ಬೆಳಗಾವಿ: ಅಕ್ರಮವಾಗಿ ಮಾಂಸ ಸಾಗಿಸುತ್ತಿದ್ದ ಟಾಟಾಏಸ್ ವಾಹನ ಪಲ್ಟಿಯಾಗಿರುವ ಘಟನೆ ಚಿಕ್ಕೋಡಿ ತಾಲೂಕಿನ ಚಿಕ್ಕನಂದಿ ಗ್ರಾಮದ ಬಳಿ ನಡೆದಿದೆ. ವಾಹನದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರಾಸುಗಳ ಮಾಂಸ ತುಂಬಲಾಗಿತ್ತು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಪಲ್ಟಿಯಾದ ನಂತರ ರಸ್ತೆಯಲ್ಲಿ ಮಾಂಸ ಚದುರಿ ಬಿದ್ದಿದ್ದು,ಸ್ಥಳೀಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸರು ವಾಹನ ವಶಕ್ಕೆ ಪಡೆದು ಪ್ರಕರಣ ದಾಖಲಿಸಿ,ಚಾಲಕನಿಗಾಗಿ ಶೋಧ ನಡೆಸಿದ್ದಾರೆ. ಗೋಕಾಕ್, ಕೊಣ್ಣೂರು ಪಟ್ಟಣ ಸೇರಿದಂತೆ ನಾನಾ ಕಡೆಯಿಂದ ಯರಗಟ್ಟಿ,ರಾಮದುರ್ಗ ಹಾಗೂ ಇತರ ತಾಲೂಕುಗಳಿಗೆ ಗೋ ಮಾಂಸ ಸಹ ಸರಬರಾಜು ಆಗುತ್ತಿದೆ.
ಸ್ಥಳೀಯ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ.ಇನ್ನಾದರೂ ಕ್ರಮ ಕೈಗೊಳ್ಳಲಿ ಎಂದು ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಆಗ್ರಹಿಸಿದ್ದಾರೆ.