ಬೆಂಗಳೂರು: ಸ್ಯಾಂಡಲ್ ವುಡ್ ಸ್ಟಾರ್ ನಟ ಉಪೇಂದ್ರ ಪತ್ನಿ ಪ್ರಿಯಾಂಕಾ ಮೊಬೈಲ್ ಹ್ಯಾಕ್ ಆಗಿದ್ದು, ವೀಡಿಯೋ ಮೂಲಕ ತಮ್ಮ ಮೊಬೈಲ್ ಹ್ಯಾಕ್ ಆಗಿರುವ ವಿಚಾರವನ್ನು ಹಂಚಿಕೊಂಡಿದ್ದಾರೆ. ನಮ್ಮಿಬ್ಬರ ಫೋನ್ ಹ್ಯಾಕ್ ಆಗಿದೆ. ಯಾರಾದರೂ ನಮ್ಮ ಹೆಸರಲ್ಲಿ ಹಣ ಕೇಳಿದರೆ ಕೊಡಬೇಡಿ, ಅದಕ್ಕೂ ಮುನ್ನ ಅನೌನ್ಸ್ ಮಾಡ್ತಿದ್ದೇವೆ. ಮುಂದೆ ಪೊಲೀಸರಿಗೆ ದೂರನ್ನೂ ಕೊಡುತ್ತೇವೆ ಎಂದಿದ್ದಾರೆ ದಂಪತಿ.
ಪ್ರಿಯಾಂಕಾ ಅವರಿಗೆ ಬೆಳಗ್ಗೆ ಒಂದು ನಂಬರ್ ಬಂದಿದೆ. ಅವರು ಏನೋ ಒಂದು ಆರ್ಡರ್ ಮಾಡಿದ್ದರು. ಯಾರೋ ಒಬ್ಬ ಹ್ಯಾಕರ್ ಫೋನ್ ಮಾಡಿ, ಅವರ ಅಕೌಂಟ್‌ನ್ನು ಹ್ಯಾಕ್ ಮಾಡಿದ್ದಾನೆ. ನನ್ನ ಕೈಯಿಂದಲೂ ಗೊತ್ತಿಲ್ಲದೆ ಪ್ರಿಯಾ ಅವರು ಕಾಲ್ ಮಾಡಿಸಿದ್ದಾರೆ. ನನ್ನ ಫೋನ್ ಮತ್ತು ಪ್ರಿಯಾ ಅವರ ಫೋನ್ ಹ್ಯಾಕ್ ಆಗಿದೆ. ನನ್ನ ಫೋನ್ ಹಾಗೂ ಪ್ರಿಯಾ ಅವರ ಫೋನಿನಿಂದ ದುಡ್ಡು ಕಳುಹಿಸುವ ಮೆಸೇಜ್ ಬಂದರೆ, ದಯವಿಟ್ಟು ಯಾರೂ ದುಡ್ಡು ಕಳಿಸೋಕೆ ಹೋಗಬೇಡಿ. ಆದಷ್ಟು ಬೇಗ ಈ ಬಗ್ಗೆ ಪೊಲೀಸರಿಗೆ ದೂರು ನೀಡುತ್ತೇವೆ ಎಂದು ಉಪ್ಪಿ ಹೇಳಿದ್ದಾರೆ.


