Thursday, November 20, 2025
19.9 C
Bengaluru
Google search engine
LIVE
ಮನೆವಿಶೇಷಬಸವಣ್ಣ ವಿರಚಿತ ವ್ಯಕ್ತ ಶೂನ್ಯಪೀಠವೇರಿ ಅವ್ಯಕ್ತನಾದ ಅಲ್ಲಮ

ಬಸವಣ್ಣ ವಿರಚಿತ ವ್ಯಕ್ತ ಶೂನ್ಯಪೀಠವೇರಿ ಅವ್ಯಕ್ತನಾದ ಅಲ್ಲಮ

ಶೂನ್ಯ ಎಂಬುದಕ್ಕೆ ಬೇರೆಬೇರೆ ಅರ್ಥದ ನೆಲಸುಗಳುಂಟು. ತತ್ವಶಾಸ್ತ್ರ, ಅಧ್ಯಾತ್ಮವಿದ್ಯೆ ಮತ್ತು ಅನುಭಾವಶಾಸ್ತ್ರದಲ್ಲಿ ಭಿನ್ನಭಿನ್ನ ಬಗೆಯ ಅರ್ಥಗಳು ಕಾಣಬರುತ್ತವೆ. ವೈದಿಕ, ಬೌದ್ಧ ಮತ್ತು ಜೈನದರ್ಶನಗಳು ಪ್ರಧಾನವಾಗಿ ದರ್ಶನಶಾಖೆಗೆ ಸೇರಿವೆ.

ಅಲ್ಲಿ ಬಳಕೆಗೊಂಡಿರುವ ಕ್ರಮ ಬೇರೆ ಬೇರೆ ಅರ್ಥದ ನೆಲೆಗಳಿಗೆ ಸೇರಿದೆ. ಇದು ಪ್ರಧಾನವಾಗಿ ‘ಅನುಭಾವಶಾಸ್ತ್ರ’ಕ್ಕೆ ಸಂಬಂಧಿಸಿದ್ದು, ಭವ-ಅನುಭವ ಮತ್ತು ಅನುಭಾವ ಎಂಬುದು ಸರಣಿಕ್ರಮ! ಇದು ವ್ಯಕ್ತವೂ ಹೌದು; ಅವ್ಯಕ್ತವೂ ಹೌದು. ವೀರಶೈವ ದರ್ಶನವು ಶೂನ್ಯವನ್ನು ಸಿದ್ದಿಯ ಚರಮರೂಪವೆಂದು ಭಾವಿಸುತ್ತದೆ. ಇದು ಪರಮಶಿವನ ಒಂದು ಅವಸ್ಥೆ ಎನ್ನಬಹುದು. ಶೂನ್ಯಲಿಂಗ, ಮಹಾಶೂನ್ಯ ಎಂದ ಹಾಗೆ ಬಯಲು ಎಂಬ ಮಾತಿಗೂ ಇದೇ ಅರ್ಥದ ನೆಲಸುಂಟು. ಅಲ್ಲಮನು ಏರಿದ ಶೂನ್ಯಸಿಂಹಾಸನಕ್ಕೆ ದ್ವಿಮುಖ ಅರ್ಥಗಳುಂಟು. ಒಂದು ಅಭೌತಿಕ; ಇನ್ನೊಂದು ಭೌತಿಕ. ಒಂದು ವ್ಯಕ್ತರೂಪ; ಮತ್ತೊಂದು ಅವ್ಯಕ್ತರೂಪ, ಬಸವಣ್ಣನು ರಚಿಸಿದ ಶೂನ್ಯಪೀಠವು ವ್ಯಕ್ತವಾದುದು. ಅದನ್ನು ಏರಿ ಅಲ್ಲಮನು ಅವ್ಯಕ್ತನಾದ.

ಲೋಕದ ಕಣ್ಣಿಗೆ ಅದು ಸಿಂಹಾಸನ, ಅನುಭಾವದಲ್ಲಿ ಅಂಗನು ಲಿಂಗದಲ್ಲಿ ಭಿನ್ನವಿಲ್ಲದ ಹಾಗೆ ಒಂದಾಗುವುದು ಉಂಟಷ್ಟೆ. ಆಗ ಶಿವನು ಶೂನ್ಯರೂಪದಲ್ಲಿ ಕಾಣುತ್ತಾನೆ! ಶೂನ್ಯವೆಂದರೆ ಯಾವುದೇ ಗುಣಕರ್ಮಗಳಿಲ್ಲದ ಪರಶಿವನ ಅವಸ್ಥೆ ಎಂದು ನಾವು ತಿಳಿಯಬೇಕು! ರಾಜನಾದವನು ಸಿಂಹಾಸನದಲ್ಲಿ ಮಂಡಿಸಿ ಭೌತಿಕವಾದ ರಾಜ್ಯಸೂತ್ತವನ್ನು ಆಳುತ್ತಾನೆ. ಅದರಂತೆ ಶ್ರೇಷ್ಠವಾದ ಶೂನ್ಯಲಿಂಗವು ಶೂನ್ಯ ಸಿಂಹಾಸನದಲ್ಲಿ ಆಸೀನವಾಗಿರುತ್ತದೆ.

ಉಪನಿಷತ್ತಿನ ಮಂತ್ರವೊಂದು ಸಾಂಕೇತಿಕವಾಗಿ ಇದನ್ನೇ ಹೇಳುತ್ತದೆ. ‘ಪೂರ್ಣಮದಃ ಪೂರ್ಣಮಿದಂ ಪೂರ್ಣಾತ್ ಪೂರ್ಣಾಮುದಚ್ಯತೇ। ಪೂರ್ಣಸ್ಯ ಪೂರ್ಣಮಾದಾಯ ಪೂರ್ಣಮೇವಾವಶಿಷ್ಯತೇ।’- ಜೀವನು ಪೂರ್ಣತ್ವವನ್ನು ಪಡೆದ ಮೇಲೆ ಪರಿಪೂರ್ಣನಾದ ಪರಶಿವನಲ್ಲಿ ಪೂರ್ಣತ್ವವನ್ನು ಪಡೆಯುತ್ತಾನೆ.
ಅಲ್ಲಮನು ಬಯಲರೂಪಿಯಷ್ಟೆ. ಅರ್ಥಾತ್ ಅವನು ಶೂನ್ಯನೇ. ಇಂಥ ಶ್ರೇಷ್ಠ ಅನುಭಾವಿಯಾದ ಅಲ್ಲಮನು ಮಹಾಮನೆಗೆ ಬಂದು ಶೂನ್ಯಸಿಂಹಾಸನವನ್ನು ಎರಿದ್ದು ಯಾವ ಸೋಜಿಗವೂ ಅಲ್ಲ; ಅಚ್ಚರಿಯೂ ಅಲ್ಲ.

ಶಿವಗಣಪ್ರಸಾದಿ ಮಹಾದೇವಯ್ಯ ಮತ್ತು ಚಾಮರಸ ಇವರಿಬ್ಬರೂ ಸಿಂಹಾಸನಾರೋಹಣ ಮಾಡಿದ ಕ್ರಮವನ್ನು ತಮ್ಮ ತಮ್ಮ ರೀತಿಯಲ್ಲಿ ಧ್ವನಿಸುತ್ತಾರೆ. ಚಾಮರಸನ ಉಪಕ್ರಮವನ್ನು ಗಮನಿಸೋಣ. ಅಲ್ಲಮನು ಜಗದ ಯಂತ್ರದ ಸೂತ್ರಧಾರಿ. ಅವನು ಸಗುಣನೂ ಹೌದು; ನಿರ್ಗುಣನೂ ಹೌದು. ಇಂಥವನಿಗೆ ವಿಚಾರಮಾಡಿ ನೋಡಿದರೆ ಅವನಿಗೆ ಮೀರಿದ್ದು ಯಾವುದುಂಟು? ಇಂಥ ಮಹಾಮಹಿಮನಾದ ಅಲ್ಲಮನು ಲೀಲೆಯಿಂದ
ಪ್ರೊ. ಮಲ್ಲೇಪುರಂ ಜಿ. ಶೂನ್ಯಪೀಠಾರೋಹಣ ಲೇಖಕರು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ವಾಂಶ ಕುಲಪತಿಗಳು. ಕನ್ನಡ ಹಾಗೂ ಸಂಸ್ಕೃತ ವಿದ್ವಾಂಸರು)

ಶೂನ್ಯಸಿಂಹಾಸನವನ್ನು ಏರಿದನು. ಈ ದೇಹವೆಂಬ ಯಂತ್ರದಲ್ಲಿ ಜೀವನು ನಾಡಿಗಳನ್ನು ಆಯಾ ರೀತಿಯಲ್ಲಿಯೇ ಸಮ ಜೋಡಿಗೊಳಿಸುವ ರೀತಿಯಲ್ಲಿ ಶೂನ್ಯಪೀಠವನ್ನು ಏರಿದ. ಅವನು ಸೂತ್ರವನ್ನು ಗಮನಿಸಿಕೊಂಡ. ಷಟ್ ವೆಂಕಟೇಶ ಸ್ಥಲದ ಸೂಕ್ಷ್ಮತೆಗಳನ್ನು ಸ್ಪರ್ಷಿಸುತ್ತಲೇ ಏರಿದ. ನಾವು ಇಲ್ಲಿ ಗಮನಿಸಬೇಕಾದ್ದು ಮೊದಲು ಭೌತಿಕ ಸಿಂಹಾಸನವನ್ನು ತನ್ನಲ್ಲಿಯೇ ಪ್ರತ್ಯಕ್ಷೀಕರಿಸಿಕೊಂಡ. ಇದು ಅಲ್ಲಮನಿಗೆ ಮಾತ್ರ ಸಾಧ್ಯವಾಯಿತು! ಅವನು ಒಂದೊಂದು ಮೆಟ್ಟಿಲನ್ನು ಏರುವಾಗ ಅವನಲ್ಲಿ ವಿಕಾಸಗೊಳ್ಳುತ್ತಿದ್ದ ಕ್ರಮವನ್ನು ಚಾಮರಸನ ಮಾತಿನಲ್ಲಿಯೇ
ಕಥನ ಏರುವಾಗ ಶೂನ್ಯಸಿಂಹಾಸನದ ಅಲ್ಲಮ

ಆರು ಚಕ್ರವನಾರು ಶಕ್ತಿಯ/ನಾರು ಮತಿಗಳನಾರು ಗತಿಗಳ/ನಾರು ವರ್ಣವನಾರು ನಿರ್ಣಯವಾದ ಸಂಪದವ/ಆರು ಪರಿಯಲಿ ಸವೆದು ಸಲೆ ನೆಲೆ/ದೋರುವೆಡೆಗಳನೆ ನೋಡುತ ಲೇರುತಿರ್ದನು ಶೂನ್ಯಸಿಂಹಾಸನವ ಪ್ರಭುರಾಯ ಅಲ್ಲಮಪ್ರಭು ಏರಿದ್ದು ಭೌತಿಕರೂಪದ ಸಿಂಹಾಸನದಂತೆ ಕಾಣುವ ಶೂನ್ಯಪೀಠವನ್ನೇ ಅವನು ಷಟ್‌ಚಕ್ರ, ಷಟ್‌ಶಕ್ತಿ, ಷಣ್ಮತಿ, ಪಟ್‌ಗತಿ, ಷಡ್ವರ್ಣ, ಷಟ್‌ಸಂಪದವನ್ನು ಆರು ರೀತಿಯಲ್ಲಿ ನಿರ್ಮಿಸಿ ನೆಲೆ ಕಾಣಿಸುವಂಥ ಸ್ಥಳಗಳನ್ನು ವಿಶೇಷವಾಗಿ ಪರಿಶೀಲಿಸುತ್ತ ಶೂನ್ಯಪೀಠವನ್ನು ಪ್ರಭುರಾಯ ಏರಿದ್ದುದನ್ನು ಚಾಮರಸ ತನ್ನ ಅನುಭಾವಿಕ ನೆಲೆಯಿಂದ ಹೇಳುತ್ತಿದ್ದಾನೆ.

ನಮ್ಮ ದೇಹಗಳಲ್ಲಿ ಅರುಚಕ್ರಗಳಿವೆ. ಸಾಧಕರು ಪರಶಿವನ ಅನುಗ್ರಹದಿಂದಲೂ ತಮ್ಮ ಸ್ವಂತ ಪ್ರಭೆಯಿಂದಲೂ ಷಟ್ ಚಕ್ರವನ್ನು ಭೇದಿಸುತ್ತಾರೆ. ಅದೇ ರೀತಿ ಆರು ಶಕ್ತಿಗಳುಂಟು, ಕ್ರಿಯಾಶಕ್ತಿಯಿಂದ ಪ್ರಾರಂಭವಾಗಿ ಚಿತ್‌ಶಕ್ತಿಗಳ ವರೆಗೂ ಅದರ ವ್ಯಾಪನ ಉಂಟು. ಇನ್ನು ಆರು ಗತಿಗಳೆಂದರೆ: ಷಟ್ ಸ್ಥಲಗಳೆಂದು ಅರ್ಥ. ಜ್ಞಾನ ಅಥವ ಮತಿ, ಶ್ರುತಿ, ಖಂಡ, ಕೇವಲ, ಜ್ಯೋತಿ ಮತ್ತು ಮಹಾಜ್ಯೋತಿಗಳೆಂಬುವೇ ಆರು ಮತಗಳೆಂದು ಅರ್ಥ, ಪೀತ, ಶ್ವೇತ, ಹರಿತ, ಮಾಂಜಿಸ್ಟ, ಕಪೋತ ಮತ್ತು ಮಾಣಿಕ್ಯ ಎಂಬಿವು ಅರು ವರ್ಣಗಳು, ಷಟ್ ಸಂಪತ್ತುಗಳೆಂದರೆ: ಅಣಿಮಾದಿಸಿದ್ದಿ, ಧರ್ಮ, ಯಶಸ್ಸು, ಧನ, ಜ್ಞಾನ ಮತ್ತು ವಿಜ್ಞಾನ. ಅಲ್ಲಮನು ಇವೆಲ್ಲವನ್ನು ಮೀರಿ ಶೂನ್ಯಸಿಂಹಾಸನವನ್ನು ಏರಿದ. ಇದು ಜಗಕ್ಕೆ ಚೋದ್ಯವಾಯಿತು. ಅಲ್ಲಮನು ಒಂದೊಂದು ಮೆಟ್ಟಲನ್ನು ಎರುವಾಗ ಆಯಾಯ ವಸ್ತು ಸಂಚಯಗಳನ್ನು ಮೀರಿ ನಡೆಯುತ್ತ ಸಾಗಿದುದನ್ನು ಚಾಮರಸ ಸ್ವಾನುಭವದ.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments