Wednesday, January 28, 2026
18.8 C
Bengaluru
Google search engine
LIVE
ಮನೆಆರೋಗ್ಯಇನ್ಮುಂದೆ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಬಿರಿಯಾನಿ, ಎಗ್ ರೈಸ್..!

ಇನ್ಮುಂದೆ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಬಿರಿಯಾನಿ, ಎಗ್ ರೈಸ್..!

ಇನ್ಮುಂದೆ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟವಾಗಿ ಬಿರಿಯಾನಿ ಹಾಗೂ ಎಗ್​​​​ರೈಸ್ ಕೊಡಲಾಗುತ್ತೆ.. ಮಕ್ಕಳು ಇನ್ಮೇಲೆ ಶಾಲೆಯನ್ನೂ ಬಿರಿಯಾನಿ ಟೇಸ್ಟ್ ಮಾಡ್ಬೋದು, ಎಗ್​​​​ ರೈಸ್ ತಿನ್ನಬಹುದು. ಈ ಹೊಸ ನಿಯಮ ನಮ್ಮಲ್ಲಿ ಅಲ್ಲ, ಪಕ್ಕದ ಕೇರಳದಲ್ಲಿ..

ಕೇರಳ ಸರ್ಕಾರವು ರಾಜ್ಯದ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಊಟದಲ್ಲಿ ಪೌಷ್ಟಿಕತೆಯನ್ನು ಹೆಚ್ಚಿಸುವ ಉದ್ದೇಶದಿಂದ ಹೊಸ ಮೆನು ಸಿದ್ಧಪಡಿಸಿದೆ. ಈ ಹೊಸ ಮೆನುವಿನಲ್ಲಿ ಮೈಕ್ರೋಗ್ರೀನ್ಸ್, ಫ್ರೈಡ್ ರೈಸ್ ಮತ್ತು ಬಿರಿಯಾನಿಯಂತಹ ಆಹಾರಗಳನ್ನು ಸೇರಿಸಲಾಗಿದೆ. ತಜ್ಞರ ಸಮಿತಿಯ ವೈಜ್ಞಾನಿಕ ವಿಮರ್ಶೆಯ ಶಿಫಾರಸುಗಳ ಆಧಾರದ ಮೇಲೆ ಇದನ್ನು ಜಾರಿಗೆ ತರಲಾಗಿದೆ.

ಮೈಕ್ರೋಗ್ರೀನ್ಸ್: ಪೌಷ್ಟಿಕತೆಯಿಂದ ಕೂಡಿದ ಸಸ್ಯದ ಆಹಾರವನ್ನು ತಿಂಗಳಿಗೆ ಕನಿಷ್ಠ ಎರಡು ಬಾರಿ ಸಾಂಪ್ರದಾಯಿಕ ತರಕಾರಿಗಳ ಬದಲಿಗೆ ಬಳಸಲಾಗುವುದು.

ಫ್ರೈಡ್ ರೈಸ್ ಮತ್ತು ಬಿರಿಯಾನಿ: ಶಾಲೆಯಲ್ಲಿ ಒಂದು ದಿನ ವೆಜಿಟೇಬಲ್ ಫ್ರೈಡ್ ರೈಸ್, ಲೆಮನ್ ರೈಸ್ ಅಥವಾ ವೆಜಿಟೇಬಲ್ ಬಿರಿಯಾನಿಯನ್ನು ತಯಾರಿಸಿ ನೀಡಲಾಗುತ್ತದೆ.

ಪಪ್ಪು, ಕಾಳುಗಳು: ಹೆಸರು ಕಾಳು, ಹಸಿರು ಬಟಾಣಿಯಂತಹ ಕಾಳುಗಳನ್ನು ಪ್ರೋಟೀನ್ ಅಂಶವನ್ನು ಹೆಚ್ಚಿಸಲು ಆಗಾಗ್ಗೆ ಬಳಸಲಾಗುವುದು.

ಚಟ್ನಿ : ಪುದಿನ, ಶುಂಠಿ, ನೆಲ್ಲಿಕಾಯಿ, ಮತ್ತು ಕಚ್ಚಾ ಮಾವಿನಿಂದ ತಯಾರಿಸಿದ ವಿಶೇಷ ಚಟ್ನಿಯನ್ನು ಲೆಮನ್ ರೈಸ್, ವೆಜಿಟೇಬಲ್ ರೈಸ್ ಅಥವಾ ಬಿರಿಯಾನಿಯೊಂದಿಗೆ ಸರ್ವ್ ಮಾಡಲಾಗುವುದು, ಇದು ರುಚಿಯ ಜೊತೆಗೆ ಆರೋಗ್ಯ ಪ್ರಯೋಜನಗಳನ್ನೂ ನೀಡುತ್ತದೆ

ಸಾಂಪ್ರದಾಯಿಕ ಧಾನ್ಯಗಳು: ರಾಗಿ ಬಾಲ್ಸ್, ರಾಗಿ ಕೊಝುಕಟ್ಟ, ಕ್ಯಾರಟ್ ಪಾಯಸಂ, ಮತ್ತು ಇತರ ಧಾನ್ಯಗಳಿಂದ ತಯಾರಿಸಿದ ಪಾಯಸಂನಂತಹ ಖಾದ್ಯಗಳನ್ನು ಸೇರಿಸಲಾಗಿದೆ.

ಈ ಹೊಸ ಮೆನುವು ವಿದ್ಯಾರ್ಥಿಗಳಿಗೆ ಸಮತೋಲಿತ ಆಹಾರವನ್ನು ಒದಗಿಸುವ ಗುರಿಯನ್ನು ಹೊಂದಿದೆ. ಮೈಕ್ರೋಗ್ರೀನ್ಸ್‌ನಂತಹ ಸೂಪರ್‌ಫುಡ್‌ಗಳು ವಿಟಮಿನ್‌ಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿದ್ದು, ವಿದ್ಯಾರ್ಥಿಗಳ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತವೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments