Thursday, November 20, 2025
19.1 C
Bengaluru
Google search engine
LIVE
ಮನೆ#Exclusive NewsTop Newsಕರ್ನಾಟಕದ ಪಾಲಿಗೆ ಕಾಂಗ್ರೆಸ್​ ಸತ್ತು ಹೋಗಿದೆ - ಬಿಜೆಪಿ ಶಾಸಕ ಸುರೇಶ್​ ಗೌಡ ಕಿಡಿ

ಕರ್ನಾಟಕದ ಪಾಲಿಗೆ ಕಾಂಗ್ರೆಸ್​ ಸತ್ತು ಹೋಗಿದೆ – ಬಿಜೆಪಿ ಶಾಸಕ ಸುರೇಶ್​ ಗೌಡ ಕಿಡಿ

ತುಮಕೂರು: ರಾಜ್ಯದ ಪಾಲಿಗೆ ಕಾಂಗ್ರೆಸ್​ ಸರ್ಕಾರ ಸತ್ತು ಮಲಗಿದೆ, ಕ್ಷೇತ್ರದಲ್ಲಿ ತೆಲೆಯೆತ್ತಿಕೊಂಡು ಓಡಾಡಲು ಆಗುತ್ತಿಲ್ಲ ಎಂದು ಬಿಜೆಪಿ ಶಾಸಕ ಸುರೇಶ್​ ಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್​ ಶಾಸಕರೊಂದಿಗೆ ಮಾತ್ರ ಸಭೆ ಕರೆದಿದ್ದಾರೆ. ಕಾಂಗ್ರೆಸ್​ನವರೇ ರಾಜ್ಯವನ್ನು ಆಳುತ್ತಿದ್ದಾರೆ ಅನ್ನುವ ಹಾಗೆ ಸಭೆ ಕರೆದಿದ್ದಾರೆ. ಎಲ್ಲಾ ಶಾಸಕರನ್ನು ಕರೆದು ರಾಜ್ಯದ ಅಭಿವೃದ್ಧಿಯ ಬಗ್ಗೆ ಚರ್ಚೆ ಮಾಡಬೇಕಿತ್ತು. ಆದ್ರೆ ಈ ತಾರತಮಯ್ಯ ಯಾಕೆ ಎಂದು ಪ್ರಶ್ನೆ ಮಾಡಿದ್ದಾರೆ.

ಕರ್ನಾಟಕ ಸಮಗ್ರ ಅಭಿವೃದ್ಧಿ ಅಗಬೇಕು ಅಂದ್ರೆ,  ಎಲ್ಲಾ ಶಾಸಕರನ್ನ‌ ಕರೆದು ಅನುದಾನ ಕೊಡುವುದರ ಬಗ್ಗೆ ಮಾತನಾಡಬೇಕಿತ್ತು. ಸಿದ್ದರಾಮಯ್ಯನವರ ತಾರತಮ್ಯದಿಂದ ಕೇಡುಗಾಲಕ್ಕೆ ನಾಯಿ ಮೊಟ್ಟೆ ಇಡುತ್ತದೆ ಎಂಬಂತೆ ಆರೋಪಗಳು ಬರುತ್ತಿದೆ. ಸಿಎಂ ಸಿದ್ದರಾಮಯ್ಯ ಇಳಿಯುವ ಕಾಲದಲ್ಲಿ ಇಂತಹ ಆರೋಪ ತೆಗೆದುಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದ್ರು.

ರಾಜ್ಯ ಸರ್ಕಾರ ಘೋಷಿಸಿರುವ 50 ಕೋಟಿ ಅನುದಾನವನ್ನು ಎಲ್ಲಾ ಶಾಸಕರಿಗೆ ಸಮಾನವಾಗಿ ಹಂಚಬೇಕು ಎಂದು ಸುರೇಶ್​ ಗೌಡ ಆಗ್ರಹಿಸಿದ್ದಾರೆ. ಬಜೆಟ್​ನಲ್ಲೂ ಈ ಘೊಷಣೆಯಾಗಿದೆ. ಒಂದು ವೇಳೆ ಅದೇನಾದ್ರೂ ಕೊಟ್ಟಿಲ್ಲ ಅಂದ್ರೆ ಯಾವುದೇ ಕಾರಣಕ್ಕೂ  ವಿಧಾನಸಭೆ ನಡೆಸಲು ಬಿಡುವುದಿಲ್ಲ. ಈ ಬಗ್ಗೆ ವಿಪಕ್ಷ ನಾಯಕ ಆರ್​. ಅಶೊಕ್​ ಅವರಿಗೆ ತಿಳಿಸಿದ್ದೇನೆ ಎಂದು ಹೇಳಿದ್ದಾರೆ.

ಇನ್ನು ಡಿಸಿಎಂ ಡಿಕೆಶಿ ಶಾಸಕರ ಸಭೆ ಕರೆದಿರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು ಕಾಂಗ್ರೆಸ್​ ಸತ್ತೋಗಿದೆ. ಕರ್ನಾಟಕದ ಪಾಲಿಗೆ ಸತ್ತು ಮಲಗಿದೆ. ಬರಿ ಪೇಪರ್ ಮೇಲಿದೆ ಹಣನೂ ಇಲ್ಲಾ ಎನೂ ಇಲ್ಲಾ. ಸುಮ್ಮನೆ ಮೀಟಿಂಗ್ ಮಾಡಿ ತಿಪ್ಪೆ ಸಾರಿಸುತ್ತಿದ್ದಾರೆ ಎಂದು ಕಿಡಿಕಾರಿದ್ರು.

ಕಾಂಗ್ರೆಸ್​ ಆಂತರಿಕ ಒಳಜಗಳವನ್ನು ಟೀಕಿಸಿದ ಅವರು ಡಿಕೆ ಶಿವಕುಮಾರ್ ನಾನು ಮುಖ್ಯಮಂತ್ರಿ ಆಗಬೇಕು ಅಂತಾ. ಸಿದ್ದರಾಮಯ್ಯ ನಾನೇ ಉಳಕೋ ಬೇಕು ಅಂತಾ ಹೋರಾಡುತ್ತಿದ್ದಾರೆ. ಈ ಮಧ್ಯೆ ಮಲ್ಲಿಕಾರ್ಜುನ ಖರ್ಗೆ ನಾನು ಬರ್ತಿನಿ ಅಂತ ಮಧ್ಯ ಬಂದಿದ್ದಾರೆ. ಕಾಂಗ್ರೆಸ್​ನಲ್ಲಿ 3 ಬಾಗಿಲಲ್ಲ 10 ಬಾಗಿಲಾಗಿದೆ ಎಂದು ಕಿಡಿಕಾರಿದ್ರು.

ಇನ್ನು ರಾಜ್ಯದಲ್ಲಿ ಇವತ್ತು ಚುನಾವಣೆಯಾದ್ರೆ ಬಿಜೆಪಿ ಪಕ್ಷ  150 ಸೀಟ್​ ಗೆಲ್ಲಲಿದೆ. ಕಾಂಗ್ರೆಸ್​ನವರು ಭ್ರಮೆಯಲ್ಲಿದ್ದಾರೆ. ಕ‌ನ್ನಡಿಯಲ್ಲಿ ಅವರ ಮುಖ ನೋಡಿಕೊಳ್ಳಲು ಹೇಳಿ ಅವರ ಯೋಗ್ಯತೆ ಗೊತ್ತಾಗಲಿದೆ.ಏನು ಸಾಧನೆ ಮಾಡಿದ್ದಾರೆ ಅಂತಾ ಸಾಧನಾ ಸಮಾವೇಶ ಮಾಡ್ತಾರೆ. 5 ರೂ ಹಣ ಕೊಟ್ಟಿಲ್ಲ, ಒಂದು ರೂಪಾಯಿ ಕೆಲಸ ಆಗಿಲ್ಲಾ. ಕ್ಷೇತ್ರದಲ್ಲಿ ಮುಖ ಎತ್ತಿಕೊಂಡು ತಿರುಗೋಕೆ ಆಗುತ್ತಿಲ್ಲ. ಇಂತಹ ದರಿದ್ರ ಸರ್ಕಾರವನ್ನು ನಾನು ನೋಡಿಲ್ಲ ಎಂದು ಕಿಡಿಕಾರಿದ್ರು.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments