ಸೂಪರ್ ಸ್ಟಾರ್ ರಜನಿಕಾಂತ್ ಅವರು ಸ್ಟಾರ್ ನಟ ಆಗಿದ್ದರೂ, ಸರಳ ಜೀವನ ನಡೆಸಲು ಅವರು ಆದ್ಯತೆ ನೀಡುತ್ತಾರೆ.. ಇದೀಗ ಈಗ ಅವರ ಹೊಸ ಫೋಟೋ ಒಂದು ವೈರಲ್ ಆಗಿದೆ. ರಿಷಿಕೇಶಕ್ಕೆ ತೆರಳು ವೇಳೆ ಅವರು, ಸರಳವಾಗಿ ರಸ್ತೆ ಬದಿಯಲ್ಲಿ ನಿಂತು ಎಲೆಯ ಪ್ಲೇಟ್ನಲ್ಲಿ ಊಟ ಸವಿದಿದ್ದಾರೆ..
ಐಷಾರಾಮಿ ಜೀವನ ಮತ್ತು ಗ್ಲಾಮರ್ ಲೋಕದಿಂದ ದೂರವಿದ್ದು ಸರಳತೆಯನ್ನು ಆಯ್ಕೆ ಮಾಡಿಕೊಂಡಿದ್ದು, ಅವರ ನೈಜ ಭಕ್ತಿಯನ್ನು ಸೂಚಿಸುವಂತಿದೆ. ಇನ್ನೊಂದು ಫೋಟೋದಲ್ಲಿ ಅವರು ಸರಳವಾದ ಬಿಳಿ ಬಟ್ಟೆಗಳನ್ನು ಧರಿಸಿ, ಆಶ್ರಮದಲ್ಲಿ ಸ್ಥಳೀಯ ನಿವಾಸಿಗಳೊಂದಿಗೆ ಅರ್ಚಕರೊಬ್ಬರಿಗೆ ಗೌರವ ಸಲ್ಲಿಸುತ್ತಿರುವುದನ್ನು ಕಾಣಬಹುದಾಗಿದೆ. ಫೋಟೋಗಳಲ್ಲಿ ಕಂಡು ಬಂದ ದಿಗ್ಗಜ ನಟನ ನಮ್ರತೆಯನ್ನು ಪ್ರಶಂಸಿಸಲಾಗುತ್ತಿದೆ. ಅನೇಕರು ಅವರ ಸರಳ ನಡವಳಿಕೆಯನ್ನು ಕೊಂಡಾಡಿದ್ದಾರೆ.
ರಜನಿಕಾಂತ್ ಅವರು ಶನಿವಾರ ಋಷಿಕೇಶದಲ್ಲಿರುವ ಸ್ವಾಮಿ ದಯಾನಂದ ಆಶ್ರಮಕ್ಕೆ ಭೇಟಿ ನೀಡಿದ್ದರು. ಸ್ವಾಮಿ ದಯಾನಂದರಿಗೆ ಗೌರವ ಸಲ್ಲಿಸಿ, ಗಂಗಾ ನದಿಯ ದಡದಲ್ಲಿ ಧ್ಯಾನ ಮಾಡಿದ್ದಾರೆ. ಸಾಂಪ್ರದಾಯಿಕ ಆಚರಣೆಯಾದ ಗಂಗಾ ಆರತಿಯಲ್ಲಿಯೂ ಭಾಗವಹಿಸಿದ್ದರು. ನಂತರ ಅವರು ಭಾನುವಾರ ದ್ವಾರಾಹತ್‌ಗೆ ಪ್ರಯಾಣ ಬೆಳೆಸಿ ಆಧ್ಯಾತ್ಮಿಕ ಕಾರ್ಯಗಳನ್ನು ಮುಂದುವರೆಸಿದರು ಎಂದು ವರದಿಗಳು ತಿಳಿಸಿವೆ.
ರಜನಿಕಾಂತ್ ಅವರು ಪ್ರಸ್ತುತ ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ‘ಜೈಲರ್ 2’ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ವರ್ಷ ಅವರು ಲೋಕೇಶ್ ಕನಕರಾಜ್ ಅವರ ‘ಕೂಲಿ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.


