ಬೆಂಗಳೂರು: ಲೀವಿಂಗ್ ಟು ಗೆದರ್ ನಲ್ಲಿ ಜಗಳ ಉಂಟಾಗಿ ಯುವತಿಗೆ 11 ಬಾರಿ ಚಾಕು ಇರಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ..
ರೇಖಾ ಚಾಕು ಇರಿತಕ್ಕೊಳಗಾದ ಯುವತಿ. ಸುಂಕದಕಟ್ಟೆ ಬಳಿ ಬೆಳಗ್ಗೆ 11.30ರ ಸುಮಾರಿಗೆ ಚಾಕು ಇರಿದು, ಹಂತಕ ಎಸ್ಕೇಪ್ ಆಗಿದ್ದ. ಗಾಯಾಳು ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಇದೀಗ ಆಕೆ ಕೊನೆಯುಸಿರೆಳೆದಿದ್ದಾಳೆ. ಇಬ್ಬರು ಪರಿಚಿತರಾಗಿದ್ದು, ಇಂದು ಬೆಳಗ್ಗೆ ಬಸ್ಸ್ಟ್ಯಾಂಡ್ನಲ್ಲಿ ಇಬ್ಬರ ನಡುವೆ ಗಲಾಟೆ ನಡೆದಿದೆ.
ಗಲಾಟೆ ವೇಳೆ ಚಾಕುವಿನಿಂದ ಇರಿದಿರುವ ಆರೋಪಿ, ಬಳಿಕ ಎಸ್ಕೇಪ್ ಆಗಿದ್ದು, ರೇಖಾ ಎಂಬ ಮಹಿಳೆಗೆ ಲೋಕೇಶ್ ಅಲಿಯಾಸ್ ಲೋಹಿತಾಶ್ವ ಎಂಬಾತ ಚಾಕು ಇರಿದಿದ್ದಾನೆ. ರೇಖಾ ಹಾಗೂ ಲೋಕೇಶ್ ಇಬ್ಬರೂ ಪರಿಚಿತರಾಗಿದ್ದು, ಲಿವಿಂಗ್ ರಿಲೇಷನ್ಶಿಪ್ನಲ್ಲಿ ಇದ್ದರು ಎನ್ನಲಾಗಿದೆ. ಇಂದು ಬೆಳಗ್ಗೆ ಬಸ್ಸ್ಟ್ಯಾಂಡ್ನಲ್ಲಿಯೇ ಯಾವುದೋ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ನಡೆದಿದೆ. ಗಲಾಟೆ ವೇಳೆ ಚಾಕುವಿನಿಂದ ಇರಿದಿರುವ ಆರೋಪಿ ಲೋಕೇಶ್, ಎಸ್ಕೇಪ್ ಆಗಿದ್ದ.
ಸದ್ಯ ಈ ಬಗ್ಗೆ ವಿಷಯ ತಿಳಿದ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ರು. ಇದೀಗ ರೇಖಾಳಿಗೆ ಚಾಕು ಇರಿದು, ಬರ್ಬರವಾಗಿ ಕೊಂದು ತಲೆಮರಿಸಿಕೊಂಡ ಆರೋಪಿ ಲೋಕೇಶ್ ಅಲಿಯಾಸ್ ಲೋಹಿತಾಶ್ವನಿಗಾಗಿ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಬಲೆ ಬೀಸಿದ್ದಾರೆ.


