ಮಧ್ಯಪ್ರದೇಶ: ಹೆಲ್ಮೆಟ್ ಧರಿಸದೇ ಬಂದು ಪೆಟ್ರೋಲ್ ಕೇಳಿದ ಯುವಕರಿಗೆ ಪ್ರೆಟ್ರೋಲ್ ನೀಡಲು ಸಿಬ್ಬಂದಿ ನಿರಾಕರಿಸಿದ್ದಕ್ಕೆ ಬಂಕ್ಗೆ ಬೆಂಕಿ ಇಟ್ಟಿರುವ ಘಟನೆ ಮಧ್ಯಪ್ರದೇಶದ ಇಂದೋರ್ನಲ್ಲಿ ನಡೆದಿದೆ.
ಛೋಟಾ ಬಂಗಾರ್ಡಾದ ಶುಕ್ಲಾ ಬ್ರದರ್ಸ್ ಪೆಟ್ರೋಲ್ ಪಂಪ್ನಲ್ಲಿ ಘಟನೆ ನಡೆದಿದ್ದು, ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆಯಾಗಿದೆ.
ಮಧ್ಯ ಪ್ರದೇಶದಲ್ಲಿ ಸಂಚಾರಿ ನಿಯಮಗಳನ್ನು ಕಠಿಣಗೊಳಿಸಿದ್ದು, ಪೆಟ್ರೋಲ್ ಬಂಕ್ಗಳಲ್ಲಿ ಹೆಲ್ಮೆಟ್ ಇಲ್ಲದ ದ್ವಿಚಕ್ರವಾಹನಗಳಿಗೆ ಪೆಟ್ರೋಲ್ ಹಾಕದಂತೆ ಸೂಚನೆ ನೀಡಲಾಗಿದೆ. ಅಂತೆಯೇ ಇಂದೋರ್ ನಲ್ಲಿ ಹೆಲ್ಮೆಟ್ ಧರಿಸದೇ ಬಂದ ಮೂವರು ಯುವಕರ ತಂಡ ಪೆಟ್ರೋಲ್ ಕೇಳಿದ್ದು, ಈ ವೇಳೆ ಬಂಕ್ ಸಿಬ್ಬಂದಿ ಪೆಟ್ರೋಲ್ ಹಾಕುವುದನ್ನು ನಿರಾಕರಿಸಿದ್ದಾರೆ. ಇದರಿಂದ ರೊಚ್ಚಿಗೆದ್ದ ದುಷ್ಕರ್ಮಿಗಳ ತಂಡ ಪೆಟ್ರೋಲ್ ಬಂಕ್ ಗೆ ಬೆಂಕಿ ಹಾಕಿರುವ ಘಟನೆ ನಡೆದಿದೆ.
ಇಬ್ಬರು ಯುವಕರು ಬೈಕ್ ನಿಲ್ಲಿಸುತ್ತಿದ್ದಂತೆ ವಾಗ್ದಾದಕ್ಕೆ ಇಳಿದಿದ್ದಾರೆ. ಬಳಿಕ ಅವರಲ್ಲಿ ಓರ್ವ ಚಾಕು ಹೊರ ತೆಗೆದು ಸಿಬ್ಬಂದಿಗೆ ಬೆದರಿಕೆ ಹಾಕಿದ್ದಾನೆ. ಇನ್ನೋರ್ವ ಬೆಂಕಿ ಹಚ್ಚಿದ್ದಾನೆ. ಇನ್ನು ಘಟನೆ ಸಂಬಂಧ ಡಿಸಿಪಿ ರಾಜೇಶ್ ದಂಡೋಟಿಯಾ ಅವರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


