ಬ್ರಸೆಲ್ಸ್: ರಷ್ಯಾದೊಂದಿಗೆ ತೈಲ ಮತ್ತು ಅನಿಲ ವ್ಯಾಪಾರವನ್ನು ಮುಂದುವರಿಸಿದ್ರೆ ತೀವ್ರ ಆರ್ಥಿಕ ನಿರ್ಬಂಧಗಳನ್ನು ಎದುರಿಸಬೇಕಾಗುತ್ತದೆ ಎಂದು ನ್ಯಾಟೋ ಪ್ರಧಾನ ಕಾರ್ಯದರ್ಶಿ ಮಾರ್ಕ್ ರುಟ್ಟೆ ಎಚ್ಚರಿಕೆ ನೀಡಿದ್ದಾರೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರುಟ್ಟೆ ಭಾರತ, ಚೀನಾ, ಬ್ರೆಜಿಲ್ ನಾಯಕರು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಶಾಂತಿ ಮಾತುಕತೆಗಳನ್ನು ಗಂಭೀರವಾಗಿ ಪರಿಗಣಿಸುವಂತೆ ಒತ್ತಡ ಹೇರಬೇಕೆಂದು ಒತ್ತಾಯಿಸಿದ್ರು.
ಚೀನಾ ಹಾಗೂ ಬೆಜ್ರಿಲ್ ಅಧ್ಯಕ್ಷರು , ಭಾರತದ ಪ್ರಧಾನಿ ರಷ್ಯಾದೊಂದಿಗೆ ವ್ಯಾಪಾರ ಒಪ್ಪಂದ ಮುಂದುವರಿಸಿದ್ದಾರೆ. ತೈಲ ಮತ್ತು ಅನಿಲ ಖರೀದಿಸುವದನ್ನು ಮುಂದುವರಿಸುವುದಾದರೇ ಉಕ್ರೇನ್ ಜೊತೆ ಶಾಂತಿ ಮಾತುಕತೆಗೆ ಒತ್ತಡ ಹಾಕುವಂತೆ ಹೇಳಿದ್ದಾರೆ. ಇಲ್ಲವಾದಲ್ಲಿ ನಾವು ಶೇ.100ರಷ್ಟು ಪ್ರತಿಶತ ನಿರ್ಬಂಧವನ್ನು ವಿಧಿಸುತ್ತೇವೆ ಎಂದು ಹೇಳಿದ್ದಾರೆ.
ಉಕ್ರೇನ್ ಜೊತೆ ಶಾಂತಿ ಮಾತುಕತೆಗಳಲ್ಲಿ ಗಂಭೀರವಾಗಿ ತೊಡಗಿಸಿಕೊಳ್ಳಲು ವ್ಲಾಡಿಮಿರ್ ಪುಟಿನ್ ಅವರನ್ನು ಪ್ರೋತ್ಸಾಹಿಸುವಂತೆ ಭಾರತ ಮತ್ತು ಇತರ ಬ್ರಿಕ್ ರಾಷ್ಟ್ರಗಳನ್ನು ಮಾರ್ಕ್ ರುಟ್ಟೆ ಒತ್ತಾಯಿಸಿದರು, ಹಾಗೆ ಮಾಡಲು ವಿಫಲವಾದರೆ ತೀವ್ರ ಆರ್ಥಿಕ ಪರಿಣಾಮಗಳಿಗೆ ಎದುರಿಸಬೇಕಾಗುತ್ತದೆ.
ರಷ್ಯಾ 50 ದಿನಗಳಲ್ಲಿ ಶಾಂತಿ ಮಾತುಕತೆಗಳ ಬಗ್ಗೆ ಗಂಭೀರವಾಗಿಲ್ಲದಿದ್ದರೆ, ಭಾರತ, ಚೀನಾ ಮತ್ತು ಬ್ರೆಜಿಲ್ ದೇಶಗಳ ಮೇಲೆ ದ್ವಿತೀಯ ನಿರ್ಬಂಧಗಳನ್ನು ವಿಧಿಸುವುದಾಗಿ ಅಧ್ಯಕ್ಷ ಟ್ರಂಪ್ ಹೇಳಿದರು ಎಂದು ರುಟ್ಟೆ ಹೇಳಿದ್ದಾರೆ.


