ಚಿಕ್ಕಬಳ್ಳಾಪುರ: ಎಲ್ಲೆಂದರಲ್ಲಿ ಕಸ ಬಿಸಡುವ ಮನೆ ಬಾಗಿಲಿಗೀ ಕಸದ ರಾಶಿ ಸುರಿಯಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮುಂದಾಗಿದ್ದು, ಚಿಕ್ಕಬಳ್ಳಾಪುರದಲ್ಲಿ ರಸ್ತೆಗೆ ತಂದು ಕಸ ಸುರಿದ ಯುವಕ ಬೈಕ್ ಅನ್ನು ನಗರಸಭೆ ಸಿಬ್ಬಂದಿ ವಶಕ್ಕೆ ಪಡೆದುಕೊಂಡಿದ್ದಾರೆ..
ನಗರದ ಕಂದವಾರ ರಸ್ತೆಯಲ್ಲಿ ಯುವಕ ಕಸ ಸುರಿಯುತ್ತಿದ್ದ. ಈ ವೇಳೆ ನಗರಸಭೆ ಸಿಬ್ಬಂದಿ ಪ್ರಶ್ನಿಸಿ, ದಂಡ ಕಟ್ಟುವಂತೆ ಸೂಚಿಸಿದ್ದಾರೆ. ಆಗ ಯುವಕ ಸಿಬ್ಬಂದಿ ಬಳಿ ಗಲಾಟೆ ಮಾಡಿದ್ದಾನೆ. ಅಲ್ಲದೇ ದಂಡ ಕಟ್ಟಲ್ಲ, ಏನ್ ಮಾಡ್ತೀರೋ ಮಾಡಿ ಎಂದು ಅವಾಜ್ ಹಾಕಿದ್ದಾನೆ. ದಂಡ ಕಟ್ಟದ ಕಾರಣ ಯುವಕನ ಬೈಕ್‌ನ್ನ ನಗರಸಭೆ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ.


