ನಮಕ್ಕಲ್: ಡಿಎಂಕೆಗೆ ಮತ ಹಾಕಿದರೆ ಅದು ಬಿಜೆಪಿಗೆ ಮತ ಹಾಕಿದಂತೆಯೇ ಎಐಎಡಿಎಂಕೆ ಕೂಡಾ ಬಿಜೆಪಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಇದೊಂದು ಅಪವಿತ್ರ ಮೈತ್ರಿಯಾಗಿದೆ ಎಂದು ತಮಿಳಿಗ ವೆಟ್ರಿ ಕಳಗಂ ಪಕ್ಷದ ಸಂಸ್ಥಾಪಕ ವಿಜಯ್ ದಳಪತಿ ಟೀಕಿಸಿದರು.
ರಾಜ್ಯದ ಪಶ್ಚಿಮ ಭಾಗದಲ್ಲಿ ಶನಿವಾರ ರ್ಯಾಲಿ ನಡೆಸಿ ಮಾತನಾಡಿದ ಅವರು, ರಾಜ್ಯವನ್ನು ಲೂಟಿ ಮಾಡಿರುವ ಡಿಎಂಕೆ ಪಕ್ಷವು 2026ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದೆ ಎಂದು ವಿಜಯ್ ಆರೋಪಿಸಿದ್ದಾರೆ..
ಕರೂರ್ ಜಿಲ್ಲೆಯ ನಮಕ್ಕಲ್‌ನಲ್ಲಿ ಇಂದು ರ್ಯಾಲಿ ನಡೆಸಿದರು. ನೆಚ್ಚಿನ ನಟ ಹಾಗೂ ರಾಜಕಾರಣಿಯನ್ನು ಕಣ್ಣುಂಬಿಕೊಳ್ಳಲು ಕಿಕ್ಕಿರಿದು ಜನ ಸೇರಿದ್ದರು. ಯುವಕರು, ಮಹಿಳೆಯರು ಹಾಗೂ ಹಿರಿಯರೂ ಇದರಲ್ಲಿ ಪಾಲ್ಗೊಂಡಿದ್ದರು. ವೇದಿಕೆಯಾಗಿ ಪರಿವರ್ತಿಸಲಾದ ವಾಹನದ ಮೇಲೆ ನಿಂತ ವಿಜಯ್, ಜನರತ್ತ ಕೈಬೀಸಿದರು. ಶಾಲಾ ಮಕ್ಕಳನ್ನೂ ಒಳಗೊಂಡು ಇಡೀ ಸಭೆಯೇ ನೆಚ್ಚಿನ ನಟನ ಕಂಡು ಹಿರಿಹಿರಿ ಹಿಗ್ಗಿದರು. ಕೆಲವರು ಪಕ್ಷದ ಬಾವುಟ ಬೀಸಿದರೆ, ಇನ್ನೂ ಕೆಲವರು ಪೋಸ್ಟರ್ ಹಿಡಿದು ಕೂಗಿದರು.


