ಬೆಂಗಳೂರು: ಇತ್ತೀಚೆಗೆ ನಟ ಉಪೇಂದ್ರ ನಟಿ ಪ್ರಿಯಾಂಕಾ ಉಪೇಂದ್ರ ಅವರ ಮೊಬೈಲ್ ಅನ್ನ ಕಿಡಿಗೇಡಿಗಳು ಹ್ಯಾಕ್ ಮಾಡಿದ್ದರು. ಈ ಪ್ರಕರಣವನ್ನ ತನಿಖೆ ನಡೆಸುತ್ತಿರುವ ಸದಾಶಿವನಗರ ಪೊಲೀಸರು ಹ್ಯಾಕರ್ಗಳ ಮೂಲ ಪತ್ತೆ ಮಾಡಿದ್ದಾರೆ.
ಬಿಹಾರ ಮೂಲದ ಕೆಲವರು ಪ್ರಿಯಾಂಕಾ ಉಪೇಂದ್ರ ಅವರ ಮೊಬೈಲ್ ಸಂಖ್ಯೆಯನ್ನು ಹ್ಯಾಕ್ ಮಾಡಿರುವುದು ಗೊತ್ತಾಗಿದ್ದು, 1.65 ಲಕ್ಷ ರೂಪಾಯಿ ಹಣವನ್ನು ಕಳೆದುಕೊಂಡಿದ್ದಾರೆ. ಘಟನೆ ಕುರಿತು ಪ್ರಿಯಾಂಕಾ ಉಪೇಂದ್ರ ಮತ್ತು ಉಪೇಂದ್ರ ದೂರು ನೀಡಿದ್ದಲ್ಲದೆ, ಜಾಗೃತಿ ಮೂಡಿಸುವ ದೃಷ್ಟಿಯಿಂದಾಗಿ ಘಟನೆ ಬಗ್ಗೆ ಮಾಧ್ಯಮಗಳ ಬಳಿಯೂ ಮಾಹಿತಿ ನೀಡಿದ್ದರು. ಇದೀಗ ಬೆಂಗಳೂರು ಪೊಲೀಸರಿಗೆ ಹ್ಯಾಕರ್ಗಳ ಸುಳಿವು ದೊರೆತಿದೆ.
ಸದ್ಯ ಸದಾಶಿವನಗರ ಪೊಲೀಸರು, ಹ್ಯಾಕರ್ಗಳ ಬಗ್ಗೆ ಸಂಪೂರ್ಣ ಮಾಹಿತಿ ಕಲೆಹಾಕಿದ್ದು, ಬಿಹಾರಕ್ಕೆ ವಿಶೇಷ ತಂಡ ಕಳುಹಿಸಲು ಸಿದ್ದತೆ ನಡೆಸಿದ್ದಾರೆಂದು ತಿಳಿದಬಂದಿದೆ.


