ಬೆಂಗಳೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಚುನಾವಣೆಯ ಡೇಟ್ ಫಿಕ್ಸ್ ಮಾಡಲಾಗಿದೆ. ಡಿಸೆಂಬರ್ 20 ರಂದು ಅಧ್ಯಕ್ಷಸ್ಥಾನ, ಉಪಾಧ್ಯಕ್ಷ ಸ್ಥಾನ, ವಿತರಕ ವಲಯ, ಪ್ರದರ್ಶಕರ ವಲಯ, ಕಾರ್ಯದರ್ಶಿ ಹಾಗೂ ಸದಸ್ಯ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.
ಈ ಬಾರಿ ನಿರ್ಮಾಪಕ ಸಂಘದಿಂದ ಅಧ್ಯಕ್ಷರಾಗಲು ಅವಕಾಶವಿರುವ ಕಾರಣ ಸಾರಾ ಗೋವಿಂದು ಸೇರಿದಂತೆ ಹಲವರು ಸ್ಪರ್ಧೆಗಳಿಯಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ.
ಕಳೆದ ವರ್ಷ ಡಿ.14ರಂದು ಚುನಾವಣೆ ನಡೆದಿತ್ತು. ಪ್ರದರ್ಶಕ ವಲಯದಿಂದ ಅಧ್ಯಕ್ಷರಾಗಿ ಎಂ.ನರಸಿಂಹಲು ಆಯ್ಕೆ ಆಗಿದ್ದರು. ಈ ವರ್ಷ ಡಿಸೆಂಬರ್ 20ರಂದು ಚುನಾವಣೆಗೆ ದಿನಾಂಕ ನಿಗಧಿ ಮಾಡಲಾಗಿದೆಯಂತೆ. ಈ ಬಗ್ಗೆ ಕಾರ್ಯಕಾರ್ಯಿಣಿ ಸಭೆಯಲ್ಲಿ ಮಾತುಕತೆಯಾಗಿದೆ ಎನ್ನಲಾಗ್ತಿದೆ.


