Wednesday, November 19, 2025
21.2 C
Bengaluru
Google search engine
LIVE
ಮನೆಕ್ರಿಕೆಟ್ಏಷ್ಯಾಕಪ್ ವಿಜೇತ ಭಾರತೀಯ ಕ್ರಿಕೆಟ್ ತಂಡಕ್ಕೆ ಅಭಿನಂದನೆ-ಸಿದ್ದರಾಮಯ್ಯ

ಏಷ್ಯಾಕಪ್ ವಿಜೇತ ಭಾರತೀಯ ಕ್ರಿಕೆಟ್ ತಂಡಕ್ಕೆ ಅಭಿನಂದನೆ-ಸಿದ್ದರಾಮಯ್ಯ

ಬೆಂಗಳೂರು: ಏಷ್ಯಾಕಪ್​​​ ಟೂರ್ನಿಯಲ್ಲಿ ಭಾರತ ತಂಡ ಗೆದ್ದು ಬೀಗಿದ್ದು, ತಂಡಕ್ಕೆ ಸಿಎಂ ಸಿದ್ದರಾಮಯ್ಯ ಶುಭಾಶಯ ತಿಳಿಸಿದ್ದಾರೆ..

ಇಡೀ ಟೂರ್ನಮೆಂಟ್‌ನಲ್ಲಿ ಅಜೇಯರಾಗಿ, ಪಾಕಿಸ್ತಾನದಂತಹ ಬಲಿಷ್ಠ ತಂಡವನ್ನು ಮಣಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಭಾರತೀಯ ತಂಡದ ಸಾಧನೆಯನ್ನು ಸಿಎಂ ಅವರು ಶ್ಲಾಘಿಸಿದ್ದಾರೆ. ಈ ಜಯವು ಭಾರತೀಯ ಕ್ರಿಕೆಟ್‌ನ ಯುವ ಶಕ್ತಿಯನ್ನು ಜಗತ್ತಿಗೆ ಪರಿಚಯಿಸಿದೆ ಎಂದು ಅವರು ಹೇಳಿದ್ದಾರೆ.

ಸಿಎಂ ಸಿದ್ದರಾಮಯ್ಯ ತಮ್ಮ ಟ್ವೀಟ್‌ನಲ್ಲಿ, ಏಷ್ಯಾಕಪ್ ವಿಜೇತ ಭಾರತೀಯ ಕ್ರಿಕೆಟ್ ತಂಡಕ್ಕೆ ಅಭಿನಂದನೆಗಳು. ಇಡೀ ಪಂದ್ಯಾವಳಿಯಲ್ಲಿ ಅಜೇಯರಾಗುಳಿದು, ಮತ್ತೊಮ್ಮೆ ಪಾಕಿಸ್ತಾನವನ್ನು ಬಗ್ಗುಬಡಿದು ಪ್ರಶಸ್ತಿ ಮುಡಿಗೇರಿಸಿಕೊಂಡ ನಮ್ಮವರ ಆಟ ಬಹುಕಾಲ ನೆನಪಿನಲ್ಲಿ ಉಳಿಯುವಂತದ್ದು. ಯುವ ಆಟಗಾರರೇ ತುಂಬಿದ್ದ ಭಾರತೀಯ ತಂಡ ದೊಡ್ಡ ಸಾಧನೆ ಮಾಡಿ, ಇತಿಹಾಸ ಸೃಷ್ಟಿಸಿದೆ, ಎಂದು ತಂಡಕ್ಕೆ ವಿಶ್​ ಮಾಡಿದ್ಧಾರೆ..

ಏಷ್ಯಾಕಪ್‌ನ ಫೈನಲ್ ಪಂದ್ಯದಲ್ಲಿ ಭಾರತೀಯ ತಂಡವು ಅತ್ಯದ್ಭುತ ಪ್ರದರ್ಶನ ತೋರಿತು. ಒತ್ತಡದ ಸಂದರ್ಭದಲ್ಲಿ ಸಂಯಮದ ಆಟವಾಡಿದ ಯುವ ಆಟಗಾರ ತಿಲಕ್ ವರ್ಮಾ ಅವರ ಬ್ಯಾಟಿಂಗ್, ಎದುರಾಳಿಗಳನ್ನು ಕಡಿಮೆ ಮೊತ್ತಕ್ಕೆ ಕಟ್ಟಿಹಾಕಿದ ಕುಲದೀಪ್ ಯಾದವ್‌ ಅವರಿಂದ ಅಮೋಘ ಬೌಲಿಂಗ್, ಮತ್ತು ತಂಡದ ಸಂಘಟಿತ ಹೋರಾಟವು ಈ ಜಯಕ್ಕೆ ಕಾರಣವಾಯಿತು. ಈ ಯುವ ತಂಡವು ತನ್ನ ಕೌಶಲ್ಯ ಮತ್ತು ಛಲದಿಂದ ಇತಿಹಾಸದ ಪುಟದಲ್ಲಿ ತನ್ನ ಹೆಸರನ್ನು ಬರೆದಿದೆ.

ತಿಲಕ್ ವರ್ಮಾ ಅವರ ಆಕರ್ಷಕ ಬ್ಯಾಟಿಂಗ್ ಪಂದ್ಯದ ಒಂದು ಎತ್ತರದ ಗುರಿಯಾಗಿತ್ತು. ಒತ್ತಡದ ಸಂದರ್ಭದಲ್ಲಿ ತಂಡಕ್ಕೆ ಆಧಾರವಾದ ತಿಲಕ್, ತಮ್ಮ ಚುರುಕಾದ ಆಟದಿಂದ ಎದುರಾಳಿಗಳ ಬೌಲಿಂಗ್ ದಾಳಿಯನ್ನು ಧೀರವಾಗಿ ಎದುರಿಸಿದರು. ಇವರ ಜೊತೆಗೆ ಕುಲದೀಪ್ ಯಾದವ್‌ರಿಂದ ಬಂದ ನಿಖರವಾದ ಬೌಲಿಂಗ್ ಎದುರಾಳಿಗಳ ಬ್ಯಾಟಿಂಗ್‌ಗೆ ಕಡಿವಾಣ ಹಾಕಿತು. ಕುಲೀಪ್‌ರ ತಿರುಗುವ ಚೆಂಡುಗಳು ಪಾಕಿಸ್ತಾನದ ಬ್ಯಾಟ್ಸ್‌ಮನ್‌ಗಳಿಗೆ ಸವಾಲಾಗಿ ಪರಿಣಮಿಸಿತು.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments