯಾಂಟರ್ ಲಾರಿ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಸ್ಥಳದಲ್ಲೇ ಸುಧೀಂದ್ರ ಮೃತಪಟ್ಟಿದ್ದಾರೆ. ಸುಧೀಂದ್ರ ಅವರು ಕನ್ನಡ ಟೆಲಿವಿಷನ್ ಜಗತ್ತಿನಲ್ಲಿ ಗುರುತಿಸಿಕೊಂಡಿದ್ದ ಡ್ಯಾನ್ಸರ್.
ಕ್ಯಾಂಟರ್ ಚಾಲಕ ಘಟನೆಯ ನಂತರ ತಕ್ಷಣವೇ ವಾಹನವನ್ನು ಸ್ಥಳದಲ್ಲಿ ನಿಲ್ಲಿಸಿ ಪರಾರಿಯಾಗಿದ್ದಾನೆ. ದಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಚಾಲಕನ ಹುಡುಕಾಟ ನಡೆಸುತ್ತಿದ್ದಾರೆ.


