ಧಾರವಾಡ: ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ತಮ್ಮ ಕೆಲಸಗಳ ನಿಮಿತ್ತವಾಗಿ ದೆಹಲಿಗೆ ತೆರಳಲಿದ್ದಾರೆ. ಇದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರ ಸರ್ಕಾರದ ಕೆಲಸಗಳ ಸಂಬಂಧ ಕೇಂದ್ರ ಸಚಿವರ ಜೊತೆ ಮಾತನಾಡಬೇಕಾಗಿರುತ್ತದೆ ಅದಕ್ಕಾಗಿ ಹೋಗಿದ್ದಾರೆ. ಅದಕ್ಕೆ ವಿಶೇಷ ಬಣ್ಣ ಹಚ್ಚುವುದು ಬೇಡ ಎಂದು ಹೇಳಿದ್ರು.
ಇನ್ನು ಸಿಎಂ ಬದಲಾವಣೆ ಬಗ್ಗೆ ವಿರೋಧದ ಪಕ್ಷದವರು ಮೊದಲಿನಿಂದಲೂ ಹೇಳುತ್ತಾ ಬಂದಿದ್ದಾರೆ. 136 ಶಾಸಕರು ಗೆದ್ದಾಗಲೇ ಬಿಜೆಪಿಯವರು ಈ ಸರ್ಕಾರ ಮೂರು ತಿಂಗಳಲ್ಲಿ ಬೀಳುತ್ತೆ ಎಂದು ಹೇಳಿದ್ದರು. ಅವರು ಹೇಳುವುದು ಹೇಳುತ್ತಿರುತ್ತಾರೆ ಅವರಿಗೆ ಬೇರೆ ಕೆಲಸ ಇಲ್ಲ ಎಂದು ಟಾಂಗ್ ನೀಡಿದ್ರು.
ಸಿಎಂ ಬದಲಾವಣೆಯಾಗಲಿ ಮತ್ತೊಂದಾಗಲಿ ಅದನ್ನು ನಮ್ಮ ಹೈಕಮಾಂಡ್ ನೋಡಿಕೊಳ್ಳುತ್ತದೆ. ಸದ್ಯ ಅಂತ ಯಾವುದೇ ಚಿತ್ರಣಗಳು ಕೂಡ ಇಲ್ಲ. ಶಾಸಕರ ಒನ್ ಟು ಒನ್ ಸಭೆ ಇದ್ದೇ ಇರುತ್ತದೆ ಅದು ಪಕ್ಷದಲ್ಲಿ ನಿರಂತರವಾಗಿ ನಡೆಯುವ ಪ್ರಕ್ರಿಯೆಯಾಗಿದೆ. ಪ್ರತಿ 6 ತಿಂಗಳಿಗೊಮ್ಮೆ ಅಥವಾ ವರ್ಷಕ್ಕೆ ಒಂದು ಬಾರಿ ನಡೆಯುತ್ತಲೇ ಇರುತ್ತದೆ. ಇದು ನಮ್ಮ ಪಕ್ಷದ ಆಂತರಿಕ ವಿಚಾರವಾಗಿದೆ ಎಂದ್ರು..


