ಕನ್ನಡದ ಖ್ಯಾತ ನಟಿ ಭಾವನ ರಾಮಣ್ಣ ಅವರು ಐವಿಎಫ್ ಮೂಲಕ ತಾಯಿಯಾಗಿದ್ದು, ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಆದರೆ 8 ತಿಂಗಳಿಗೆ ಹೆರಿಗೆಯಾದ ಹಿನ್ನೆಲೆ ಒಂದು ಮಗು ನಿಧನವಾಗಿದ್ದು, ಮತ್ತೊಂದು ಮಗು ಕ್ಷೇಮವಾಗಿದೆ. ಎರಡು ವಾರಗಳ ಹಿಂದೆ ನಟಿ ಭಾವನ ರಾಮಣ್ಣಗೆ ಎರಡು ವಾರಗಳ ಹಿಂದೆ ಹೆರಿಗೆಯಾಗಿದ್ದು, ಹೆಣ್ಣು ಮಗುವಿಗೆ ತಾಯಿಯದ ನಟಿ ಭಾವನಾ ಅವರು ಸದ್ಯ ಆರೋಗ್ಯವಾಗಿದ್ದಾರೆ.
ಭಾವನಾ ರಾಮಣ್ಣ ಸ್ಪೂರ್ತಿದಾಯಕ ಕೆಲಸ ಮಾಡಿದ್ದಾರೆ. ಮದ್ವೆ ಆಗದೇನೆ ಮಕ್ಕಳು ಮಾಡಿಕೊಳ್ಳುವ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದಾರೆ. ಈ ನಿರ್ಧಾರದಿಂದ ಹಲವು ಪ್ರಶ್ನೆಗಳೂ ಎದುರಾಗಿವೆ. ಅವುಗಳಿಗೂ ಸೂಕ್ತ ಉತ್ತರವನ್ನೂ ಕೊಟ್ಟಾಗಿದೆ. ಪ್ರಶ್ನೆ ಮತ್ತು ಉತ್ತರಗಳ ಅಬ್ಬರ ಮುಗಿದ್ಮೇಲೆ ಇದೀಗ ಸೀಮಂತ ಮಾಡಿಕೊಂಡಿದ್ದಾರೆ. ಮನೆಯಲ್ಲಿಯೇ ಕೆಲವೇ ಕೆಲವು ಆಪ್ತರು ಮತ್ತು ಸ್ನೇಹಿತರ ಸಮ್ಮುಖದಲ್ಲಿಯೇ ಭಾವನಾ ಅವರು ಸೀಮಂತ ಮಾಡಿಕೊಂಡಿದ್ದರು.
ಐವಿಎಫ್ ಮೂಲಕ ತಾಯಿ ಆಗಿದ್ದಾರೆ ನಟಿ ಭಾವನಾ. ವೈದ್ಯರ ಸೂಚನೆಯಂತೆ ಹೆರಿಗೆಯಾಗಿದೆ. ಒಂದು ಮಗುವಿನಲ್ಲಿ ಏಳು ತಿಂಗಳ ನಂತ್ರ ಸಮಸ್ಯೆ ಕಾಣಿಸಿಕೊಂಡ ಕಾರಣ, 8 ತಿಂಗಳಿಗೆ ಹೆರಿಗೆ ಮಾಡಿಸಲಾಗಿದೆ. ಸದ್ಯ ತಾಯಿ ಮಗು ಇಬ್ಬರು ಕ್ಷೇಮವಾಗಿದ್ದರೆ.
ಕನ್ನಡದ ನಟಿ ಭಾವನಾ ರಾಮಣ್ಣ ಅವರು ತಮ್ಮ 40ನೇ ವಯಸ್ಸಿನಲ್ಲಿ ಐವಿಎಫ್ ಮೂಲಕ ಗರ್ಭಧಾರಣೆ ಮಾಡಿಸಿಕೊಂಡಿದ್ದರು. ಇದೀಗ ಅವರು ಹೆಣ್ಣುಮಗುವಿನ ತಾಯಿಯಾಗಿದ್ದಾರೆ.