ಬೆಂಗಳೂರು: ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಿಗೆ ಶೀಘ್ರದಲ್ಲಿ ಸರ್ಕಾರ ಗುಡ್‌ನ್ಯೂಸ್ ನೀಡಲಿದೆ. ಗೌರಿ ಗಣೇಶ ಹಬ್ಬದ ಹಿನ್ನೆಲೆ ಮುತ್ತೊಂದು ಕಂತಿನ ಹಣ ಬಿಡುಗಡೆ ಮಾಡಲು ಸರ್ಕಾರ ಮುಂದಾಗಿದೆ. ಈಗಾಗಲೇ ಹಣ ಖಜಾನೆಗೆ ಜಮೆಯಾಗಿದ್ದು, ಶೀಘ್ರದಲ್ಲಿಯೇ ಫಲಾನುಭವಿಗಳ ಖಾತೆಗೆ ಜಮೆಯಾಗಲಿದೆ.
ಈಗಾಗಲೇ ಗೃಹಲಕ್ಷ್ಮೀಯರ ಖಾತೆಗೆ 21ನೇ ಕಂತಿನ ಹಣ ಬಿಡುಗಡೆ ಮಾಡಲಾಗಿದೆ. ಇನ್ನು 22ನೇ ಕಂತಿನ ಹಣವನ್ನು ನಾಳೆ ಆಗಸ್ಟ್ 27ರ ಗಣೇಶ ಹಬ್ಬದಂದು ಬಿಡುಗಡೆ ಮಾಡುವ ಸಾಧ್ಯತೆಯಿದೆ. ಯಾಕಂದ್ರೆ 21ನೇ ಕಂತಿನ ಹಣವನ್ನು ವರಮಹಾಲಕ್ಷ್ಮೀ ಹಬ್ಬದಂದೇ ಹಾಕಲಾಗಿತ್ತು. ಇನ್ನು 23 ಹಾಗೂ 24ನೇ ಕಂತಿನ ಹಣ ಬಿಡುಗಡೆ ಯಾವಾಗ ಎನ್ನುವ ಪ್ರಶ್ನೆ ಬಹುತೇಕ ಮಂದಿಯ ಪ್ರಶ್ನೆಯಾಗಿದೆ.
ರಾಜ್ಯ ಖಜಾನೆಯಿಂದ ಜಿಲ್ಲಾ ಖಜಾನೆಗಳಿಗೆ ಸಹಾಯಧನ ಮೊತ್ತ ಬಿಡುಗಡೆಯಾಗಿದೆ. ಈ ವಾರದೊಳಗೆ ಹಣ ಫಲಾನುಭವಿಗಳ ಖಾತೆಗೆ ಜಮೆಯಾಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೂಲಗಳು ತಿಳಿಸಿವೆ.