Sunday, December 7, 2025
23.6 C
Bengaluru
Google search engine
LIVE
ಮನೆಫ್ರೀಡಂ ಟಿವಿ ವಿಶೇಷಕಲರ್ಸ್ ಕನ್ನಡ ಧಾರಾವಾಹಿಗಳಲ್ಲಿ ತಿಂಗಳು ಪೂರ್ತಿ ಕನ್ನಡ ಹಬ್ಬ !!

ಕಲರ್ಸ್ ಕನ್ನಡ ಧಾರಾವಾಹಿಗಳಲ್ಲಿ ತಿಂಗಳು ಪೂರ್ತಿ ಕನ್ನಡ ಹಬ್ಬ !!

ಕಲರ್ಸ್ ಕನ್ನಡ ಕನ್ನಡ ರಾಜ್ಯೋತ್ಸವವನ್ನು ತನ್ನ ಧಾರಾವಾಹಿಗಳಲ್ಲಿಯೂ ವಿಶಿಷ್ಟವಾಗಿ ಆಚರಿಸಲಿದೆ. ಕತೆಗಳಲ್ಲಿ ಕನ್ನಡತನ ತರುವ ಈ ಪ್ರಯತ್ನವನ್ನು ಪ್ರೋಮೋದಲ್ಲಿ ನೋಡಿರುವ ಕನ್ನಡದ ವೀಕ್ಷಕರು ಮೆಚ್ಚಿಕೊಂಡಿದ್ದಾರೆ. ಒಟ್ಟಿನಲ್ಲಿ ನವೆಂಬರ್ ತಿಂಗಳು ಪೂರ್ತಿ ಕನ್ನಡದ ಸಂಭ್ರಮ ಕಲರ್ಸ್ ಕನ್ನಡದ ಧಾರಾವಾಹಿಗಳಲ್ಲಿ ಜೋರಾಗಿ ನಡೆಯಲಿದೆ. ಅದರ ವಿವರಗಳು ಹೀಗಿವೆ.

ರಾಮಾಚಾರಿ:

Ramachaari (TV series) - Wikipedia
ಚಾರು ದೇವಸ್ಥಾನದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡುತ್ತಾಳೆ ಮತ್ತು ಮಗುವಿಗೆ ಅರಿಶಿನ ಮತ್ತು ಕುಂಕುಮದಿಂದ ಕೂಡಿದ ಕನ್ನಡ ಧ್ವಜದ ಬಣ್ಣದ ಸೀರೆ ಹಾಕಲಾಗುತ್ತದೆ. ರಾಮಾಚಾರಿ ತನ್ನ ಮಗುವಿನ ಜನ್ಮವನ್ನು ಕನ್ನಡ ತಾಯಿ ಭುವನೇಶ್ವರಿಯ ಆಶೀರ್ವಾದ ಎಂದು ಹೇಳಿ ಅವನು ಮಾಡುವ ಪ್ರತಿಜ್ಞೆ ಏನು?

ಪ್ರೇಮ ಕಾವ್ಯ:

Premakavya - JioHotstarಕನ್ನಡ ರಾಜ್ಯೋತ್ಸವ ಆಚರಣೆಗಾಗಿ ಆಸ್ಪತ್ರೆಯಲ್ಲಿ ಹಬ್ಬದ ಅಲಂಕಾರ ಮಾಡಲಾಗುತ್ತದೆ. ಧನರಾಜ್, ರಾಮ್ ಮತ್ತು ಶ್ರಿಯಾ ವೇದಿಕೆಗೆ ಆಹ್ವಾನಿತರಾಗಿರುತ್ತಾರೆ ಮತ್ತು ರಾಮ್ ತನ್ನ ಹಳ್ಳಿಗೆ ಮಾಡಿದ ಸೇವೆಗೆ ಹೆಮ್ಮೆಪಡುತ್ತಾನೆ—ಅವನಿಗೆ ಹಲವಾರು ವಿದೇಶಿ ಅವಕಾಶಗಳಿದ್ದರೂ ಹಳ್ಳಿಯಲ್ಲಿ ಸೇವೆ ಸಲ್ಲಿಸುತ್ತಿರುತ್ತಾನೆ. ರಾಮ್ ರಾಜ್ಯದ ಪ್ರೀತಿ ಮತ್ತು ಭಾಷೆಯ ಬಗ್ಗೆ ಭಾವುಕನಾಗಿ ಮಾತನಾಡುತ್ತಾನೆ.
ಆಗ ಅವನಿಗೆ ಒದಗುವ ಅಚ್ಚರಿ ಏನು?

ಭಾಗ್ಯಲಕ್ಷ್ಮಿ:

Bhagyalakshmi - JioHotstarಸಕಲೇಶಪುರದ ಶಾಲೆಯಲ್ಲಿ ಭಾಗ್ಯ ಮತ್ತು ಆದಿಯನ್ನು ಕನ್ನಡ ರಾಜ್ಯೋತ್ಸವ ಹಿನ್ನಲೆಯಲ್ಲಿ ಗೌರವಿಸಲಾಗುತ್ತದೆ. ಬಿಗ್‌ಬಾಸ್ ಸ್ಪರ್ಧಿ ಕರಿಬಸಪ್ಪ ಕೂಡ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುತ್ತಾರೆ.

ಮುದ್ದು ಸೊಸೆ:

Muddu Soseವಿದ್ಯಾ ಶಿವರಾಜಯೋಗಿಗಾಗಿ ಗ್ರಾಮದ ಮಟ್ಟದಲ್ಲಿ ಪ್ರಚಾರ ಮಾಡುತ್ತಾಳೆ. ಕನ್ನಡ ರಾಜ್ಯೋತ್ಸವ ಆಚರಣೆಗೆ ಯೋಜನೆ ರೂಪಿಸುತ್ತಾಳೆ. ಈಶ್ವರಿ ಇದನ್ನು ವಿಫಲಗೊಳಿಸಲು ಆಚರಣೆಗೆ ಅಡ್ಡಿಪಡಿಸಲು ಪ್ರಯತ್ನಿಸುತ್ತಾಳೆ. ಅದು ನೆರವೇರುತ್ತಾ?

ಗಂಧದ ಗುಡಿ:

ಹೊಸ ಕಥೆ, ಹೊಸ ತಿರುವು! Colors Kannada ನಲ್ಲಿ 'ಶ್ರೀ ಗಂಧದ ಗುಡಿ' - Chittara newsತಿಂಗಳ ಆರಂಭದಲ್ಲಿ ಪೊಲೀಸ್ ಠಾಣೆಯಲ್ಲಿ ವಿಶೇಷ ಪೋಲೀಸ್ ಪಾತ್ರದಲ್ಲಿ ರವಿ ಕಾಳೆ ಕಾಣಿಸಿಕೊಳ್ಳುತ್ತಾರೆ ಮತ್ತು ಕನ್ನಡ ನಾಡಿನ ಹಾಡೊಂದನ್ನು ಹಾಡುತ್ತಾರೆ. ನಂತರ ತಿಂಗಳ ಕೊನೆಯಲ್ಲಿ ನಾಯಕ ನಾಯಕಿಯರು ರಾಜ್ಯೋತ್ಸವ ಸಂಬಂಧಿತ ಹಾಡುಗಳಿಗೆ ನೃತ್ಯ ಮಾಡುತ್ತಾರೆ.

ಭಾರ್ಗವಿ LLB:

Kannada Tv Serial Bhargavi Llb Synopsis Aired On Colors Kannada Channel

ಜೆಪಿ ಪಾಟೀಲ್ ವಿಕಿಯನ್ನು ರಕ್ಷಿಸಲು ಆಗುವುದಿಲ್ಲ. ವಿಕಿಗೆ ನ್ಯಾಯಾಲಯದಲ್ಲಿ ಜಾಮೀನು ಸಿಗುವುದಿಲ್ಲ. ಭಾರ್ಗವಿ ನ್ಯಾಯಾಲಯದಲ್ಲಿ ವಿಜಯ ಸಾಧಿಸುತ್ತಾಳೆ. ಕನ್ನಡದ ಹೆಣ್ಣು ಮಕ್ಕಳಿಗೆ ಅವಮಾನಿಸಿದರೆ ಇದೇ ಗತಿ ಎಂದು ಉದಾಹರಣೆ ಸಮೇತ ವಿಕಿಗೆ ವಾರ್ನಿಂಗ್ ಕೊಡುತ್ತಾಳೆ ಭಾರ್ಗವಿ.
ನ್ಯಾಯಾಲಯದ ಹೊರ ಆವರಣದಲ್ಲಿ ಕನ್ನಡ ರಾಜ್ಯೋತ್ಸವದ ಸಂಭ್ರಮಾಚರಣೆ ನಡೆಯುತ್ತಿರುತ್ತದೆ.

ನಂದ ಗೋಕುಲ:

Nandagokula - JioHotstarಗಿರಿಜಾ ಯಾವ ರಂಗೋಲಿ ಇಡುವುದೆಂದು ಆಳವಾಗಿ ಯೋಚನೆಯಲ್ಲಿ ತೊಡಗಿರುವಾಗ, ಮೀನಾ ಅವಳಿಗೆ ಇವತ್ತು ವಿಶೇಷ ದಿನ ಎಂದು ನೆನಪಿಸುತ್ತಾಳೆ —ಭುವನೇಶ್ವರಿ ದೇವಿ , ರಾಜ್ಯೋತ್ಸವದ ಆಚರಣೆಯ ಮಾತುಕತೆಯ ನಂತರ ಅಮೂಲ್ಯ ಕೂಡ ಸೇರಿಕೊಂಡು ಅವರು ಕನ್ನಡ ರಾಜ್ಯೋತ್ಸವದ ಪರಿಕಲ್ಪನೆಯ ರಂಗೋಲಿ ಇಡುತ್ತಾರೆ. ಹಾಗೂ ಕನ್ನಡ ಸಾಹಿತ್ಯ ಸಂಸ್ಕೃತಿಯ ಕುರಿತಂತೆ ಮೀನಾ ತನ್ನ ಕಚೇರಿಯಲ್ಲಿ ಸಹೋದ್ಯೋಗಿಗಳ ಜೊತೆ ಕನ್ನಡ ಪುಸ್ತಕ ಮಳಿಗೆ ಇಡುತ್ತಾಳೆ. ಅಲ್ಲಿ ಒಬ್ಬ ಇಂಗ್ಲಿಷ್ ನಲ್ಲಿ ಮಾತನಾಡುವ ವ್ಯಕ್ತಿ ಕನ್ನಡವನ್ನು ನಿಂದಿಸಿದಾಗ, ಮೀನಾ ಅವನಿಗೆ ಹೇಗೆ ಪಾಠ ಕಲಿಸುತ್ತಾಳೆ?

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments